ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ, ನೆಹರು ತಾರಾಲಯದಲ್ಲಿ ವಿಶೇಕ್ಷ ಪ್ರದರ್ಶನ ಕಂಡು ಹೆಮ್ಮೆ ಪಟ್ಟ ಜನ

ಇಡೀ ದೇಶವನ್ನೆ ತಿರುಗಿ ನೋಡುವಂತೆ ಮಾಡಿದ್ದ ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ ಕಳೆದಿದ್ದು, ನಿನ್ನೆ ಅದರ ನೆನಪಿಗಾಗಿ ನೆಹರು ತಾರಾಲಯದಲ್ಲಿ ಮಂಗಳಯಾನದ ಮಾಡೆಲ್​ಗಳನ್ನ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇದನ್ನು ಕಂಡ ಜನ ಇದರ ಬಗ್ಗೆ ಮಂಗಳಯಾನದ ಯಶಸ್ಸಿನ ಕಥೆ ಕೇಳಿ ಹೆಮ್ಮೆ ಪಟ್ಟರು.

ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ, ನೆಹರು ತಾರಾಲಯದಲ್ಲಿ ವಿಶೇಕ್ಷ ಪ್ರದರ್ಶನ ಕಂಡು ಹೆಮ್ಮೆ ಪಟ್ಟ ಜನ
ನೆಹರು ತಾರಾಲಯದಲ್ಲಿ ವಿಶೇಕ್ಷ ಪ್ರದರ್ಶನ
Follow us
| Updated By: ಆಯೇಷಾ ಬಾನು

Updated on: Sep 30, 2024 | 7:18 AM

ಬೆಂಗಳೂರು, ಸೆ.30: ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿದ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್​ ಆರ್ಬಿಟರ್​ ಅನ್ನು (Mangalyaan) ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದಿತ್ತು. 2013ರ ನವೆಂಬರ್​ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ ರಾಕೆಟ್​ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 2014 ರ ಸೆಪ್ಟೆಂಬರ್​ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು.

ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ. ಜೊತೆಗೆ ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿದೆ. ಈ ಮಹತ್ವದ ಗ್ರಹ ಕಕ್ಷೆ ಸೇರಿ 10 ವರ್ಷ ಕಳೆದಿದ್ದು, ಈ ಸುಧಿನವನ್ನ ವಿಜ್ಞಾನಿಗಳು ಸಂಭ್ರಮಿಸುತ್ತಿದ್ದಾರೆ.

ಜಗತ್ತೇ ಭಾರತದತ್ತ ತಿರುಗಿ ನೋಡಿದ ಕ್ಷಣಕ್ಕೆ 10 ವರ್ಷ ತುಂಬಿದೆ. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ್ದ ಭಾರತದ ಹಿರಿಮೆಯನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ನೆಹರು ತಾರಾಲಯದಲ್ಲಿ ನಿನ್ನೆ ವಿಶೇಷ ಮಾಡೆಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಲ್ಲಿ ಮಂಗಳಯಾನದ ಉಡಾಯನ ನೌಕೆ ಹಾಗೂ ಉಪಗ್ರಹದ ಮಾಡೆಲ್ ಪ್ರದರ್ಶನಕ್ಕೆ ಇಡುವ ಮೂಲಕ ಐತಿಹಾಸಿಕ ಕ್ಷಣವನ್ನು ಹೆಮ್ಮೆಯಿಂದ ನೆಹರು ತಾರಾಲಯ ಆಚರಿಸುತ್ತಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಂಗಳಯಾನದ ಬಗ್ಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ISRO recruitment 2024: ಹೆಮ್ಮೆಯ ಇಸ್ರೋ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಾವಕಾಶಗಳು: ಖಾಲಿ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

ಇನ್ನು, ಮಂಗಳಯಾನ ಮಾಡೆಲ್ ಗಳನ್ನ ನೋಡಿದ ಜನರು ಸಂತೋಷ ಪಟ್ರು.‌ ಮಂಗಳಯಾನ ಭಾರತದ ಹೆಮ್ಮೆ.‌ ಆ ಹೆಮ್ಮೆಯನ್ನ ಇಂದಿಗೂ ನಾವು ಸಂಭ್ರಮಿಸುತ್ತಿದ್ದೇವೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಮಂಗಳಯಾನವನ್ನ ಉಡಾವಣೆ ಮಾಡಲಾಗಿತ್ತು. ಈ ಕುರಿತಾಗಿ ಇಂದು ಮಾಡೆಲ್ ಗಳ ಪ್ರದರ್ಶನವನ್ನ ನೆಹರು ತಾರಾಲಯದಲ್ಲಿ ಇಟ್ಟಿರುವುದು ತುಂಬ ಖುಷಿಯಾಗುತ್ತಿದೆ. ಅಲ್ಲದೇ ಮಕ್ಕಳಿಂದ ದೊಡ್ಡವರವರೆಗೂ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದೇವೆ ಎಂದು ಸಿಲಿಕಾನ್ ಮಂದಿ ಖುಷಿಪಟ್ರು.

ಒಟ್ನಲ್ಲಿ, ಮಂಗಳಯಾನ ಕಕ್ಷೆ ತಲುಪಿ 10 ವರ್ಷ ಕಳೆದಿದ್ರೂ, ಆ ಸಂಭ್ರಮ ಇಂದಿಗೂ ಇದೆ. ಜನರು ಮಂಗಳಯಾನದ ಬಗ್ಗೆ ತಿಳಿದುಕೊಂಡು ಹೆಮ್ಮೆ ಪಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?