ಸಿದ್ಧರಾಮ ದೇವರ ಉತ್ಸವಕ್ಕೆ ಹೋಗುತ್ತೇನೆ, ಆದರೆ ಸಿದ್ಧರಾಮೋತ್ಸವಕ್ಕಲ್ಲ: ಸಿಎಂ ಬೊಮ್ಮಾಯಿ

ಮಂಗಳೂರಿನ ಸುರತ್ಕಲ್​ನಲ್ಲಿ ಫಾಜಿಲ್​ ಹತ್ಯೆಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಫಾಜಿಲ್​ ಮನೆಗೂ ಭೇಟಿ ನೀಡುತ್ತೇನೆ ಎಂದರು.

ಸಿದ್ಧರಾಮ ದೇವರ ಉತ್ಸವಕ್ಕೆ ಹೋಗುತ್ತೇನೆ, ಆದರೆ ಸಿದ್ಧರಾಮೋತ್ಸವಕ್ಕಲ್ಲ: ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Edited By:

Updated on: Aug 01, 2022 | 10:43 AM

ಬೆಂಗಳೂರು: ಸಿದ್ದರಾಮೋತ್ಸವ ಮಾಡಿಕೊಳ್ಳಲಿ ಅದಕ್ಕೆ ನಮ್ಮ ತಕರಾರಿಲ್ಲ. ಸಿದ್ದರಾಮೋತ್ಸವ (Siddaramautsava) ಅವರದ್ದು, ಅದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ನಾವು, ಸಿದ್ದರಾಮ ದೇವರನ್ನು ಪೂಜೆ ಮಾಡೋರು. ಹೀಗಾಗಿ ನಾನು ಇಂದು ದಾವಣಗೆರೆಗೆ ಸಿದ್ದರಾಮನ ದೇವರ ಉತ್ಸವಕ್ಕೆ ಹೋಗುದ್ದೇನೆ. ಆದರೆ ಆ ಸಿದ್ದರಾಮೋತ್ಸವಕ್ಕಲ್ಲ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಜನೋತ್ಸವ ಸಮಾವೇಶ ನಡೆಸುವ ಬಗ್ಗೆ ಪ್ರಾದೇಶಿಕ, ಜಿಲ್ಲಾ ಸಮಾವೇಶಗಳ‌ನ್ನು ನಡೆಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ನಮ್ಮ ಪಕ್ಷದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಯುವಕ ಫಾಜಿಲ್ ಹತ್ಯೆ ಪ್ರಕರಣ: ಪತ್ತೆಯಾಗಿದ್ದ ಕಾರು ಸ್ಥಳಾಂತರ; ಎಫ್​​​ಎಸ್​ಎಲ್​​​​ ತಜ್ಞರಿಂದ ಇಂದು ಕಾರು ತಪಾಸಣೆ

ಮುಂದಿನ ದಿನಗಳಲ್ಲಿ ಫಾಜಿಲ್, ಮಸೂದ್ ಮನೆಗೆ ಭೇಟಿ 

ಮಂಗಳೂರಿನ ಸುರತ್ಕಲ್​ನಲ್ಲಿ ಫಾಜಿಲ್​ ಹತ್ಯೆಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಫಾಜಿಲ್​ ಮನೆಗೂ ಭೇಟಿ ನೀಡುತ್ತೇನೆ. ಸರಣಿ ಹತ್ಯೆಗಳ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಕೇರಳ ಗಡಿ ಭಾಗದಲ್ಲಿ ಟೈಟ್​ ಸೆಕ್ಯೂರಿಟಿಗೆ ಸೂಚಿಸಲಾಗಿದೆ. ಆದಷ್ಟು ಶೀಘ್ರ ಆರೋಪಿಗಳನ್ನ ಬಂಧಿಸಲಾಗುತ್ತೆ ಎಂದರು. ಕೊಲೆಯಾದ ಫಾಜಿಲ್, ಮಸೂದ್ ಮನೆಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Praveen Nettar: ಬೆಳ್ಳಾರೆ ಉದ್ವಿಗ್ನ, ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ ಪೊಲೀಸರು ಓರ್ವನ ತಲೆಗೆ ಗಾಯ

ಆದಷ್ಟು ಬೇಗ ಪ್ರವೀಣ್​ ಕೇಸ್ NIAಗೆ ವರ್ಗಾವಣೆ

ಪ್ರವೀಣ್ ನೆಟ್ಡಾರು ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿ, ತನಿಖೆ ಪ್ರಗತಿ ಆಗುತ್ತಿದೆ. ಆದಷ್ಟು ಬೇಗನೇ ಕೊಲೆಗಡುಕರ ಪತ್ತೆ ಆಗುತ್ತೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡುತ್ತೇವೆ. ತಾಂತ್ರಿಕ ಮತ್ತು ಪೇಪರ್ ವರ್ಕ್ ನಡೀತಿದೆ. ಆದಷ್ಟು ಬೇಗ ಪ್ರಕರಣ ವರ್ಗಾವಣೆ ಮಾಡುತ್ತೇವೆ. ಈಗಾಗಲೇ ಎನ್ಐಎಗೆ ಕೇಸ್ ಬಗ್ಗೆ ಅನೌಪಚಾರಿಕವಾಗಿ ತಿಳಿಸಿದ್ದೇವೆ. ಕೆಲವು ಎನ್ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

Published On - 10:43 am, Mon, 1 August 22