ಸಿಇಟಿ ಅಂಕದ ಜತೆ ಪಿಯು ಅಂಕ ಸೇರಿಸದೆ ಅನ್ಯಾಯ: ಕೆಇಎ ವಿರುದ್ಧ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ
ಈ ವರ್ಷ ಸಿಇಟಿ ಜತೆ ಪಿಯು ಅಂಕವನ್ನು ಪರಿಗಣಿಸಲಾಗಿದೆ. ಅದೇ ರೀತಿ ನಮಗೂ ಸಿಇಟಿ, ಪಿಯು ಅಂಕ ಪರಿಗಣಿಸುವಂತೆ ಕೆಇಎ ಬೋರ್ಡ್ಗೆ ರಿಪೀಟರ್ ವಿದ್ಯಾರ್ಥಿಗಳು, ಪೋಷಕರಿಂದ ಆಗ್ರಹ ಮಾಡಲಾಯಿತು.
ಬೆಂಗಳೂರು: ಸಿಇಟಿ ಅಂಕದ ಜತೆ ಪಿಯು ಅಂಕ ಸೇರಿಸದೆ ಅನ್ಯಾಯ ಮಾಡಲಾಗಿದೆ ಎಂದು ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ ಮುಂದೆ ಸಿಇಟಿ (CET) ರಿಪೀಟರ್ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ ಮಾಡಿದರು. ಕಳೆದ ಬಾರಿ ಕೊವಿಡ್ ಹಿನ್ನೆಲೆ ಪಿಯು ಪರೀಕ್ಷೆ ರದ್ದಾಗಿತ್ತು. ಆಗ ಕೇವಲ ಸಿಇಟಿ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ವರ್ಷ ಸಿಇಟಿ ಜತೆ ಪಿಯು ಅಂಕವನ್ನು ಪರಿಗಣಿಸಲಾಗಿದೆ. ಅದೇ ರೀತಿ ನಮಗೂ ಸಿಇಟಿ, ಪಿಯು ಅಂಕ ಪರಿಗಣಿಸುವಂತೆ ಕೆಇಎ ಬೋರ್ಡ್ಗೆ ರಿಪೀಟರ್ ವಿದ್ಯಾರ್ಥಿಗಳು, ಪೋಷಕರಿಂದ ಆಗ್ರಹ ಮಾಡಲಾಯಿತು. ಕಳೆದ ಬಾರಿ 90 ಅಂಕ ಪಡೆದವರಿಗೂ 15000 ಒಳಗೆ ರ‍್ಯಾಂಕ್ ದೊರೆತಿತ್ತು. ಆದರೆ ಈ ಬಾರಿ 98 ಅಂಕ ಪಡೆದಿದ್ದರು ಸಹ 1 ಲಕ್ಷದ ಮೇಲೆ ರ‍್ಯಾಂಕ್ಕಿಂಗ್ ದೊರೆತಿದೆ. ಈ ಸಮಸ್ಯೆ ಬಗೆಹರಿಸುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದು, ಕೆಇಎ ಮುಂದೆ ಪೋಷಕರು ಹಾಗೂ ರಿಪೀಟರ್ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರು.
ಸಿಇಟಿ ಫಲಿತಾಂಶದಲ್ಲಿ ಈ ಬಾರಿ ಮತ್ತೆ ವಿದ್ಯಾರ್ಥಿನಿಯರದ್ದೇ ಮೇಲುಗೈ
2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶವನ್ನು ಸಚಿವ ಅಶ್ವತ್ಥ್ ನಾರಾಯಣ ಪ್ರಕಟಿಸಿದರು. ಈ ಬಾರಿಯ ಸಿಇಟಿಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಭಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ಗೆ 1,71,656 ರ್ಯಾಂಕ್, ಕೃಷಿ ಕೋರ್ಸ್ಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ. Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ.
ಇಂಜಿನಿಯರಿಂಗ್ ಕೋರ್ಸ್
ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅಪೂರ್ವ ತಂಡೋನ್ 97% ಪ್ರಥಮ ರ್ಯಾಂಕ್ ಪಡೆದಿದ್ದು, ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ವಿದ್ಯಾರ್ಥಿ ಸಿದ್ದಾರ್ಥ ಸಿಂಗ್ 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಅತ್ಮಕುರಿ ವೆಂಕಟ ತೃತಿಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ನ್ಯಾಚುರೋಪರಿ ಮತ್ತು ಯೋಗ
ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಹೃಷಿಕೇಶ್ 98% ಪ್ರಥಮ ರ್ಯಾಂಕ್ ಪಡೆದರೆ, ಉಡುಪಿಯ ಮಾದವ ಕೃಪ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿ ವ್ರಜೇಶ್, 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ನ ಕೃಷ್ಣ, 96% ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
B.sc ಅಗ್ರಿಕಲ್ಚರ್
HAL ಪಬ್ಲಿಕ್ ಸ್ಕೂಲ್ನ ಅರ್ಜುನ್, 93%, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ ಸುಮೀತ್, 92%, ತುಮಕೂರು ವಿದ್ಯಾನಿಕೇತನ ಪಿಯು ಕಾಲೇಜ್ ಸುದೀಪ್ 92%. ಸಿಇಟಿ ಪರೀಕ್ಷೆಯಲ್ಲಿ ಒಟ್ಟು 7 ಅಂಕ ಕೃಪಾಂಕ ನೀಡಲಾಗಿದೆ.
B.v.sc (ವೆಟರ್ನರಿ ಸೈನ್ಸ್)
ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು ಹೃಷಿಕೇಶ್, 98%, ಪ್ರಥಮ ರ್ಯಾಂಕ್ ಪಡೆದಿದ್ದು, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಮನೀಶ್, 97%, ದ್ವಿತೀಯ ರ್ಯಾಂಕ್ ಶುಭಾ ಕೌಶಿಕ್, 96%, ತೃತೀಯ ರ್ಯಾಂಕ್ ಪಡೆದಿದ್ದಾರೆ. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ.
Published On - 12:04 pm, Mon, 1 August 22