ಬೆಂಗಳೂರು: ಬೆಂಗಳೂರು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ವಿದ್ಯಾರ್ಥಿ, 27 ವರ್ಷ ವಯಸ್ಸಿನ ಆಯುಷ್ ಗುಪ್ತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ಐಐಎಂ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ನೀಡಿದೆ. ಮೃತ ವಿದ್ಯಾರ್ಥಿಯು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ಅಧ್ಯಯನ ಮಾಡುತ್ತಿದ್ದರು. ಆಯುಷ್ ಗುಪ್ತಾ ಸಾವಿನಿಂದ ಬಹಳ ಬೇಸರವಾಗಿದೆ ಎಂದು ಐಐಎಂ ಭಾನುವಾರ ಟ್ವೀಟ್ ಮಾಡಿತ್ತು.
ಎರಡನೇ ವರ್ಷದ ಪಿಜಿಪಿ ವಿದ್ಯಾರ್ಥಿ ಆಯುಷ್ ಗುಪ್ತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಹಳೆ ವಿದ್ಯಾರ್ಥಿಗಳ ಸಮಿತಿಯ ಹಿರಿಯ ಸಂಯೋಜಕರೂ ಆಗಿದ್ದರು ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಭಾನುವಾರ ಟ್ವೀಟ್ ಮಾಡಿತ್ತು. ಸೋಮವಾರದ ತರಗತಿಗಳನ್ನು ರದ್ದುಪಡಿಸಿದ್ದಲ್ಲದೆ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿತ್ತು.
ಫೇರಿಂಗ್ ಕ್ಯಾಪಿಟಲ್‌ನಲ್ಲಿ ಅವರ ಬೇಸಿಗೆಯ ಇಂಟರ್ನ್ ಆಗಿದ್ದ ಆಯುಷ್ ಗುಪ್ತಾ, ಇನ್‌ಸ್ಟಿಟ್ಯೂಟ್‌ನ ಹಳೆಯ ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಅವರು 2017 ರಲ್ಲಿ ಬಿಐಟಿಎಸ್ ಪಿಲಾನಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಉಲ್ಲೇಖಿಸಿದೆ.
We are deeply saddened by the demise of Ayush Gupta, our second-year PGP student, who suffered a cardiac arrest, this afternoon. Ayush (27) was senior coordinator of the Student Alumni Committee of PGP.
1/3 pic.twitter.com/qTMyZdYvUX— IIM Bangalore (@iimb_official) July 23, 2023
ಇದನ್ನೂ ಓದಿ: Heart Attack: ಜ್ಯೂಸ್ ಕುಡಿಯುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದಾ? ಇಲ್ಲಿದೆ ಮಾಹಿತಿ
ಆಯುಷ್ ಗುಪ್ತಾ ನಿಧನದ ಬಗ್ಗೆ ಲಿಂಕ್ಡ್ಇನ್ನಲ್ಲಿಯೂ ಐಐಎಂ ಸಂದೇಶ ಪ್ರಕಟಿಸಿದ್ದು, ಅನೇಕ ಮಂದಿ ಅವರ ಜತೆಗಿನ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ