ಬೆಂಗಳೂರು ಸೆ.10: ಏಷ್ಯಾಕಪ್ ಚಾಂಪಿಯನ್‌ಶಿಪ್ ರಂಭವಾಗಿದ್ದು, ಇಂದು (ಸೆ.10) ಇಂಡಿಯಾ-ಪಾಕಿಸ್ತಾನ (India-Pakistan Match) ಹೈವೋಲ್ಟೆಜ್ ಮ್ಯಾಜ್ ಇದೆ. ಭಾರತದ ಗೆಲುವಿಗೆ ದೇಶಾದ್ಯಂತ ಪೂಜೆ-ಪುನಸ್ಕಾರ ನಡೆಯುತ್ತಿವೆ. ಇನ್ನು ರವಿವಾರ ವೀಕೆಂಡ್ ಆದ ಹಿನ್ನೆಲೆಯಲ್ಲಿ ಪಂದ್ಯದ ಜೊತೆ ವೀಕೆಂಡ್ ಎಂಜಾಯ್ ಮಾಡಲು ಕ್ರಿಕೆಟ್ (Cricket) ಪ್ರೇಮಿಗಳು ಪ್ಲಾನ್ ಮಾಡುತ್ತಿದ್ದಾರೆ. ಕ್ರಿಕೆಟ್ ಜೊತೆಗೆ ಮದ್ಯ ಪ್ರಿಯರು ಆಗಿದ್ದರೇ ಬೆಂಗಳೂರಿನ ಪಬ್ಗಳು (Pub) ಹಂತವರಿಗೆ ಸಖತ್ ಆಫರ್ ನೀಡಿವೆ.
ಹೌದು ನಗರದಲ್ಲಿನ ಪಬ್ಗಳು ಇಂಡಯಾ ಪಾಕ್ ಮ್ಯಾಚ್ ಎಂಜಾಯ್ ಮಾಡಲು ವಿಶೇಷ ಆಫರ್ ಫರ್ ನೀಡಿವೆ. ಮ್ಯಾಚ್ ಜೊತೆ ವೀಕೆಂಡ್ ಎಂಜಾಯ್ ಮಾಡಲು 1+1 ಎಣ್ಣೆ ಆಫರ್ ಕೊಟ್ಟಿವೆ. ಒಂದು ಬೀಯರ್ ತಗೆದಕೊಂಡರೇ ಮತ್ತೊಂದು ಬೀಯರ್ ಫ್ರೀ ಕೊಡಲಾಗಿದೆ. ಈ ಆಫರ್ ಮ್ಯಾಚ್ ಆರಂಭದಿಂದ ಕೊನೆಯವರೆಗೂ ಇರಲಿದೆ.
ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಭಾರತ ಗೆಲ್ಲುವಂತೆ ಹಲಸೂರಿನ ಕ್ರಿಕೆಟ್ ಟ್ರೆನಿಂಗ್ ಸೆಂಟರ್‌ನ ಮಕ್ಕಳು ಹಾಗೂ ಕೋಚ್ಗಳು ಘೋಷಣೆ ಹಾಕಿದ್ದಾರೆ. ಕಳೆದ ಬಾರಿ ಮಳೆಯಿಂದಾಗಿ ಶ್ರೀಲಂಕಾದಲ್ಲಿ ಮ್ಯಾಚ್ ರದ್ದಾಗಿತ್ತು. ಇವತ್ತು ರವಿವಾರ ಇದೆ ಮ್ಯಾಚ್ ನೋಡಲು ತುಂಬಾ ಕಾತುರರಾಗಿದ್ದೇವೆ. ಇವತ್ತು ನಡೆಯುವ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಗೆದ್ದೆ ಗೆಲ್ಲುತ್ತೆ ಎಂದು ಮಕ್ಕಳು ಹಾಗೂ ಕೋಚ್ ವಿಶ್ವಾಸ ವ್ಯಕ್ತಡಿಸಿದರು.
ಇದನ್ನೂ ಓದಿ: ಏಷ್ಯನ್ ಕ್ರೀಡಾಕೂಟಕ್ಕೆ ಟೀಮ್ ಇಂಡಿಯಾ ಅಭ್ಯಾಸ: ಬೆಂಗಳೂರಿಗೆ ಬರುತ್ತಿದೆ ರುತುರಾಜ್ ಪಡೆ
ಇನ್ನು ಮಂಗಳೂರಿನಲ್ಲಿ ಇಂದು ಭಾರತ-ಪಾಕಿಸ್ತಾನ ಹೈಓಲ್ಟೇಜ್ ಮ್ಯಾಚ್ ಭಾರಿ ನಿರೀಕ್ಷೆ ಮೂಡಿಸಿದೆ. ಗೆದ್ದು ಬಾ ಭಾರತ ಎಂದು ಮಂಗಳೂರಿನ ಯುವಕ-ಯುವತಿಯರು ಮತ್ತು ಆಟಗಾರರು ಹಾರೈಸಿದ್ದಾರೆ. ಹಾಗೇ ಧಾರವಾಡದಲ್ಲಿ ಭಾರತ ತಂಡಕ್ಕೆ ಶುಭವಾಗಲಿ ಎಂದು ನಗರದ ಅಶ್ವಿನಿ ಪಿಜಿ ವಿದ್ಯಾರ್ಥಿಗಳು, ಸಪ್ತಾಪುರ ಬಡಾವಣೆಯಲ್ಲಿರೋ ಪೇಯಿಂಗ್ ಗೆಸ್ಟ್ ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದರು.
ಹಾಗೇ ಬಾಗಲಕೋಟೆಯಲ್ಲಿ ಗೋವಾ ಮಹಿಳಾ ಸೀನಿಯರ್ ಕ್ರಿಕೆಟ್ ತಂಡದ ಆಟಗಾರ್ತಿಯರು ಶುಭ ಹಾರೈಸಿದರು. ಕರ್ನಾಟಕ ಮೂಲದ, ಗೋವಾ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತೇಜಸ್ವಿನಿ ದುರ್ಗದ ಭಾರತ ತಂಡಕ್ಕೆ ಶುಭಕೋರಿದರು. ಇನ್ನು ತೇಜಶ್ವಿನಿ ದುರ್ಗದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ಗ್ರಾಮದ ನಿವಾಸಿಯಾಗಿದ್ದು, ಸುಮಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿದ್ದಾರೆ. ಸದ್ಯ ತೇಜಸ್ವಿನಿ ಗೋವಾ ರಾಜ್ಯದ ಪರ ಆಟವಾಡುತ್ತಿದ್ದಾರೆ.
Published On - 1:34 pm, Sun, 10 September 23