ಬೆಂಗಳೂರು, ಆ.18: ಅಮ್ಮ, ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸರು(Chandra Layout Police) ಇಬ್ಬರು ರೌಡಿಶೀಟರ್ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಆ.13 ರಂದು ಇಬ್ಬರನ್ನು ಕಿಡ್ನಾಪ್ ಮಾಡಿದ್ದ ರೌಡಿಶೀಟರ್ಸ್ ಜೋಸೇಫ್ ಮತ್ತು ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ, ನಂತರ ಪರಿಚಯಸ್ಥ ಪ್ರತಾಪ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಇರಿಸಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ವರುಣ್ ಮತ್ತು ಆತನ ತಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ವರುಣ್ ಹಾಗೂ ಆತನ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹೀಗಾಗಿ ಈ ಆರೋಪಿಗಳು, ಕಳ್ಳತನ ಮಾಡಿರುವ 2 ಲಕ್ಷ ರೂ. ಹಣ ನೀಡುವಂತೆ ಅಮ್ಮ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಆದರೂ ಹಣ ನೀಡದಿದ್ದಕ್ಕೆ ಕೋಪಗೊಂಡ ಬಂಧಿತ ಆರೋಪಿಗಳು ತಾಯಿ, ಮಗನನ್ನು ಅಪಹರಿಸಿ, ಮಹಿಳೆಯೊಬ್ಬರ ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ಆರೋಪ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು
ಬಳಿಕ ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ನಂತರ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದರು. ಪ್ರಕರಣ ಸಂಬಂಧ ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನಾ (ರೌಡಿ ಶೀಟರ್), ಸೌಮ್ಯಾ, ಪ್ರತಾಪ್,
ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ