IPL 2024: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಕ್ಕೆ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ; ಎಲ್ಲಿಂದ ಎಲ್ಲಿಗೆ?
ಐಪಿಎಲ್ (IPL) ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುವ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium)ದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಣೆ ಮಾಡಿದೆ. ಮೇ 04, 12 ಮತ್ತು 18ರಂದು ಆಯೋಜನೆ ಗೊಂಡಿರುವ ಎಲ್ಲಾ ಪಂದ್ಯದ ವೇಳೆ ಬಂದು ಹೋಗುವ ಎರಡೂ ಅವಧಿಯಲ್ಲೂ ಹೆಚ್ಚುವರಿ ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿದೆ.
ಬೆಂಗಳೂರು, ಮೇ.02: ಐಪಿಎಲ್ ಪ್ರಿಯರಿಗೆ ಬಿಎಂಟಿಸಿ(BMTC) ಗುಡ್ ನ್ಯೂಸ್ ನೀಡಿದೆ. ಐಪಿಎಲ್ (IPL) ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುವ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium)ದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಣೆ ಮಾಡಿದೆ. ಮೇ 04, 12 ಮತ್ತು 18ರಂದು ಆಯೋಜನೆ ಗೊಂಡಿರುವ ಎಲ್ಲಾ ಪಂದ್ಯದ ವೇಳೆ ಬಂದು ಹೋಗುವ ಎರಡೂ ಅವಧಿಯಲ್ಲೂ ಹೆಚ್ಚುವರಿ ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿದ್ದು, ನಗರದ ಎಲ್ಲಾ ನಿಲ್ದಾಣಗಳಿಂದಲೂ ರಾತ್ರಿ ಒಂದು ಗಂಟೆವರೆಗೂ ಬಿಎಂಟಿಸಿ ಸೇವೆ ನೀಡಲಿದೆ.
ಎಲ್ಲಿಂದ ಎಲ್ಲಿಗೆ ಇರಲಿದೆ ಬಸ್
ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಕಾಡುಗೋಡಿ
ಮಾರ್ಗ- ಹೆಚ್ ಎಎಲ್ ರೋಡ್
ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಕಾಡುಗೋಡಿ
ಮಾರ್ಗ- ಹೂಡಿ ರಸ್ತೆ