ಗುಜರಿ ನೀತಿ ಅನುಮೋದನೆಗೆ ಸರ್ಕಾರ ತೀರ್ಮಾನ: ಇನ್ಮುಂದೆ ಬೆಂಗಳೂರಲ್ಲಿ ಹಳೆ ವಾಹನಗಳ ಸಂಚಾರಕ್ಕೆ ಬ್ರೇಕ್
ಕಮರ್ಷಿಯಲ್ ವಾಹನ 15 ವರ್ಷ ಮೇಲ್ಟಟ್ಟ, ಪರ್ಸನಲ್ ವಾಹನ 20 ವರ್ಷ ಮೇಲ್ಪಟ್ಟವುಗಳನ್ನ ಬ್ಯಾನ್ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.
ಬೆಂಗಳೂರು: ಬೆಂಗಳೂರು (Bengaluru) ಬೆಳೆದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಸದ್ಯ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್. ಟ್ರಾಫಿಕ್ನ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಮತ್ತೊಂದೆಡೆ ಹಳೆ ವಾಹನಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡ್ತಿದೆ. ಹೀಗಾಗಿ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ಗುಜರಿ ನೀತಿಯನ್ನು ಜಾರಿ ಮಾಡಲು ತೀರ್ಮಾನ ಮಾಡಿದೆ.
ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಇದ್ರೆ ಅಷ್ಟೇ ಓಡಾಟಕ್ಕೆ ಅವಕಾಶ
ಒಂದು ಕಡೆ ಸರ್ಕಾರ ಮಹಾನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಹಾಗೂ ಮಾಲಿನ್ಯ ಪ್ರಮಾಣ ಕಡಿಮೆ ಮಾಡೋದರಲ್ಲಿ ಪದೇ ಪದೇ ವಿಫಲವಾಗ್ತಿದೆ. ಇದೀಗ ಸ್ಕ್ರ್ಯಾಪಿಂಗ್ ಪಾಲಿಸಿ ಮಾಡೋ ಮೂಲಕ ಖಾಸಗಿ ಬಳಕೆ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ ಏರಲು ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ಗುಜರಿಗೆ ನೀತಿಗೆ ಅನುಮೋದನೆ ನೀಡಿದ್ದು, ತಿಂಗಳೊಳಗೆ ಅನುಷ್ಠಾನಕ್ಕೆ ಪ್ಲಾನ್ ರೂಪಿಸಿದೆ.
ಇದನ್ನೂ ಓದಿ: Lalbagh Flower Show: ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ತಯಾರಿ
ಗುಜರಿ ನೀತಿ ಅನುಷ್ಠಾನ ಅಂದರೆ ಏನು?
ಸದ್ಯ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಮೂರು ಕೋಟಿ ವಾಹನಗಳು ನೋಂದಾಣಿ ಆಗಿವೆ. ಇದ್ರಲ್ಲಿ 15 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟು ವಾಹನಗಳಾಗಿವೆ. ಹಳೆಯ ವಾಹನಗಳು ಹೆಚ್ಚು ಹೊಗೆ ಬಿಡುವುದರಿಂದ ಪರಿಸರ ಹಾಳಾಗುತ್ತಿದೆ. ಕಮರ್ಷಿಯಲ್ ವಾಹನ 15 ವರ್ಷ ಮೇಲ್ಟಟ್ಟ, ಪರ್ಸನಲ್ ವಾಹನ 20 ವರ್ಷ ಮೇಲ್ಪಟ್ಟವುಗಳನ್ನ ಬ್ಯಾನ್ ಮಾಡಲು ಸಿದ್ದತೆ ನಡೆಸಿದೆ. ಈ ಗುಜರಿ ನೀತಿ ಅನುಷ್ಠಾನ ಅಂದರೆ ಲಕ್ಷಾಂತರ ಗುಜರಿ ವಾಹನಗಳು ರಸ್ತೆಯಲ್ಲಿ ಓಡಾಡುಂತೆ ಇಲ್ಲ. 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ, 20 ವರ್ಷ ಮೇಲ್ಟಟ್ಟ ಪರ್ಸನಲ್ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಗುಜರಿ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: Bangalore Power Cut: ಜ.20ರ ವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ಇಲ್ಲಿದೆ ಏರಿಯಾಗಳ ಪಟ್ಟಿ
ಹಳೆ ವಾಹನಗಳನ್ನ ನಿಷೇಧಿಸಲು ಮುಂದು
ಬೆಂಗಳೂರು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದ್ರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ನಗರದ ಪರಿಸರವನ್ನ ಹಾಳು ಮಾಡುತ್ತಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯೂ ವಿಷಕಾರಿಯಾಗುವ ಆತಂಕ ಇದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು 15, ಹಾಗೂ20 ವರ್ಷ ಪೂರೈಸಿರುವ ಹಳೆ ವಾಹನಗಳನ್ನ ನಿಷೇಧಿಸಲು ಮುಂದಾಗಿದೆ. ಆದ್ರೆ ಸರ್ಕಾರದ ನಿರ್ಧಾರಕ್ಕೆ ಹಳೆ ವಾಹನ ಮಾಲೀಕರು ಎಷ್ಟರ ಮಟ್ಟಿಗೆ ಗುಜರಿಗೆ ಹಾಕೋಕೆ ಮುಂದೆ ಬರುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.