IPL 2024: ಟಿ20 ವಿಶ್ವಕಪ್​ಗೆ ಆಯ್ಕೆ; ಮುಂದಿನ ಐಪಿಎಲ್ ಪಂದ್ಯದಲ್ಲಿ ಈ 6 ಆಟಗಾರರು ಫ್ಲಾಪ್..!

T20 World Cup 2024: ಈ 6 ಆಟಗಾರರ ಪ್ರದರ್ಶನವನ್ನು ಅಷ್ಟು ಬೇಗ ನಿರ್ಣಯಿಸಲಾಗದಿದ್ದರೂ, ಈ ಫಾರ್ಮ್ ಖಂಡಿತವಾಗಿಯೂ ಟೀಂ ಇಂಡಿಯಾದ ಟೆನ್ಶನ್ ಹೆಚ್ಚಿಸಿದೆ. ವಿಶ್ವಕಪ್​ನಲ್ಲಿ ಈ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪೃಥ್ವಿಶಂಕರ
|

Updated on:May 02, 2024 | 5:17 PM

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡ ಪ್ರಕಟವಾದ ಕೂಡಲೇ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಕೆಲವು ಸ್ಟಾರ್ ಆಟಗಾರರಿಗೆ ಅವಕಾಶ ಸಿಗದಿರುವ ಬಗ್ಗೆ ಅಭಿಮಾನಿಗಳು ಮತ್ತು ತಜ್ಞರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ನಡುವೆ ಅವಕಾಶ ಪಡೆದವರ ಪ್ರದರ್ಶನವೂ ಹಳ್ಳ ಹಿಡಿದಿದೆ. ಅಂತಹ 6 ಆಟಗಾರರ ವಿವರ ಇಲ್ಲಿದೆ.

1 / 8
ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ವಿಶ್ವಕಪ್ ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ತಂಡವನ್ನು ಪ್ರಕಟಿಸಿದ ನಂತರ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವನ್ನು ಆಡಿದ ಪಾಂಡ್ಯಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಆದರೆ, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು 26 ರನ್ ನೀಡಿ 2 ವಿಕೆಟ್ ಪಡೆದರು.

2 / 8
ಶಿವಂ ದುಬೆ: ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಶಿವಂ ದುಬೆ ಟೀಂ ಇಂಡಿಯಾಗೆ ಆಯ್ಕೆಯಾದ ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ ಆಡಿದ್ದರು. ಆದರೆ ಆ ಪಂದ್ಯದಲ್ಲಿ ದುಬೆ ಶೂನ್ಯಕ್ಕೆ ಔಟಾದರು.

3 / 8
ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಕೇವಲ 4 ರನ್ ಗಳಿಸಿ ಔಟಾದರು. ಪ್ರಸ್ತುತ ರೋಹಿತ್ ಫಾರ್ಮ್ ಟೀಂ ಇಂಡಿಯಾದ ಟೆನ್ಷನ್ ಕೂಡ ಹೆಚ್ಚಿಸಿದೆ.

4 / 8
ರವೀಂದ್ರ ಜಡೇಜಾ: ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಕೇವಲ 2 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು

5 / 8
ಸೂರ್ಯಕುಮಾರ್ ಯಾದವ್: ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ ಕೂಡ ಈ ಐಪಿಎಲ್ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಸೂರ್ಯ ಇದುವರೆಗೆ 7 ಪಂದ್ಯಗಳಿಂದ 176 ರನ್ ಗಳಿಸಿದ್ದಾರೆ. ಇದೀಗ ಟಿ20 ವಿಶ್ವಕಪ್​ಗೆ ಆಯ್ಕೆಯಾದ ಬಳಿಕವೂ ಸೂರ್ಯ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 10 ರನ್ ಗಳಿಸಿ ಔಟಾದರು.

6 / 8
ಅರ್ಷದೀಪ್ ಸಿಂಗ್: ಅದೇ ರೀತಿ ಅರ್ಷದೀಪ್ ಸಿಂಗ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತನ್ನ ಖೋಟಾದ 4 ಓವರ್‌ಗಳಲ್ಲಿ 13 ರ ಎಕಾನಮಿಯೊಂದಿಗೆ 52 ರನ್‌ಗಳನ್ನು ನೀಡಿದರು. ಅಲ್ಲದೆ ಕೇವಲ ಒಂದು ವಿಕೆಟ್ ಮಾತ್ರ ಪಡೆದರು.

7 / 8
ಆಟಗಾರರ ಪ್ರದರ್ಶನವನ್ನು ಅಷ್ಟು ಬೇಗ ನಿರ್ಣಯಿಸಲಾಗದಿದ್ದರೂ, ಈ ಫಾರ್ಮ್ ಖಂಡಿತವಾಗಿಯೂ ಟೀಂ ಇಂಡಿಯಾದ ಟೆನ್ಶನ್ ಅನ್ನು ಹೆಚ್ಚಿಸಿದೆ. ವಿಶ್ವಕಪ್​ನಲ್ಲಿ ಈ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

8 / 8

Published On - 5:14 pm, Thu, 2 May 24

Follow us
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್