ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಕಿತ್ತಾಟ, ಮನೆಯೊಂದು ನೂರು ಬಾಗಿಲಾದ ಸರ್ಕಾರ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ, ಮನೆಯೊಂದು ನೂರು ಬಾಗಿಲಂತಾಗಿದೆ. ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಯಾವಾಗ ಬೇಕಾದರೂ ಜ್ವಾಲೆಯಾಗುವ ಸಾಧ್ಯತೆ ಸನ್ನಿಹಿತವಾಗಿದೆ. ಕಾಂಗ್ರೆಸ್ ಕಚ್ಚಾಟ ನಿರಂತರವಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಬೆಂಗಳೂರು, ಜೂನ್ 12: ಇಷ್ಟು ದಿನಗಳು ತಣ್ಣಗಾಗಿದ್ದ ಮೂವರು ಉಪಮುಖ್ಯಮಂತ್ರಿ (DCM) ನೇಮಕ ವಿಚಾರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ನಿನ್ನೆ ಮೂವರು ಉಪಮುಖ್ಯಮಂತ್ರಿ ನೇಮಕ ಮಾಡುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ (kn rajanna) ಒತ್ತಾಯಿಸಿದ್ದರು. ಸದ್ಯ ಈ ವಿಚಾರವಾಗಿ ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಯಾವಾಗ ಬೇಕಾದರೂ ಜ್ವಾಲೆಯಾಗುವ ಸಾಧ್ಯತೆ ಸನ್ನಿಹಿತವಾಗಿದೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರ, ಮನೆಯೊಂದು ನೂರು ಬಾಗಿಲಂತಾಗಿದೆ. ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಯಾವಾಗ ಬೇಕಾದರೂ ಜ್ವಾಲೆಯಾಗುವ ಸಾಧ್ಯತೆ ಸನ್ನಿಹಿತವಾಗಿದೆ ಎಂದು ವಾಗ್ದಾಳಿ ಮಾಡಿದೆ.
ಬಿಜೆಪಿ ಟ್ವೀಟ್
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ ರಾಜ್ಯದ @INCKarnataka ಸರ್ಕಾರ, ಮನೆಯೊಂದು ನೂರು ಬಾಗಿಲಂತಾಗಿದೆ.
ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಯಾವಾಗ ಬೇಕಾದರೂ ಜ್ವಾಲೆಯಾಗುವ ಸಾಧ್ಯತೆ ಸನ್ನಿಹಿತವಾಗಿದೆ.
ಸಿಎಂ @siddaramaiah ಅವರೇ, ಡಿಸಿಎಂ… pic.twitter.com/JijEDQBusS
— BJP Karnataka (@BJP4Karnataka) June 12, 2024
ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಕುರ್ಚಿ ಕಿತ್ತಾಟ ನಿಲ್ಲುವುದು ಯಾವಾಗ?, ಕರ್ನಾಟಕದ ಅಭಿವೃದ್ಧಿಗೆ ಹಿಡಿದ ಗ್ರಹಣ ಮುಗಿಯುವುದು ಯಾವಾಗ ಎಂಬುದನ್ನು ತಿಳಿಸಿ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕರು ದೆಹಲಿಯಲ್ಲಿ; ಮೂರು ಡಿಸಿಎಂ ಸ್ಥಾನಗಳಾಗಬೇಕೆಂದು ಹೈಕಮಾಂಡ್ ಬಳಿ ಮನವಿ?
ಲೋಕಸಭೆ ಚುನಾವಣೆ ಮುಗಿಯುವವರೆಗೆ ಮೂವರು ಉಪಮುಖ್ಯಮಂತ್ರಿ ನೇಮಕ ವಿಚಾರವಾಗಿ ಮಾತನಾಡದೇ ಸುಮ್ಮನಿದ್ದೆ. ಆದರೆ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಿದೆ. ಹೀಗಾಗಿ ಮೂರು ಡಿಸಿಎಂ ನೇಮಕ ಅಗತ್ಯವಿದೆ. ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮತ್ತೆ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Wed, 12 June 24