ಗುತ್ತಿಗೆದಾರರಿಂದ ನಾನು ಒಂದು ರೂ ಪಡೆದಿಲ್ಲ, ಸಾಬೀತು ಪಡಿಸಿದರೆ ರಾಜಕೀಯಕ್ಕೆ ಗುಡ್​ಬೈ ಹೇಳುವೆ: ಸಿದ್ದರಾಮಯ್ಯ ಸವಾಲ್

ಗುತ್ತಿಗೆದಾರರಿಂದ ನಾನು ಒಂದು ರೂ ಪಡೆದಿಲ್ಲ, ಸಾಬೀತು ಪಡಿಸಿದರೆ ರಾಜಕೀಯಕ್ಕೆ ಗುಡ್​ಬೈ ಹೇಳುವೆ: ಸಿದ್ದರಾಮಯ್ಯ ಸವಾಲ್
ವಿಪಕ್ಷ ನಾಯಕ ಸಿದ್ದರಾಮಯ್ಯ

ಗುತ್ತಿಗೆದಾರರು ಶೇಕಡಾ 40ರಷ್ಟು ಕಮಿಷನ್ ನೀಡಬೇಕು. ನನ್ನ ಅವಧಿಯಲ್ಲಿ ಒಂದು ರೂಪಾಯಿ ಕಮಿಷನ್ ಪಡೆದಿಲ್ಲ. ಕಮಿಷನ್ ಪಡೆದಿರುವುದು ಸಾಬೀತುಪಡಿಸಿದರೆ ರಾಜೀನಾಮೆ ಕೊಡ್ತೇನೆ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

TV9kannada Web Team

| Edited By: sadhu srinath

Jan 21, 2022 | 2:00 PM

ಬೆಂಗಳೂರು: ಮುಖ್ಯಮಂತ್ರಿಯಾಗಿ ನನ್ನ ಅವಧಿಯಲ್ಲಿ ನಿರಪೇಕ್ಷಣಾ ಪತ್ರಕ್ಕಾಗಿ (ಎನ್‌ಒಸಿ) ಗುತ್ತಿಗೆದಾರರು ಒಂದು ರೂಪಾಯಿ ಕೊಟ್ಟಿಲ್ಲ; ಯಾರೂ ಕೂಡ ಹಣವನ್ನು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದಾರೆಂದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಗುತ್ತಿಗೆದಾರರು ಶೇಕಡಾ 40ರಷ್ಟು ಕಮಿಷನ್ ನೀಡಬೇಕು. ನನ್ನ ಅವಧಿಯಲ್ಲಿ ಒಂದು ರೂಪಾಯಿ ಕಮಿಷನ್ ಪಡೆದಿಲ್ಲ. ಕಮಿಷನ್ ಪಡೆದಿರುವುದು ಸಾಬೀತುಪಡಿಸಿದರೆ ರಾಜೀನಾಮೆ ಕೊಡ್ತೇನೆ. ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ರಾಜಕೀಯ ಪಕ್ಷಕ್ಕೆ ಸಿದ್ಧಾತ ಇರಬೇಕು, ಸಿದ್ಧಾಂತ ಇಲ್ಲ ಅಂದ್ರೆ ಅದು ರಾಜಕೀಯ ಪಕ್ಷ ಅಲ್ಲ. ಬಿಜೆಪಿ, ಜೆಡಿಎಸ್ ಗೆ ಸಿದ್ಧಾಂತ ಇಲ್ಲ. ಜೆಡಿಎಸ್ ಗೆ ಯಾವ ಸಿದ್ಧಾಂತವೂ ಇಲ್ಲ, ಅದೊಂದು ಅವಕಾಶವಾದಿ ಪಕ್ಷ. ಸಿದ್ಧಾಂತದ ಮೇಲೆ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಆರ್ ಎಸ್ ಎಸ್ ಮುಖವಾಡ ಬಿಜೆಪಿ, ಮತಾಂಧತೆ ಹುಟ್ಟು ಹಾಕಿ ಹಿಡನ್ ಅಜೆಂಡಾವನ್ನ ಜಾರಿಮಾಡಿಕೊಳ್ಳುವ ಪಕ್ಷ ಬಿಜೆಪಿ. ಎಲ್ಲ ಧರ್ಮ, ಜಾತಿ, ಭಾಷೆಯ ಜನರನ್ನ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್. ಹಿಂದೂ ರಾಷ್ಟ್ರ ಮಾಡಬೇಕು ಅನ್ನೋದು ಬಿಜೆಪಿ ಹಿಡನ್ ಅಜೆಂಡಾ. ಬಹುಸಂಸ್ಕೃತಿ ಇರುವ ದೇಶದಲ್ಲಿ ಒಂದು ಧರ್ಮದ ರಾಷ್ಟ್ರವಾಗಿ ಮಾಡಲು ಆಗುವುದಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್​ನವರು ಅತ್ಲಾಗಾದ್ರೆ ಬಿಜೆಪಿ ಜೊತೆ ಹೋಗ್ತಾರೆ, ಇತ್ಲಾಗಾದ್ರೆ ಈ ಕಡೆ ಬರ್ತಾರೆ: ಮೋದಿಗೆ ಮಾನ ಮರ್ಯಾದೆನೇ ಇಲ್ಲಾ. ಕೃಷಿ ಕಾಯ್ದೆ ವಾಪಾಸ್ ತೆಗೆದುಕೊಂಡಿದ್ದೇ ವಿಕ್ಟರಿ ಅಂದುಕೊಂಡಿದ್ದಾರೆ. ಅದು ರೈತರ ವಿಕ್ಟರಿ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಬಿಜೆಪಿಯವರಿಗೆ ಜೆಡಿಎಸ್ ಬಾಲಂಗೋಚಿ. ದಯವಿಟ್ಟು ಅವ್ರನ್ನ ತುಮಕೂರಿನಿಂದ ಓಡಿಸ್ಬಿಡ್ರಪ್ಪಾ. ಜಾತಿ ಹೆಸರೇಳಿಕೊಂಡು ರಾಜಕಾರಣ ಮಾಡ್ತಾರೆ. ಅತ್ಲಾಗಾದ್ರೆ ಬಿಜೆಪಿ ಜೊತೆ ಹೋಗ್ತಾರೆ. ಇತ್ಲಾಗಾದ್ರೆ ಈ ಕಡೆ ಬರ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ದೇಶ, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಸಂವಿಧಾನ ಉಳಿಯುತ್ತೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 8 ವರ್ಷಗಳಾಗಿದೆ, ಯಾವ ವರ್ಗವನ್ನಾದರೂ ತೃಪ್ತಿಪಡಿಸುವ ಕೆಲಸವಾಗಿದೆಯಾ? ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆಯಾ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದಲ್ಲಿ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಈಗ 135 ಲಕ್ಷ 78 ಸಾವಿರ ಕೋಟಿಯಷ್ಟು ಸಾಲ ಮಾಡಿದ್ದಾರೆ. ಮೋದಿ ಸರ್ಕಾರ ಬಂದ ಬಳಿಕ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಇದು ನರೇಂದ್ರ ಮೋದಿ ಮಾಡಿರುವ ಸರ್ಕಾರವೆಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.

Follow us on

Related Stories

Most Read Stories

Click on your DTH Provider to Add TV9 Kannada