Bengaluru News: ಟ್ರಾಫಿಕ್ ಸಮಸ್ಸೆ, ಆಕ್ಸಿಡೆಂಟ್ಗೂ ಕೂಡ ಕರೆ ಮಾಡಿ 112ಗೆ
ಕಳ್ಳತನ, ಕೊಲೆ, ಕಿರುಕುಳ ಹಾಗೂ ರೋಡ್ ರೋಮಿಯೋಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧ ಕೃತ್ಯಗಳಿಗೆ 112 ಕರೆ ಮಾಡುವ ಅವಕಾಶ ಇತ್ತು. ಇದೀಗ ಟ್ರಾಫಿಕ್ ಸಮಸ್ಸೆಗಳಿಗೂ 112ಗೆ ಕರೆ ಮಾಡಿ.
ಬೆಂಗಳೂರು: ಇದುವರೆಗೆ ಕಳ್ಳತನ, ಕೊಲೆ, ಕಿರುಕುಳ ಹಾಗೂ ರೋಡ್ ರೋಮಿಯೋಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧ (Crime) ಕೃತ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಅವಕಾಶ ಇತ್ತು. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ (Traffic Problem) ಸಹ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾಗಿದೆ. ಹೌದು ಟ್ರಾಫಿಕ್ಜಾಮ್, ಒನ್ವೇ ಡ್ರೈವಿಂಗ್, ನೋ ಪಾರ್ಕಿಂಗ್ ಹಾಗೂ ಸಿಗ್ನಲ್ಗಳಲ್ಲಿ ಏನೇ ಗಲಾಟೆಗಳಾದರು 112ಗೆ ಕರೆ ಮಾಡಿ ತಿಳಿಸಬಹುದು.
ಸಭೆಯಲ್ಲಿ ನಾಗರಿಕರೊಬ್ಬರು ಸೂಚಿಸಿದಂತೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ೧೧೨ ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿಗಳು (cobra) ನಿರ್ವಹಿಸಲಿದ್ದಾರೆ.#Namma112 #MasikaJanasamparkadivasa https://t.co/OGikjJZrIX pic.twitter.com/9ACdYux1ed
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) July 21, 2023
ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ‘ಕೋಬ್ರಾ’ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಾರೆ. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bengaluru News: ವಾಹನ ಚಾಲಕರೇ ಎಚ್ಚರ! ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್
ಇತ್ತೀಚಿಗೆ ಮಲ್ಲೇಶ್ವರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾಗರಿಕರೊಬ್ಬರು ಸೂಚಿಸಿದಂತೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ 112 ಸೌಲಭ್ಯ ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರ ವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿ (ಕೋಬ್ರಾ) ನಿರ್ವಹಿಸಲಿದ್ದಾರೆ. ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 am, Sat, 22 July 23