ವಿದ್ಯಾರ್ಥಿಗಳಿಗೆ ಕೆಲಸ ದೊರೆತು ಆದಾಯ ಹೆಚ್ಚಾದರೆ, ರಾಜ್ಯದ ತಲಾ ಆದಾಯ ಕೂಡ ಹೆಚ್ಚಾಗುತ್ತದೆ: ಸಿಎಂ ಬೊಮ್ಮಾಯಿ

| Updated By: preethi shettigar

Updated on: Mar 21, 2022 | 7:31 PM

ನಿಮ್ಮ ಮೊಬೈಲಲ್ಲಿ ಸರ್ಕಾರದ ಕೆಲಸ ತಿಳಿದುಕೊಳ್ಳಬೇಕು. ಗ್ರಾಮೀಣ ವಿಕಸನಕ್ಕೆ ಇಇಇ ಎಜುಕೇಶನ್, ಎಂಪ್ಲಾಯ್‌ಮಂಟ್, ಎಂಪವರ್ಮೆಂಟ್ ಆಗಬೇಕು ಎಂದು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕೆಲಸ ದೊರೆತು ಆದಾಯ ಹೆಚ್ಚಾದರೆ, ರಾಜ್ಯದ ತಲಾ ಆದಾಯ ಕೂಡ ಹೆಚ್ಚಾಗುತ್ತದೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ನಮ್ಮ ಮಕ್ಕಳಿಗೆ ವಿಜ್ಞಾನ, ಗಣಿತ, ಕನ್ನಡ, ಇಂಗ್ಲೀಷ್ ಬಗ್ಗೆ ಹೆಚ್ಚಿನ ಕಲಿಕೆ ಕೊಟ್ಟರೆ ದೊಡ್ಡ ಬದಲಾವಣೆಯಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂಬೈ, ಚೆನ್ನೈ, ದೆಹಲಿ ವಿದ್ಯಾರ್ಥಿಗಳಿಗೆ ಪೈಪೋಟಿ ಕೊಡಬೇಕು. ಬದುಕುವ ಜೀವನಶೈಲಿಯಲ್ಲಿ(Lifestyle) ಪೈಪೋಟಿ ಕೊಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್ ಎಂದು ಮಾಡಿದ್ದೇವೆ. ಮೊಬೈಲ್(Mobile) ಮೂಲಕವೇ ಸರ್ಕಾರದ ಎಲ್ಲಾ ಸೇವೆ ಪಡೆದುಕೊಳ್ಳಬಹುದು ನಿಮ್ಮ ಮೊಬೈಲಲ್ಲಿ ಸರ್ಕಾರದ ಕೆಲಸ ತಿಳಿದುಕೊಳ್ಳಬೇಕು. ಗ್ರಾಮೀಣ ವಿಕಸನಕ್ಕೆ ಇಇಇ ಎಜುಕೇಶನ್, ಎಂಪ್ಲಾಯ್‌ಮಂಟ್, ಎಂಪವರ್ಮೆಂಟ್ ಆಗಬೇಕು ಎಂದು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕೆಲಸ ದೊರೆತು ಆದಾಯ ಹೆಚ್ಚಾದರೆ, ರಾಜ್ಯದ ತಲಾ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಲೈಬ್ರರಿಯ ಸದ್ಭಳಕೆ ಆಗಬೇಕು. ಈ ಡಿಜಿ ಲೈಬ್ರರಿಯ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಿಡಿಓಗಳು ಲೈಬ್ರರಿಗಳ ಜವಾಬ್ದಾರಿ ತೆಗೆದುಕೊಳ್ಳಬೇಕು. ಇನ್ನೂ 340 ಲೈಬ್ರರಿಯನ್ನು ಡಿಜಿಟಲ್ ಲೈಬ್ರರಿ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇದಿಕೆಯಲ್ಲೆ 340 ಲೈಬ್ರರಿ ಡಿಜಿಟಲೀಕರಣ ಮಾಡಲು ಅನುಮೋದನೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಯಶಸ್ವಿಗೆ ದಾನಿಗಳು ಕಾರಣ: ಸಿಎಂ ಬೊಮ್ಮಾಯಿ

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ 2022 ಯಶಸ್ವಿಗೆ ಕಾರಣರಾದ ದಾನಿಗಳಿಗೆ ಧನ್ಯವಾದ. ಮಕ್ಕಳಿಗೆ ಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ವಿಧಾನಸೌಧದಲ್ಲಿ ನಡೆದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಒತ್ತು ನೀಡಲಾಗಿದೆ. ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಈ ಬಗ್ಗೆ ಒತ್ತು ನೀಡಿದ್ದಾರೆ. ಇದು ಭವಿಷ್ಯದ ಬದಲಾವಣೆ ಸಂಕೇತವೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಮನುಷ್ಯ ವಿಕಾಸವಾದ್ರೆ ಸಮಾಜ ಹಾಗೂ ದೇಶ ವಿಕಸನವಾಗುತ್ತದೆ. ವ್ಯಕ್ತಿ ಸಂಘಜೀವಿ, ಒಂಟಿಯಾಗಿ ಜೀವನ ಮಾಡೋದಕ್ಕೆ ಸಾಧ್ಯವಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಜ್ಞಾನ ಬೆಳೆದಿದೆ. ಅಕ್ಷರ ಜ್ಞಾನದಿಂದ ವಿಜ್ಞಾನ ಆಯಿತು. ವಿಜ್ಞಾನದಿಂದ ತಂತ್ರಜ್ಞಾನ ಆಯಿತು. ತಂತ್ರಜ್ಞಾನದಿಂದ ಡಿಜಿಟಲ್ ಜ್ಞಾನ ಆಯಿತು. ಮನುಷ್ಯ ವಿಕಸನ ಆದಂಗೆ ಜ್ಞಾನವು ವಿಕಸನ ಆಗಿದೆ. ತಳಹಂತದ ಜನಕ್ಕೆ ಇದನ್ನ ಬಳಕೆ ಮಾಡೋದಕ್ಕೆ ಕಷ್ಟ ಆಗ್ತಾ ಇತ್ತು. ಮೊಬೈಲ್ ಟೆಕ್ನಾಲಜಿ ಬಂದ ಮೇಲೆ ಡಿಜಿಟಲ್ ಟೆಕ್ನಾಲಜಿ ಮಾಹಿತಿ ಸಿಕ್ತಾ ಇದೆ. ಪ್ರತಿ ಗ್ರಾಮ ಪಂಚಾಯತ್ ಲೈಬ್ರರಿಯಲ್ಲಿ ಈ ಡಿಜಿಟಲ್ ಜ್ಞಾನ ಸಿಗಬೇಕು. ರಷ್ಯಾ‌ ಉಕ್ರೇನ್ ಯುದ್ಧವನ್ನು ನಾವು ಮೊಬೈಲ್​ನಲ್ಲಿನೋಡ್ತಾ ಇದ್ದೀವಿ. ಡಿಜಿಟಲ್ ಜ್ಞಾನದಲ್ಲಿ ಒಳ್ಳೇಯದನ್ನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡ್ತೇನೆ – ಶಾಸಕ M.P.ರೇಣುಕಾಚಾರ್ಯ

 

Published On - 7:18 pm, Mon, 21 March 22