ಅಕ್ಟೋಬರ್ 1ರಿಂದ ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ; ಷರತ್ತುಗಳು ಅನ್ವಯ
ಕೊವಿಡ್ ಎರಡನೇ ಅಲೆ ಬಹುತೇಕ ಕಡಿಮೆ ಆಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ.
ಕೊವಿಡ್ ಎರಡನೇ ಅಲೆ ಬಹುತೇಕ ಕಡಿಮೆ ಆಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಚಿತ್ರಮಂದಿರಕ್ಕೆ ಬರುವವರು ಕೊವಿಡ್ ಒಂದು ಡೋಸ್ಪಡೆದಿರುವುದು ಕಡ್ಡಾಯವಾಗಿದೆ. ಈ ಬೆಳವಣಿಗೆಯಿಂದ ಸ್ಟಾರ್ ಸಿನಿಮಾಗಳು ರಿಲೀಸ್ಗೆ ರೆಡಿ ಆಗುತ್ತಿವೆ.
ಸರ್ಕಾರದ ಷರತ್ತುಗಳೇನು?
- ಥಿಯೇಟರ್ ಪ್ರವೇಶಕ್ಕೆ 1 ಲಸಿಕೆ ಕಡ್ಡಾಯ ಪಡೆದಿರಬೇಕು
- ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಕಡಿಮೆ ಇದ್ರೆ ಮಾತ್ರ ಚಿತ್ರಮಂದಿರ ಓಪನ್
- ಪಾಸಿಟಿವಿಟಿ ರೇಟ್ಶೇ .1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರ ಓಪನ್
- ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಾದರೆ ಶೇ.50ರಷ್ಟು ಸೀಟ್ ಭರ್ತಿಗೆ ಸೂಚನೆ
- ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್
- ಪಾಸಿಟಿವಿಟಿ ದರ ಹೆಚ್ಚಾದ ಜಿಲ್ಲೆಗಳಲ್ಲಿ ಚಿತ್ರಮಂದಿರ ಕ್ಲೋಸ್
- ಚಿತ್ರಮಂದಿರಕ್ಕೆ ಗರ್ಭಿಣಿಯರಿಗೆ, ಮಕ್ಕಳಿಗೆ ಅವಕಾಶವಿಲ್ಲ
ಇತ್ತೀಚೆಗೆ ನಡೆದಿತ್ತು ಸಭೆ
ಕೊರೊನಾ ಪ್ರಕರಣಗಳು ಇಳಿಮುಖ ಆದ ಬಳಿಕ ಎಲ್ಲ ಉದ್ಯಮಗಳು ಸಹಜಸ್ಥಿತಿಗೆ ಮರಳುತ್ತಿವೆ. ಆದರೆ ಚಿತ್ರೋದ್ಯಮ ಮಾತ್ರ ಸಂಕಷ್ಟದಲ್ಲೇ ಇದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ‘ಭಜರಂಗಿ 2’ ಚಿತ್ರದ ನಿರ್ಮಾಪಕ ಜಯಣ್ಣ, ಸಲಗ ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕೋಟಿಗೊಬ್ಬ 3 ಚಿತ್ರಕ್ಕೆ ಬಂಡವಾಳ ಹೂಡಿರುವ ಸೂರಪ್ಪ ಬಾಬು ಸೇರಿದಂತೆ ಹಲವರ ಜೊತೆ ಸಚಿವ ಸುಧಾಕರ್ ಸಭೆ ನಡೆಸಿದ್ದರು. ಇದಾದ ಬೆನ್ನಲ್ಲೇ ಹೌಸ್ಫುಲ್ಗೆ ಅವಕಾಶ ಸಿಕ್ಕಿದೆ.
ಸ್ಟಾರ್ ಸಿನಿಮಾಗಳು ಬರೋಕೆ ಸಜ್ಜು
ಸುದೀಪ್ ನಟನೆಯ ‘ಕೋಟಿಗೊಬ್ಬ 3’, ದುನಿಯಾ ವಿಜಯ್ ನಟನೆಯ ‘ಸಲಗ’, ಹಾಗೂ ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾಗಳು ಸದ್ಯ ಬಿಡುಗಡೆಗಾಗಿ ಕಾದಿವೆ. ಸರ್ಕಾರದಿಂದ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕರೆ ಈ ಸಿನಿಮಾಗಳು ಸರದಿ ಪ್ರಕಾರ ತೆರೆಗೆ ಬರಲಿವೆ. ಎರಡು ವಾರದ ಅಂತರದಲ್ಲಿ ಒಂದೊಂದು ಸ್ಟಾರ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅ.1ರಂದು ಈ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ಬಳಿಕ ಅ.14ರಂದು ‘ಕೋಟಿಗೊಬ್ಬ 3’ ಹಾಗೂ ಅ.29ಕ್ಕೆ ‘ಭಜರಂಗಿ 2’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಸದ್ಯ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ಕೆಲವು ಸಣ್ಣ ಬಜೆಟ್ನ ಸಿನಿಮಾಗಳು ತೆರೆಕಾಣುತ್ತಿವೆ. ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿಲ್ಲ. ಪರಭಾಷೆಯ ಕೆಲವು ಬಿಗ್ ಬಜೆಟ್ ಚಿತ್ರಗಳು ತೆರೆಕಂಡು ಕೈ ಸುಟ್ಟುಕೊಂಡಿವೆ. ಹೌಸ್ಫುಲ್ ಪ್ರದರ್ಶನದ ಅವಕಾಶದೊಂದಿಗೆ ಸ್ಟಾರ್ ಸಿನಿಮಾಗಳು ರಿಲೀಸ್ ಆದರೆ ಚಿತ್ರೋದ್ಯಮದ ವಹಿವಾಟಿನಲ್ಲಿ ಚೇತರಿಕೆ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಟಾಲಿವುಡ್ ನಾನಿ ಸಿನಿಮಾ ಸೆಟ್ ಸೇರಿಕೊಂಡ ದೀಕ್ಷಿತ್ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್ ಆಫರ್
Published On - 6:09 pm, Fri, 24 September 21