ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳದ್ದು ಬೇರೆಯದ್ದೇ ರೀತಿಯ ಸಂಬಂಧವಿರುತ್ತದೆ. ಅಲ್ಲಿ ಇದ್ದರೆ ಅತೀ ಬಾಂಧವ್ಯ ಇರುತ್ತೆ, ಇಲ್ಲಾ… ಗಲಾಟೆ ಇದ್ದೇ ಇರುತ್ತೆ! ಸದ್ಯ ಈಗ ಸಚಿವ ಸೋಮಣ್ಣ ಮಗ ಹಾಗೂ ಸೃಜನ್ ಲೋಕೇಶ್ ಟೀಮ್ ನಡುವೆ ಗಲಾಟೆ ಅಗಿದೆ ಎನ್ನಲಾಗಿದೆ.
ಈಗ ಪುನೀತ್ ರಾಜ್ ಕುಮಾರ್ ಅವರ ನೆನಪಿಗಾಗಿ ಸೆಲೆಬ್ರಿಟಿಗಳೆಲ್ಲಾ ಸೇರಿ ಅಪ್ಪು ಕಪ್ ಅನ್ನೊ ಹೆಸರಿನ ಒಂದು ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜನೆ ಮಾಡಿದ್ದಾರೆ. ಇಲ್ಲಿ ಸೆಲೆಬ್ರೆಟಿಗಳು ಭಾಗಿಯಾಗಿ ಆಟವಾಡಲು ಎಂಟು ತಂಡಗಳು ಇವೆ. ಈ ಎಂಟು ತಂಡಗಳ ಪೈಕಿ ನಟ ಸೃಜನ್ ಲೋಕೇಶ್ ಅವ್ರ ತಂಡವೂ ಸಹ ಒಂದು. ಈ ಟೀಮ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಮುದ್ದಿನಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಅಭ್ಯಾಸ ನಡೆಸುತ್ತಾರೆ. ಸೋಮವಾರ ಅಭ್ಯಾಸ ನಡೆದ ನಂತ್ರ ಕ್ಲಬ್ ನಲ್ಲಿ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ವೇಳೆ ಜೋರಾಗಿ ಕೂಗಾಡಿದರು ಅನ್ನುವ ಕಾರಣಕ್ಕೆ ಅಲ್ಲಿಗೆ ಗೆಳೆಯರೊಂದಿಗೆ ಬಂದಿದ್ದ ಸಚಿವ ಸೋಮಣ್ಣ ಅವ್ರ ಮಗ ಅರುಣ್ ಸೋಮಣ್ಣ ಟೀಂ ಹಾಗೂ ಸೃಜನ್ ಟೀಮ್ ನಲ್ಲಿ ಇದ್ದ ವಿಕಾಸ್ ಮತ್ತು ಅನಿಲ್ ನಡುವೆ ಗಲಾಟೆ ಅಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. (ವರದಿ: ಪ್ರಜ್ವಲ್)
ಎಂದಿನಂತೆ ಸೋಮವಾರ ಸಹ ರಾತ್ರಿ ಪ್ರಾಕ್ಟೀಸ್ ಮುಗಿಸಿದ್ದ ನಂತ್ರ ಸೃಜನ್ ತಂಡದ ಅನಿಲ್ ವಿಕಾಸ್ ಅವರೆಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಆಗ ಸೃಜನ್ ಸಹ ಅಲ್ಲೆ ಇದ್ದರಂತೆ. ಈ ವೇಳೆ ಜೋರಾಗಿ ಕೂಗಾಡುತ್ತಾ ಎಲ್ಲರೂ ಎಂಜಾಯ್ ಮಾಡ್ತಿದ್ದಾರೆ. ಅದೇ ಟೈಮ್ ನಲ್ಲಿ ಅರುಣ್ ಸೋಮಣ್ಣ ಅವರೂ ಸಹ ಅವ್ರ ಗೆಳೆಯರ ಸಹಿತ ಕಿಂಗ್ಸ್ ಕ್ಲಬ್ ಗೆ ಬಂದಿದ್ದಾರೆ. ಜೋರಾಗಿ ಕೂಗಾಡುತ್ತಿದ್ದವರ ಬಳಿ ಅರುಣ್ ಸೋಮಣ್ಣ ಹುಡುಗರು ಹೋಗಿ ಸ್ವಲ್ಪ ಮೆಲ್ಲಗೆ ಮಾತಾಡ್ರಪ್ಪ ಎಂದಿದ್ದರಂತೆ.
ಕೇಸ್ ಇಲ್ಲಾ ಅದ್ರೂ ರಾಜಿ ಸಂಧಾನದ ಪ್ರಯತ್ನ:
ಈ ವೇಳೆ ವಿಕಾಸ್ ಮತ್ತು ಅನಿಲ್ ಎಂಬುವವರು ಕೆಟ್ಟದಾಗಿ ಮಾತಾಡಿದ್ರಂತೆ. ಬಳಿಕ ಅಲ್ಲಿಗೆ ಅರುಣ್ ಸೋಮಣ್ಣ ಸಹ ಬಂದಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದ್ರೆ ಯಾವಾಗ ಗಲಾಟೆ ಶುರು ಆಯ್ತೋ ಆಗ ಅಲ್ಲಿದ್ದ ಸೃಜನ್ ಸೀದಾ ಕ್ಲಬ್ ನ ರೂಮ್ ಗೆ ಹೋಗಿದ್ದಾರೆ. ಸೃಜನ್ ಗಲಾಟೆ ಟೈಮ್ ನಲ್ಲಿ ಹಾಜರು ಇರ್ಲಿಲ್ಲಾ. ಅದ್ರೆ ಈ ಬಗ್ಗೆ ಗಲಾಟೆ ಯಲ್ಲಿ ಭಾಗಿಯಾಗಿದ್ದ ಎರಡೂ ಗುಂಪುಗಳು ಪೈಕಿ ಯಾರೊಬ್ಬರೂ ಸಹ ಪೊಲೀಸ್ ಠಾಣೆ ಗೆ ದೂರು ನೀಡಿಲ್ಲ. ಹೀಗಾಗಿ ಪೊಲೀಸ್ ಠಾಣೆ ಯಲ್ಲಿ ಈ ಬಗ್ಗೆ ಯಾವುದೇ ಕೇಸ್ ದಾಖಲಾಗಿಲ್ಲಾ.
MLC ಒರ್ವರ ಮನೆಯಲ್ಲಿ ಸಂಧಾನ:
ಹೊಡೆದಾಟದ ಘಟನೆ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು, ಕೇಸ್ ಏನೂ ಅಗಿಲ್ಲಾವಾದರೂ ಸಹ ವಿಚಾರ ಬೂದಿಮುಚ್ಚಿದ ಕೆಂಡದಂತೆ ಇತ್ತು. ಇದೇ ಕಾರಣಕ್ಕೆ ಸಚಿವ ಸೋಮಣ್ಣ ಹಾಗೂ ಕಿಂಗ್ಸ್ ಕ್ಲಬ್ ನ ರವಿ ಇಬ್ಬರೂ ಚಂದ್ರಾ ಲೇಔಟ್ ನಲ್ಲಿ ಇರುವ ಎಂಎಲ್ ಸಿ ಒಬ್ಬರ ನಿವಾಸದಲ್ಲಿ ಬುಧವಾರ ಸಂಧಾನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಕೇಸ್ ಅಂತಾ ಹೋಗೊದು ಬೇಡ. ಎಲ್ಲಾರೂ ನಮ್ಮ ಹುಡುಗ್ರೆ ಎಂದು ಮಾತಾನಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೋಮಣ್ಣ ಹಾಗೂ ಅರುಣ್ ಇಬ್ಬರೂ ಗಲಾಟೆ ನಡೆದಿಲ್ಲಾ ಎಂದಿದ್ದಾರೆ. ಅದ್ರೆ ಬೆಂಕಿ ಇಲ್ಲದೆ ಹೊಗೆ ಬರುತ್ತಾ ಅನ್ನೊ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲವಾಗಿದೆ.
Published On - 2:17 pm, Thu, 3 November 22