IRCTC Hospitality Manager jobs: ರೈಲ್ವೆ ನಿಗಮದಲ್ಲಿ ಆತಿಥ್ಯ ಮ್ಯಾನೇಜರುಗಳ ನೇಮಕಾತಿ: SJP ಪಾಲಿಟೆಕ್ನಿಕ್ನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಿ, ಯಾವಾಗ?
IRCTC Recruitment at SJ Polytechnic, Bangalore: ರೈಲ್ವೆ ಪ್ರವಾಸೋದ್ಯಮ ನಿಗಮದಲ್ಲಿ ಆತಿಥ್ಯ ಮ್ಯಾನೇಜರ್ ಹುದ್ದೆಗಳಿಗೆ ನೇಮಕ - ಅರ್ಹ ಮತ್ತು ಆಸಕ್ತ ಅರ್ಜಿದಾರರು ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ವಿದ್ಯಾರ್ಹತೆ, ಅನುಭವ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅಕ್ಟೋಬರ್ 04, 06 ಮತ್ತು 08 ರಂದು ನಡೆಯಲಿರುವ ವಾಕಿನ್ ಸಂದರ್ಶನದಲ್ಲಿ ಹಾಜರಾಗಬಹುದು. ವಾಕಿನ್ ಸಂದರ್ಶನ ನಡೆಯುವ ಸ್ಥಳ: ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಶೇಷಾದ್ರಿ ರಸ್ತೆ, ಬೆಂಗಳೂರು.
IRCTC ನೇಮಕ 2024 ಹಾಸ್ಪಿಟಾಲಿಟಿ ಮ್ಯಾನೇಜರ್ 33 ಹುದ್ದೆಗಳಿಗೆ SJP ಯಲ್ಲಿ ವಾಕಿನ್ ಸಂದರ್ಶನ: ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ( Indian Railway Catering and Tourism Corporation -IRCTC) ಗುತ್ತಿಗೆ ಆಧಾರದ ಮೇಲೆ ಹಾಸ್ಪಿಟಾಲಿಟಿ ಮ್ಯಾನೇಜರ್ (ದಕ್ಷಿಣ ವಲಯ) 33 ಹುದ್ದೆಗಳಿಗೆ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 04, 06 ಮತ್ತು 08, 2024 (AM 9 AM) ರಂದು ನಡೆಯಲಿರುವ ವಾಕಿನ್ ಸಂದರ್ಶನದಲ್ಲಿ ಹಾಜರಾಗಬಹುದು.
ಅಭ್ಯರ್ಥಿಗಳು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಂಡು, ಸಂಬಂಧಪಟ್ಟ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು. ನಿಗದಿತ ನಮೂನೆಯಲ್ಲಿ ಪೂರ್ಣಗೊಂಡ ಅರ್ಜಿಯನ್ನು ತರಬೇಕು. ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ಮತ್ತು ಅನುಭವವನ್ನು (ಯಾವುದಾದರೂ ಇದ್ದರೆ) ಸಾಬೀತುಪಡಿಸುವ ದಾಖಲೆಗಳನ್ನು ತರಬೇಕು. ಇದು ವಾಕ್-ಇನ್ ಸಂದರ್ಶನ ಪ್ರಕ್ರಿಯೆಯಾಗಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಸಂಭಾವ್ಯತೆಯನ್ನು ಹೆಚ್ಚಿಸಕೊಳ್ಳಲು ಸಾಧ್ಯವಾದಷ್ಟೂ ಸೂಕ್ತ ಸಂಬಂಧಿತ ದಾಖಲೆಗಳೊಂದಿಗೆ ಸಿದ್ಧರಾಗಿ ಬನ್ನಿ.
ಹುದ್ದೆಗಳು ಮತ್ತು ಅರ್ಹತೆಯ ಮಾನದಂಡ: ಹಾಸ್ಪಿಟಾಲಿಟಿ ಮ್ಯಾನೇಜರ್ – 33 ಹುದ್ದೆಗಳು – ವಯಸ್ಸು ಗರಿಷ್ಠ 28 ವರ್ಷಗಳು – ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಆಡಳಿತದಲ್ಲಿ BSc ಅಥವಾ BBA/ MBA ಮತ್ತು ಕನಿಷ್ಠ 2 ವರ್ಷಗಳ ಅನುಭವ, ಮಾಸಿಕ ವೇತನ ರೂ 30,000
ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಸೂಚನೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. ಸಂಬಂಧಿತ ಅಧಿಕೃತ ಅಧಿಸೂಚನೆ: Related Official Notification
IRCTC Hospitality Manager Recruitment 2024
ಪರಿಗಣಿಸಬೇಕಾದ ದಿನಾಂಕಗಳು: ವಾಕಿನ್ ಸಂದರ್ಶನದ ದಿನಾಂಕ ಮತ್ತು ಸಮಯ : ಅಕ್ಟೋಬರ್ 04, 06 ಮತ್ತು 08, 2024 (9 AM)
ಅರ್ಜಿ ಸಲ್ಲಿಸುವುದು ಹೇಗೆ: ಅರ್ಹ ಮತ್ತು ಆಸಕ್ತ ಅರ್ಜಿದಾರರು ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ವಿದ್ಯಾರ್ಹತೆ, ಅನುಭವ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅಕ್ಟೋಬರ್ 04, 06 ಮತ್ತು 08, 2024 (9 AM) ರಂದು ನಡೆಯಲಿರುವ ವಾಕಿನ್ ಸಂದರ್ಶನದಲ್ಲಿ ಹಾಜರಾಗಬಹುದು. ಅರ್ಜಿದಾರರು ಸಂದರ್ಶನದ ಸಮಯಕ್ಕಿಂತ ಮುಂಚೆಯೇ ಸ್ಥಳಕ್ಕೆ ತಲುಪಬೇಕು.
ವಾಕಿನ್ ಸಂದರ್ಶನ ನಡೆಯುವ ಸ್ಥಳ: ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಶೇಷಾದ್ರಿ ರಸ್ತೆ, ಬೆಂಗಳೂರು 560001 SJ Polytechnic Campus, Seshadri Road, Bangalore 560001
Published On - 9:37 am, Mon, 30 September 24