ಬೆಂಗಳೂರು: ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್ ವೆಡ್ಡಿಂಗ್ ವೈರ್‌ನ (Wedding Technology Platform, Wedding Wire) 2022 ರ ವಾರ್ಷಿಕ ವರದಿ ಪ್ರಕಾರ ಅತಿ ಹೆಚ್ಚು ವಿವಾಹಗಳನ್ನು (Weddings) ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bengaluru) 2ನೇ ಸ್ಥಾನದಲ್ಲಿದೆ ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ ವರದಿ ಮಾಡಿದೆ. ದೆಹಲಿ (Delhi) 1ನೇ ಸ್ಥಾನದಲ್ಲಿದ್ದು, ಮುಂಬೈ (Mumbai) 3ನೇ ಸ್ಥಾನದಲ್ಲಿದೆ. ವರದಿ ಪ್ರಕಾರ 2022ರ ಡಿಸೆಂಬರ್ ತಿಂಗಳಲ್ಲಿ 21.5 ಪ್ರತಿಶತದಷ್ಟು ವಿವಾಹವಾದರೇ, ಫೆಬ್ರವರಿಯಲ್ಲಿ 15.49 ರಷ್ಟು ವಿವಾಹಗಳಾಗಿವೆ. ವರದಿ ಪ್ರಕಾರ ಹೆಚ್ಚಿನ ವಿವಾಹಗಳು ರವಿವಾರ ನಡೆದಿದ್ದು, ಡಿಸೆಂಬರ್ 2 2022 ರಂದು ಅತಿ ಹೆಚ್ಚು ವಿವಾಹಗಳು ನಡೆದಿವೆ.
ನಂತರದ ಸ್ಥಾನದಲ್ಲಿ ಉದಯಪುರ, ಗೋವಾ ಮತ್ತು ಜೈಪುರ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದೆ. ಅಂತರಾಷ್ಟ್ರೀಯ ನಗರಗಳ ಪೈಕಿ, ಸಿಂಗಾಪುರ, ಅಬುಧಾಬಿ ಮತ್ತು ನ್ಯೂಯಾರ್ಕ್ ಭಾರತೀಯರು ನೆಚ್ಚಿನ ವಿವಾಹ ದೇಶಗಳಾಗಿವೆ. ಇನ್ನು 2022 ರಲ್ಲಿ ವಿವಾಹ ಛಾಯಾಗ್ರಾಹಕರು, ಮೇಕಪ್ ಕಲಾವಿದರು ಮತ್ತು ಚೌಟರಿಗಳಿಗೆ ಹೆಚ್ಚಿನ ಬೇಡಿಕೆಯಿತ್ತು.
ಈತಮಧ್ಯೆ, ತ್ರಿಪುರಾ, ಸಿಕ್ಕಿಂ ಮತ್ತು ಇಂಫಾಲ್ನಗರಗಳಲ್ಲಿ ಕಡಿಮೆ ವಿವಾಹಗಳಾಗಿವೆ. ಲಕ್ನೋ, ಜೈಪುರ್ ಮತ್ತು ಗುರ್ಗಾಂವ್ 2 ನಗರಗಳು ತಲಾ 3ನೇ ಸ್ಥಾನ ಹಂಚಿಕೊಂಡಿವೆ. 2020 ಮತ್ತು 2021ರಲ್ಲಿ ಕರೋನಾ ಸಮಯದಲ್ಲಿ ವಿವಾಹ ಸಮಾರಂಭಗಳು ಸಂಕ್ಷಿಪ್ತವಾಗಿ ಅಥವಾ ನಿಶ್ಚಯವಾಗಿ ರದ್ದಾಗಿದ್ದವು ಆದರೆ 2022ರಲ್ಲಿ ಕೊರೊನಾ ನಿಯಮ ಸಡಲಿಕೆಯಾದ ಕಾರಣ ಅತಿ ಹೆಚ್ಚು ಮದುವೆಗಳಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 am, Fri, 20 January 23