ಕೊವಿಡ್ ನಿಯಮ ಪಾಲಿಸದಿದ್ದರೆ ಚಿತ್ರಮಂದಿರ ಕ್ಲೋಸ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ
ಸ್ಟಾರ್ ಸಿನಿಮಾಗಳ ಬಿಡುಗಡೆ ಹಿನ್ನೆಲೆಯಲ್ಲಿ ನಿಯಮಗಳ ಉಲ್ಲಂಘನೆಯಾಗಬಾರದು. ಹೀಗಾಗಿ ಮಾಸ್ಕ್ ಧರಿಸಿ, ಕೊವಿಡ್ ನಿಯಮ ಪಾಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದ್ದಾರೆ.
ಬೆಂಗಳೂರು:ಚಿತ್ರಮಂದಿರಗಳಲ್ಲಿ ಕೊವಿಡ್ ನಿಯಮ ಪಾಲನೆ ವಿಚಾರವಾಗಿ ಬಿಬಿಎಂಪಿ ವತಿಯಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ. ಮೊದಲೆರಡು ಬಾರಿ ನಿಯಮ ಪಾಲನೆಯ ಬಗ್ಗೆ ಎಚ್ಚರಿಸಲಾಗುವುದು. ಅದಾಗಿಯೂ ಕೊವಿಡ್ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಚಿತ್ರಮಂದಿರಗಳನ್ನು ಮುಚ್ಚಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಸೂಚನೆ ಮೇರೆಗೆ ಬಿಬಿಎಂಪಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಈಗಾಗಲೇ ಶೇಕಡಾ 100 ರಷ್ಟು ಚಿತ್ರಮಂದಿರ ತೆರವಿಗೆ ಅವಕಾಶ ಕಲ್ಪಿಸಿದೆ. ಆದರೆ ಸ್ಟಾರ್ ಸಿನಿಮಾಗಳ ಬಿಡುಗಡೆ ಹಿನ್ನೆಲೆಯಲ್ಲಿ ನಿಯಮಗಳ ಉಲ್ಲಂಘನೆಯಾಗಬಾರದು. ಹೀಗಾಗಿ ಮಾಸ್ಕ್ ಧರಿಸಿ, ಕೊವಿಡ್ ನಿಯಮ ಪಾಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಯಾರು ನಿಯಮಗಳ ವಿಚಾರದಲ್ಲಿ ಮೈ ಮರೆಯುವಂತಿಲ್ಲ. ತಪ್ಪಿದರೆ ಚಿತ್ರಮಂದಿರ ಮುಚ್ಚಲು ಅವಕಾಶ ಇದೆ. ಹೀಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಇದನ್ನೂ ಓದಿ: Salaga Movie: ‘ಸಲಗ’ ಚಿತ್ರದ ಫಸ್ಟ್ ಹಾಫ್ ರಿಪೋರ್ಟ್; ದುನಿಯಾ ವಿಜಯ್ ಸಿನಿಮಾದಲ್ಲಿ ಇಂಟರ್ವಲ್ ತನಕ ಏನುಂಟು ಏನಿಲ್ಲ?
ಅಕ್ಟೋಬರ್ 1ರಿಂದ ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ; ಷರತ್ತುಗಳು ಅನ್ವಯ