ಬೆಂಗಳೂರು, ಜೂ.06: ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಪುತ್ರಿಗೆ ಥಳಿಸಿ ಮನೆಯಿಂದ ಹೊರದಬ್ಬಿ ಬೀಗ ಹಾಕಿಕೊಂಡು ಪರಾರಿಯಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ(Madavara) ಗ್ರಾಮದಲ್ಲಿ ನಡೆದಿದೆ. ಈ ಹಿನ್ನಲೆ ತಾಯಿ ವಿಜಯಲಕ್ಷ್ಮೀ ಜೊತೆ ಮಗಳು ಮನೆ ಮುಂದೆ ಗೋಳಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೀಗ ಒಡೆದು ತಾಯಿ ಹಾಗೂ ಮಗಳನ್ನು ಮನೆಗೆ ಬಿಟ್ಟಿದ್ದಾರೆ. ಜೊತೆಗೆ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪತಿ ಪ್ರಸನ್ನಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಕುಡುಕ ಪತಿ ಪ್ರಸನ್ನ ವಿಪರೀತ ಕಾಟ ಕೊಡುತ್ತಿದ್ದಾನಂತೆ. ಇತ್ತ 18 ವರ್ಷದ ಮಗಳಿಗೂ ದಿನನಿತ್ಯ ತೊಂದರೆ ನೀಡುತ್ತಿದ್ದು, ಕಾಲೇಜಿಗೂ ಹೋಗದಂತೆ ತಡೆದು ಹಣ ಕೊಟ್ಟವರ ಜೊತೆ ಮಲಗುವಂತೆಯೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸಧ್ಯ ಪ್ರಕರಣ ದಾಖಲಿಸಿದ ಪೊಲೀಸರು, ಬೀಗ ಹೊಡೆದು ತಾಯಿ ಹಾಗೂ ಮಗಳನ್ನ ಮನೆಗೆ ಬಿಟ್ಟಿದ್ದಾರೆ. ತಂದೆಯೇ ಮಗಳ ಬದುಕಿಗೆ ವಿಲನ್ ಆಗಿದ್ದು, ನಿಜಕ್ಕೂ ದುರಂತ.
ಇದನ್ನೂ ಓದಿ:ಕೆಐಎಡಿಬಿಯಿಂದ ಪರಿಹಾರ ನೀಡದೆ ಕಿರುಕುಳ ಆರೋಪ; ವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ
ಕೋಲಾರ: ಮುಸುಕುಧಾರಿ ಚಡ್ಡಿ ಗ್ಯಾಂಗ್ನಿಂದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ನ ಸ್ವರ್ಣ ನಗರ್ನಲ್ಲಿ ನಡೆದಿದೆ. ಪ್ರಸನ್ನ ರೆಡ್ಡಿ ಎಂಬುವರ ಮನೆಯಲ್ಲಿ ಮನೆಯ ಕಿಟಕಿ ರಾಡ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಜೊತೆಗೆ ಚಡ್ಡಿ ಗ್ಯಾಂಗ್ ಕಳ್ಳರ ಚಲನವಲನ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಮನೆಯ ಮಾಲೀಕರು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Thu, 6 June 24