AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಪಟಾಕಿ ಸಿಡಿದು ಮಕ್ಕಳಿಗೂ ಸೇರಿದಂತೆ ಒಟ್ಟು 9 ಮಂದಿ ಕಣ್ಣಿಗೆ ಹಾನಿ

ಪಟಾಕಿ ಸಿಡಿತದಿಂದ ಒಟ್ಟು ಒಂಬತ್ತು ಮಂದಿ ಕಣ್ಣಿಗೆ ಹಾನಿಯಾಗಿದೆ. ಈ ಪೈಕಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಕೆಲವರನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Bengaluru: ಪಟಾಕಿ ಸಿಡಿದು ಮಕ್ಕಳಿಗೂ ಸೇರಿದಂತೆ ಒಟ್ಟು 9 ಮಂದಿ ಕಣ್ಣಿಗೆ ಹಾನಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 05, 2021 | 9:20 AM

Share

ಬೆಂಗಳೂರು:  ಕಳೆದ ಎರಡು ದಿನದಿಂದ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಪಟಾಕಿ ಸಿಡಿದು ಹಲವರ ಕಣ್ಣಿಗೆ ಗಾಯಗಳಾಗಿವೆ. ಈ ಪೈಕಿ ಮಕ್ಕಳೇ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಒಟ್ಟು 9 ಮಂದಿ ಕಣ್ಣಿಗೆ ಹಾನಿಯಾಗಿದೆ. 9 ಜನರಲ್ಲಿ ಮಕ್ಕಳೆ ಹೆಚ್ಚಾಗಿದ್ದಾರೆ. ಕೆಲ ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟಾಕಿ ಬೆಲೆ ಏರಿಕೆ: ಈ ವರ್ಷ ಪಟಾಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಚ್ಚಾ ವಸ್ತು ಪೂರೈಕೆ ಕುಸಿತ ಹಿನ್ನೆಲೆಯಲ್ಲಿ, ಇಂಧನ ಬೆಲೆ ಇಳಿಕೆಯಾಗಿದ್ದರೂ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಪಟಾಕಿ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.30ರಷ್ಟು ಹೆಚ್ಚಳವಾಗಿದೆ. ವ್ಯಾಪಾರಸ್ಥರು ವ್ಯಾಪಾರವೇ ಇಲ್ಲ ಎಂದು ಹೇಳುತ್ತಿದ್ದಾರೆ. ಪರಿಸರ ಕಾಳಜಿಯಿಂದ ಹಸಿರು ಪಟಾಕಿಗಳ ಖರೀದಿಗೆ ಜನ ಮುಂದಾಗಿದ್ದಾರೆ.

ಈ ವರ್ಷ ಕಡ್ಡಾಯವಾಗಿ ಶೇ.18ರಷ್ಟು ಜಿಎಸ್ ಟಿ ಪಾವತಿಸಲೇಬೇಕು. ಈ ಕಾರಣದಿಂದ ವ್ಯಾಪಾರಸ್ಥರು ಇದರ ಸಂಪೂರ್ಣ ಹೊರೆಯನ್ನ ಗ್ರಾಹಕರ ಮೇಲೆ ಹಾಕಿದ್ದಾರೆ. ಕಳೆದ ವರ್ಷ ಕೊರೊನಾದಿಂದ ಬ್ಯುಸಿನೆಸ್ ಆಗಿರಲಿಲ್ಲ. ಈ ಬಾರಿ ಕೊರೊನಾ ಇಲ್ಲದಿದ್ದರೂ ಬೆಲೆ ಏರಿಕೆ ಆಗಿದೆ. ಈ ಕಾರಣದಿಂದಾಗಿ ಜನ ಪಟಾಕಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅದಾಗ್ಯೂ ಗ್ರಾಹಕರು ಬ್ರ್ಯಾಂಡ್ ಇರುವ ಪಟಾಕಿಗಳ ಮೇಲೆ ರಿಯಾಯಿತಿಯೇ ಕೊಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತೀ ಪಟಾಕಿಯ ದರದಲ್ಲೂ ಭಾರೀ ಏರಿಕೆಯಾಗಿದ್ದು, ಒಂದು ಡಿಲೆಕ್ಸ್ ಭೂ ಚಕ್ರದ ಬಾಕ್ಸ್ ಬೆಲೆ 250 ರಿಂದ 300 ರೂ. ಗೆ ಏರಿಕೆಯಾಗಿದೆ. ಕಳೆದ ವರ್ಷ ಒಂದು ಬಾಕ್ಸ್ ಫ್ಲವರ್ ಪಾಟ್ ಬೆಲೆ 400ರೂ ಇತ್ತು, ಈಗ 500 ರೂ. ಗೆ ಏರಿಕೆಯಾಗಿದ್ದು, ಟ್ವಿಂಕ್ಲಿಂಗ್ ಸ್ಟಾರ್ 250 ರಿಂದ 335 ರೂ.ಗೆ, ಸುರಸುರಬತ್ತಿ ದರ ಕಳೆದ ವರ್ಷ 80 ರೂ. ಈಗ 120ರೂ.ಗೆ ಏರಿಕೆಯಾಗಿದೆ. 25 ಐಟಂನ ಸ್ಟ್ಯಾಡರ್ಸ್ ಟೈಟಾನ್ ಪಟಾಕಿಯ ಬಾಕ್ಸ್ ಬೆಲೆ 1,200 ರಿಂದ 1,300ರೂ. ಗೆ ಏರಿಕೆಯಾಗಿದ್ದು, 60 ಐಟಂನ ಸ್ಟ್ಯಾಡರ್ಸ್ ಟೈಟಾನ್ ಪಟಾಕಿಯ ಬಾಕ್ಸ್ ಬೆಲೆ 1,300 ರಿಂದ 1,500ರೂ. ಗೆ ಏರಿಕೆಯಾಗಿದೆ. ರಾಕೆಟ್ ಒಂದು ಬಾಕ್ಸ್ ಗೆ 150 ರಿಂದ 200ಕ್ಕೆ ಹೆಚ್ಚಳವಾಗಿದ್ದು, ಟಂಡರ್ ಆಟಂ ಬಾಂಬ್ ಪ್ರತೀ ಬಾಕ್ಸ್ ಗೆ 100 ರಿಂದ 150ರೂ. ಗೆ ಏರಿಕೆಯಾಗಿದೆ. ಒಟ್ಟಾರೆ ಶೇ.30 ರಷ್ಟು ಪಟಾಕಿ ದರ ಏರಿಕೆಯಾಗಿದ್ದು, ಪ್ರತೀ ವರ್ಷ ಶೇ.10% ಹೆಚ್ಚಳವಾಗ್ತಿತ್ತು. ಆದರೆ ಈ ಭಾರೀ ಏಕಾಏಕಿ ಶೇ.30% ಹೆಚ್ಚಳವಾಗಿದೆ.

ಆದರೆ ಅಚ್ಚರಿಯೆಂಬಂತೆ ವ್ಯಾಪಾರಸ್ಥರು ಮಾತಿಗಿಂತ ಭಿನ್ನ ದೃಶ್ಯ ಪಟಾಕಿ ಮುಂಗಟ್ಟುಗಳ ಮುಂದೆ ಕಂಡುಬರುತ್ತಿದೆ. ನಗರದ ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಖರೀದಿ ಜೋರಾಗಿದ್ದು, ನಗರ ಭಾಗದ 60 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಟ್ಟು 366 ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಜನರು ಖರೀದಿಸುತ್ತಿರುವ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ:

ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ

Gold Price Today: ದೀಪಾವಳಿ ಹಬ್ಬದ ದಿನ ಚಿನ್ನ, ಬೆಳ್ಳಿ ಖರೀದಿಸುವ ಪ್ಲ್ಯಾನ್​ ಇದ್ದರೆ ಇಂದು ರೇಟ್​ ಎಷ್ಟಿದೆ ತಿಳಿಯಿರಿ

Published On - 8:21 am, Fri, 5 November 21

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ