
ಬೆಂಗಳೂರು, ಆಗಸ್ಟ್ 07: ಸ್ವಾತಂತ್ರ್ಯ ದಿನಾಚರಣೆಗೆ (Independence Day) ದಿನಗಣನೆ ಶುರುವಾಗಿದೆ. ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾದಂತೆ ಬೆಂಗಳೂರಿನ ಲಾಲ್‌ಬಾಗ್‌ನ ಫಲಪುಷ್ಟ (Lalbagh Flower Show) ಪ್ರದರ್ಶನದತ್ತ ಎಲ್ಲರ ಚಿತ್ತ ಹರಿಯುತ್ತದೆ. ಸಸ್ಯಕಾಶಿಯಲ್ಲಿ ಪುಷ್ಪಲೋಕವೇ ಧರೆಗಿಳಿಯುತ್ತದೆ. ಇದೀಗ ಇಂದಿನಿಂದ (ಆ.07) ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಆರಂಭಗೊಳ್ಳಲಿದ್ದು, 12 ದಿನ ಪ್ರದರ್ಶನಗೊಳ್ಳಲಿದೆ.
ಬ್ರಿಟೀಷರ ಸೊಲ್ಲಡಗಿಸಿದ್ದ ವೀರವನಿತೆ ಕಿತ್ತೂರು ರಾಣಿ, ಆಂಗ್ಲರ ನಿದ್ದೆಗೆಡಿಸಿದ್ದ ವೀರ ಸಂಗೊಳ್ಳಿ ರಾಯಣ್ಣ ಇವರಿಬ್ಬರೂ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತ. ಸ್ವಾತಂತ್ರ್ಯೋತ್ಸವ ನಿಮಿತ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕಾ ಇಲಾಖೆ ನಡೆಸುವ 218ನೇ ಫಲಪುಷ್ಪ ಪ್ರದರ್ಶನದಲ್ಲಿ ಕಿತ್ತೂರಿನ ವೀರ ಪರಂಪರೆ ಅನಾವರಣಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಗಾಜಿನ ಮನೆಯಲ್ಲಿ ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ. 12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ಚೆನ್ನಮ್ಮ, ರಾಯಣ್ಣ ದರ್ಶನ
ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ರಾಣಿ ಚೆನ್ನಮ್ಮ ಮತ್ತು ರಾಯಣ್ಣನ ಪ್ರತಿಮೆಗಳು, ಕೋಟೆ ವಿನ್ಯಾಸದ ವರ್ಟಿಕಲ್ ಗಾರ್ಡನ್, ರಾಯಣ್ಣ ಹುತಾತ್ಮರಾಗುವ ಸನ್ನಿವೇಶದ ಪ್ರದರ್ಶನ, ಹೂ ಜೋಡಣೆ ನಡುವೆ ವೀರವನಿತೆಯರ ಕಲಾಕೃತಿಗಳು, 109 ಪ್ರಭೇದದ 30 ಲಕ್ಷಕ್ಕೂ ಹೆಚ್ಚು ಹೂಗಳನ್ನ ಬಳಸಲಾಗುತ್ತಿದ್ದು, ರಾಣಿ ಚೆನ್ನಮ್ಮನ ಐಕ್ಯಸ್ಮಾರಕದ ಪುಷ್ಪ ಮಾದರಿ ಈ ಪ್ರದರ್ಶನದಲ್ಲಿರಲಿದೆ.
ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6,30ರವರೆಗೆ ಟಿಕೆಟ್ ನೀಡಲಾಗುತ್ತದೆ. ಗಾಜಿನ ಮನೆಯ ಪ್ರವೇಶವು ರಾತ್ರಿ 7 ಗಂಟೆವರೆಗೆ ಮಾತ್ರ ಇರಲಿದೆ. ವಾರಾಂತ್ಯ 100 ರೂ ಹಾಗೂ 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 30 ರೂ. ಶುಲ್ಕವಿರುತ್ತೆ. ಸಮವಸ್ತ್ರದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ದಿನಗಳಲ್ಲಿ ಉಚಿತ ಪ್ರವೇಶ ನೀಡಲಾಗುತ್ತೆ.
ಇದನ್ನೂ ಓದಿ: ಆಗಸ್ಟ್ 7ರಿಂದ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ
ಅಷ್ಟೇ ಅಲ್ಲ, 136 ಸಿಸಿಟಿವಿ ಅಳವಡಿಕೆ ಜೊತೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗುತ್ತಿದೆ. ಫ್ಲವರ್ ಶೋಗೆ ಆಗಮಿಸುವವರಿಗೆ ಶಾಂತಿನಗರ ಟಿಟಿಎಂಸಿ, ಜೆಸಿ ರಸ್ತೆ ಬಿಬಿಎಂಪಿ ಕಾಂಪ್ಲೆಕ್ಸ್ ಹಾಗೂ ಅಲ್‌ಅಮೀನ್ ಕಾಲೇಜು ಸಮೀಪ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:02 am, Thu, 7 August 25