ಸೆಟಲ್ಮೆಂಟ್ ಅಡ್ಡೆಯಾಗಿತ್ತಾ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಸ್ಪಾಟ್​?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 12, 2024 | 2:57 PM

ದರ್ಶನ್(Darshan Thoogudeepa) ಹಾಗೂ ಆತನ ಸಹಚರರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಿತ್ರದುರ್ಗದ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಜಾಗ ಆರ್​ಆರ್​ ನಗರ(RR Nagar) ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಇದೊಂದು ಸೆಟಲ್ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ.

ಸೆಟಲ್ಮೆಂಟ್ ಅಡ್ಡೆಯಾಗಿತ್ತಾ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಸ್ಪಾಟ್​?
ಸೆಟಲ್ಮೆಂಟ್ ಅಡ್ಡೆಯಾಗಿತ್ತಾ ರೇಣುಕಾ ಸ್ವಾಮಿ ಕೊಲೆ ಮಾಡಿದ ಸ್ಪಾಟ್​?
Follow us on

ಬೆಂಗಳೂರು, ಜೂ.12: ನಟ ದರ್ಶನ್(Darshan Thoogudeepa) ಅವರ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ(Renuka Swamy) ಎಂಬುವವರನ್ನು ದರ್ಶನ್ ಹಾಗೂ ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಜಾಗ ಆರ್​ಆರ್​ ನಗರ(RR Nagar) ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಇದೊಂದು ಸೆಟಲ್ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ.

ಹೌದು, ಪ್ರೈವೇಟ್ ಫೈನಾನ್ಸ್​ಗಳಿಗೆ ಇಎಂಐ ಪೇ ಮಾಡದ ವಾಹನಗಳನ್ನು ಸೀಜ್ ಮಾಡಿ ತಂದು ನಿಲ್ಲಿಸುವ ವೆಹಿಕಲ್ ಶೆಡ್ ಇದಾಗಿದ್ದು, ಬೆದರಿಕೆ ಒಡ್ಡಲು, ವ್ಯಕ್ತಿಗಳನ್ನು ಕರೆತಂದು ಹಲ್ಲೆ ನಡೆಸಲು ಇದೇ ಶೆಡ್​ನಲ್ಲಿ ಕೂಡಿ ಹಾಕುತ್ತಿದ್ದರು ಎನ್ನಲಾಗುತ್ತಿದೆ. ಫೈನಾನ್ಸ್ ವ್ಯವಹಾರದಲ್ಲಿ ಹಣ ಪಡೆದು ಕೊಡದೆ ಇದ್ದವರನ್ನು ಇಲ್ಲಿಗೆ ಕರೆತಂದು ಬೆದರಿಸುವ ಜಾಗವಾಗಿತ್ತು. ಹಲ್ಲೆ ನಡೆಸಲು ಅವಶ್ಯಕವಾದ ಬ್ಯಾಟ್, ಸ್ಟಿಕ್, ರಾಡ್, ದೊಣ್ಣೆ ಇನ್ನಿತರ ಮಾರಕಾಸ್ತ್ರಗಳನ್ನು ಖಾಯಂ ಆಗಿಯೇ ಇಲ್ಲಿಯೇ ಇಟ್ಟಿರುತ್ತಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆಯಾದ ಶೆಡ್ ಮಾಲೀಕ ಹೇಳಿದ್ದು ಹೀಗೆ

ಸಂಜೆಯಾಗುತ್ತಿದ್ದಂತೆ ನಿಶ್ಯಬ್ದವಾಗಿ ವಿರಳ ಜನಸಂಖ್ಯೆಯಿಂದ ಕೂಡಿರುವ ಈ ಪ್ರದೇಶದಲ್ಲಿ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಿ, ಹಲ್ಲೆ ನಡೆಸುವ ಕ್ರಿಮಿನಲ್ ಚಟುವಟಿಕೆಗಳು ಈ ಶೆಡ್​ನಲ್ಲಿ ನಡೆಯುತ್ತಿರುವ ಕುರಿತು ಕೇಳಿಬಂದಿದೆ. ಇನ್ನು ಚಿತ್ರದುರ್ಗದ ನಿವಾಸಿ ಆಗಿದ್ದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ, ಬೆಂಗಳೂರಿನ ಹೊರವಲಯದ ಶೆಡ್​ಗೆ ತಂದು ಅಲ್ಲಿ ಆತನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಜೊತೆಗೆ ಘಟನೆ ಕುರಿತು ಆ ಶೆಡ್​ನ ಮಾಲೀಕ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಸಂಬಂಧಿ ಜೊತೆಗೆ ದರ್ಶನ್ ಆಪ್ತ ವಿನಯ್​ನನ್ನು ಸಹ ಬಂಧನ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Wed, 12 June 24