AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹಗಳನ್ನು ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್ ವೆಡ್ಡಿಂಗ್ ವೈರ್‌ನ 2022 ರ ವಾರ್ಷಿಕ ವರದಿ ಪ್ರಕಾರ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.

ವಿವಾಹಗಳನ್ನು ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jan 20, 2023 | 7:45 AM

Share

ಬೆಂಗಳೂರು: ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್ ವೆಡ್ಡಿಂಗ್ ವೈರ್‌ನ (Wedding Technology Platform, Wedding Wire) 2022 ರ ವಾರ್ಷಿಕ ವರದಿ ಪ್ರಕಾರ ಅತಿ ಹೆಚ್ಚು ವಿವಾಹಗಳನ್ನು (Weddings) ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bengaluru) 2ನೇ ಸ್ಥಾನದಲ್ಲಿದೆ ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್​ ವರದಿ ಮಾಡಿದೆ. ದೆಹಲಿ (Delhi) 1ನೇ ಸ್ಥಾನದಲ್ಲಿದ್ದು, ಮುಂಬೈ (Mumbai) 3ನೇ ಸ್ಥಾನದಲ್ಲಿದೆ. ವರದಿ ಪ್ರಕಾರ 2022ರ ಡಿಸೆಂಬರ್​ ತಿಂಗಳಲ್ಲಿ 21.5 ಪ್ರತಿಶತದಷ್ಟು ವಿವಾಹವಾದರೇ, ಫೆಬ್ರವರಿಯಲ್ಲಿ 15.49 ರಷ್ಟು ವಿವಾಹಗಳಾಗಿವೆ. ವರದಿ ಪ್ರಕಾರ ಹೆಚ್ಚಿನ ವಿವಾಹಗಳು ರವಿವಾರ ನಡೆದಿದ್ದು, ಡಿಸೆಂಬರ್ 2 2022 ರಂದು ಅತಿ ಹೆಚ್ಚು ವಿವಾಹಗಳು ನಡೆದಿವೆ.

ನಂತರದ ಸ್ಥಾನದಲ್ಲಿ ಉದಯಪುರ, ಗೋವಾ ಮತ್ತು ಜೈಪುರ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದೆ. ಅಂತರಾಷ್ಟ್ರೀಯ ನಗರಗಳ ಪೈಕಿ, ಸಿಂಗಾಪುರ, ಅಬುಧಾಬಿ ಮತ್ತು ನ್ಯೂಯಾರ್ಕ್​​​ ಭಾರತೀಯರು ನೆಚ್ಚಿನ ವಿವಾಹ ದೇಶಗಳಾಗಿವೆ. ಇನ್ನು 2022 ರಲ್ಲಿ ವಿವಾಹ ಛಾಯಾಗ್ರಾಹಕರು, ಮೇಕಪ್ ಕಲಾವಿದರು ಮತ್ತು ಚೌಟರಿಗಳಿಗೆ ಹೆಚ್ಚಿನ ಬೇಡಿಕೆಯಿತ್ತು.

ಈತಮಧ್ಯೆ, ತ್ರಿಪುರಾ, ಸಿಕ್ಕಿಂ ಮತ್ತು ಇಂಫಾಲ್​ನಗರಗಳಲ್ಲಿ ಕಡಿಮೆ ವಿವಾಹಗಳಾಗಿವೆ. ಲಕ್ನೋ, ಜೈಪುರ್ ಮತ್ತು ಗುರ್ಗಾಂವ್ 2 ನಗರಗಳು ತಲಾ 3ನೇ ಸ್ಥಾನ ಹಂಚಿಕೊಂಡಿವೆ. 2020 ಮತ್ತು 2021ರಲ್ಲಿ ಕರೋನಾ ಸಮಯದಲ್ಲಿ ವಿವಾಹ ಸಮಾರಂಭಗಳು ಸಂಕ್ಷಿಪ್ತವಾಗಿ ಅಥವಾ ನಿಶ್ಚಯವಾಗಿ ರದ್ದಾಗಿದ್ದವು ಆದರೆ 2022ರಲ್ಲಿ ಕೊರೊನಾ ನಿಯಮ ಸಡಲಿಕೆಯಾದ ಕಾರಣ ಅತಿ ಹೆಚ್ಚು ಮದುವೆಗಳಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Fri, 20 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ