AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಮಟ್ಟದ ಪಲ್ಸರ್ ಮ್ಯೂಸಿಕ್ ಸಂಗೀತ ಸ್ಪರ್ಧೆ; ಬೆಂಗಳೂರಿನ ಪೊಲವರಪು ಸಾದ್ಯಾಗೆ ಪ್ರಥಮ ಪ್ರಶಸ್ತಿ

9ರಿಂದ 10 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಡುಗಾರಿಕೆ ವಿಭಾಗದಲ್ಲಿ ಸಾಧನೆ ಮಾಡಿದ ಸಾದ್ಯಾ, ಬೆಂಗಳೂರಿನ ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬೆಂಗಳೂರು (ಟಿಐಎಸ್‌ಬಿ) ಇಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ.

ಜಾಗತಿಕ ಮಟ್ಟದ ಪಲ್ಸರ್ ಮ್ಯೂಸಿಕ್ ಸಂಗೀತ ಸ್ಪರ್ಧೆ; ಬೆಂಗಳೂರಿನ ಪೊಲವರಪು ಸಾದ್ಯಾಗೆ ಪ್ರಥಮ ಪ್ರಶಸ್ತಿ
ಪೊಲವರಪು ಸಾದ್ಯಾ
TV9 Web
| Updated By: Ganapathi Sharma|

Updated on: Jul 31, 2023 | 7:16 PM

Share

ಬೆಂಗಳೂರು: ಕೆನಡಾದ ಪಲ್ಸರ್ ಮ್ಯೂಸಿಕ್‌ ಸಂಸ್ಥೆಯು ಹಮ್ಮಿಕೊಂಡಿದ್ದ ಜಾಗತಿಕ ಮಟ್ಟದ ಸಂಗೀತ ಸ್ಪರ್ಧೆಯ ಹಾಡುಗಾರಿಕೆ ವಿಭಾಗದಲ್ಲಿ (International Pulsar music competition 2023) ಬೆಂಗಳೂರಿನ ಪೊಲವರಪು ಸಾದ್ಯಾ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ಇದೊಂದು ಜಾಗತಿಕ ವೇದಿಕೆಯಾಗಿದ್ದು, ‘ರೆಡ್‌ ಮ್ಯಾಪಲ್‌ ಮ್ಯೂಸಿಕ್ ಕಾಂಪಿಟಿಷನ್ ಸ್ಪ್ರಿಂಗ್ ಸೀಸನ್‌ 2023’ ಹೆಸರಿನ ಸಂಗೀತ ಸ್ಪರ್ಧೆಯನ್ನು ಆನ್‌ಲೈನ್‌ ಮೂಲಕ ಏರ್ಪಡಿಸಲಾಗಿತ್ತು. ಭಾರತದಿಂದ ಸಾದ್ಯಾ ಅವರಿಗೆ ಮಾತ್ರ ಪ್ರಶಸ್ತಿ ಲಭಿಸಿದೆ.

9ರಿಂದ 10 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಡುಗಾರಿಕೆ ವಿಭಾಗದಲ್ಲಿ ಸಾಧನೆ ಮಾಡಿದ ಸಾದ್ಯಾ, ಬೆಂಗಳೂರಿನ ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬೆಂಗಳೂರು (ಟಿಐಎಸ್‌ಬಿ) ಇಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ.

ಆಗಸ್ಟ್‌ 9ರಿಂದ 11ರವರೆಗೆ ಕೆನಡಾದ ಟೊರಾಂಟೊದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಾದ್ಯಾ ಅವರು ಇತರ ಪ್ರಶಸ್ತಿ ವಿಜೇತರ ಜತೆಗೆ ಈ ವಿಶ್ವ ವೇದಿಕೆಯಲ್ಲಿ ಮತ್ತೊಮ್ಮೆ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಾದ್ಯಾ ಅವರು ನಾಲ್ಕನೇ ವಯಸ್ಸಿನಿಂದಲೇ ಕರ್ನಾಟಕ ಸಂಗೀತ ಮತ್ತು ಪಾಶ್ಚಿಮಾತ್ಯ ಹಾಡುಗಾರಿಕೆಯನ್ನು ಫನಿರಾಜ್‌ ಗುರು ಮತ್ತು ಅಶ್ಲೇ ವಿಲಿಯಮ್ಸ್‌ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ. ಯಡಾದ್ರಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರಥಮ ಬ್ರಹ್ಮೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇವರು ಬೆಂಗಳೂರಿನ ವೈದ್ಯ ದಂಪತಿ ಡಾ.ಸ್ವೈರಾ ರಾವ್‌ ಮತ್ತು ಡಾ.ಸಿರಿ ಕೃಷ್ಣ ಅವರ ಪುತ್ರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ