Potholes: ಬೆಂಗಳೂರಿನಲ್ಲಿ ಕಡಿಮೆಯಾಗದ ರಸ್ತೆ ಗುಂಡಿ ಅವಾಂತರ: ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೇಸ್ ದಾಖಲು
ಬೆಂಗಳೂರಿನಲ್ಲಿ ಗುಂಡಿ ಗಂಡಾಂತರವನ್ನು ತಪ್ಪಿಸೋಕೆ, ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಇತ್ತೀಚೆಗೆ ಚಾಲ್ತಿಗೆ ತಂದಿತ್ತು. ಈ ಆ್ಯಪ್ಗೆ ಪ್ರತಿದಿನ ಸಾರ್ವಜನಿಕರಿಂದ 200-300 ಕೇಸ್ಗಳು ದಾಖಲಾಗುತ್ತಿವೆ.
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ (Potholes) ಅವಾಂತರಗಳು ಕಡಿಮೆಯಾಗ್ತಿಲ್ಲ. ಈ ಯಮಸ್ವರೂಪಿ ಗುಂಡಿಗಳ ಸಂಖ್ಯೆಯನ್ನು ಪತ್ತೆ ಹಚ್ಚೋಕೆ ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೊರೆಹೋಗಿತ್ತು. ಇದೀಗಾ ಈ ಆ್ಯಪ್ನಲ್ಲಿ ಬಂದಿರೋ ದೂರುಗಳು ಬಿಬಿಎಂಪಿ ಆಧಿಕಾರಿಗಳು ಮಾನ ಹಾರಾಜು ಹಾಕುತ್ತಿವೆ. ಅಲ್ಲದೇ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ಗೆ ಬರೋಬ್ಬರಿ 40 ಸಾವಿರದಷ್ಟು ದೂರುಗಳು ಹರಿದುಬಂದಿದ್ದು, ಗುಂಡಿ ಮುಚ್ಚಿದ್ದೀವಿ ಅಂತ ಶಬಾಷ್ ಗಿರಿ ತಟ್ಟಿಕೊಳುತ್ತಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಹಠಾತ್ ಶಾಕ್ ಕೊಟ್ಟಂತಗಾಗಿದೆ.
ಬೆಂಗಳೂರಿನಲ್ಲಿ ಗುಂಡಿ ಗಂಡಾಂತರವನ್ನು ತಪ್ಪಿಸೋಕೆ, ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಇತ್ತೀಚೆಗೆ ಚಾಲ್ತಿಗೆ ತಂದಿತ್ತು. ಈ ಆ್ಯಪ್ಗೆ ಪ್ರತಿದಿನ ಸಾರ್ವಜನಿಕರಿಂದ 200-300 ಕೇಸ್ಗಳು ದಾಖಲಾಗುತ್ತಿವೆ. ಸದ್ಯ ಈ ಆ್ಯಪ್ನಲ್ಲಿ 40 ಸಾವಿರ ಗುಂಡಿಗಳಿರುವ ದೂರುಗಳು ಬಂದಿದ್ದು, ಇಷ್ಟು ದಿನ ಬಿಬಿಎಂಪಿ ಅಧಿಕಾರಿಗಳು ಗುಂಡಿ ಮುಚ್ಚುತ್ತೀವಿ ಅಂತ ಸುಳ್ಳು ಹೇಳಿಕೊಂಡು ದಿನ ದೂಡಿದ್ರ ಎನ್ನುವ ಅನುಮಾನ ಶುರುವಾಗಿದೆ. ಅಂದಹಾಗೇ ಈ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಲಾಂಚ್ ಆಗಿ ಒಂದು ವರ್ಷ ಕಳೆಯುತ್ತ ಬಂದಿದ್ದು, ಜನವರಿ 18 ನೇ ತಾರೀಖಿನವರೆಗೂ ಬರೊಬ್ಬರಿ 40,803 ದೂರು ದಾಖಲಾಗಿವೆ.
ಇದನ್ನೂ ಓದಿ: ಗುಜರಿ ನೀತಿ ಅನುಮೋದನೆಗೆ ಸರ್ಕಾರ ತೀರ್ಮಾನ: ಇನ್ಮುಂದೆ ಬೆಂಗಳೂರಲ್ಲಿ ಹಳೆ ವಾಹನಗಳ ಸಂಚಾರಕ್ಕೆ ಬ್ರೇಕ್
ಇನ್ನು ಫಿಕ್ಸ್ ಮೈ ಆ್ಯಪ್ ಜನರು ತಮ್ಮ ಮನೆಯ ಮುಂದಿರುವ ಗುಂಡಿಗಳು, ಅಕ್ಕಪಕ್ಕದ ರಸ್ತೆಗಳಲ್ಲಿರುವ ಗುಂಡಿಗಳು, ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನ ಛಲ ಬಿಡದಂತೆ ತ್ರಿವಿಕ್ರಮನಂತೆ ಸಾಲು ಸಾಲು ದೂರುಗಳನ್ನು ದಾಖಲಿಸುತ್ತಿದ್ದಾರೆ. ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಡಾಂಬಾರ್ ಹಾಕಿದ್ದೀವಿ, ಗುಂಡಿಮುಚ್ಚಿದ್ದೀವಿ ಅಂತ ತೇಪೆ ಹಚ್ಚುವ ಕೆಲಸ ಮಾಡ್ತಿದ್ದು, ಪ್ರತಿದಿನ ರಸ್ತೆ ಗುಂಡಿಗಳಿಗೆ ಬಿದ್ದು ಗಾಯ ಮಾಡಿಕೊಂಡು ಬಿಬಿಎಂಪಿ ಅಧಿಕಾರಿಗಳ ವಿರುದ್ದ ಸಾರ್ವಜನಿಕರು, ವಾಹನ ಸಾವಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ: Bangalore Power Cut: ಜ.20ರ ವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ಇಲ್ಲಿದೆ ಏರಿಯಾಗಳ ಪಟ್ಟಿ
ಇನ್ನು, ಕುರಿತಾಗಿ ಬಿಬಿಎಂಪಿ ಪ್ರಧಾನ ಅಭಿಯಂತರರಾದ ಪ್ರಹ್ಲದ್ ಅವರನ್ನ ಪ್ರಶ್ನಿಸಿದ್ದಕ್ಕೆ ಆ್ಯಪ್ನಲ್ಲಿ ದೂರುಗಳು ಸ್ವೀಕರಿಸಿ, ಬಿಬಿಎಂಪಿ ಗುಂಡಿಗಳನ್ನು ಮುಚ್ಚೋಕೆ ಮೂರು ದಿನ ಟೈಮ್ ಕೊಡ್ತೆವೆ. ಬಿಬಿಎಂಪಿಯ ಎಂಟು ಝೋನ್ಗಳಲ್ಲಿಯೂ ಗುಂಡಿ ಮುಚ್ಚೋ ಕೆಲಸ ಆಗ್ತಿದೆ. ಇನ್ನೂ ಮುಚ್ಚುವ ಪ್ರಯತ್ನದಲ್ಲಿದ್ದೇವೆ. ಮತ್ತೊಮ್ಮೆ ಎಲ್ಲಾ ಜೋನ್ಗಳ ಇಂಜಿನಿಯರ್ಗಳೊಂದಿಗೆ ಸಭೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ. ಸದ್ಯ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನ ಮುಚ್ಚಿದ್ದೇವೆ. ಸಾರ್ವಜನಿಕರಿಂದ ಎಲ್ಲಿಲಿ ದೂರುಗಳಿವೆಯೋ ಅವುಗಳನ್ನ ಮುಚ್ಚುವ ಕೆಲಸ ಮಾಡ್ತಿವಿ ಎಂದರು.
ಗುಂಡಿ ಮುಚ್ಚಿದ್ದೀವಿ ಅಂತ ಹೇಳುವ ಬಿಬಿಎಂಪಿ ಬೇಕಾಬಿಟ್ಟಿ ಕೆಲಸದ ಗುಣಮಟ್ಟ ಸ್ರ್ಟೀಟ್ ಮೈ ಆ್ಯಪ್ನಲ್ಲಿ ದಾಖಲಾಗುತ್ತಿದ್ದು, ಆದಷ್ಟು ಬೇಗ ನಗರದಲ್ಲಿರುವ ಗುಂಡಿಗಳನ್ನ ಮುಚ್ಚಿ ವಾಹನ ಸವಾರರ ಜೀವಪಾಯವನ್ನ ಕಾಪಾಡಬೇಕಿದೆ.
ವರದಿ: ಪೂರ್ಣಿಮಾ, ಟಿವಿ9, ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 pm, Thu, 19 January 23