AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ, ಚಿನ್ನದ ವ್ಯಾಪಾರಿ ಓರ್ವನ ಮನೆಯಲ್ಲಿ 3 ದಿನಗಳಿಂದ ಶೋಧ

ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ‌ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ‌‌ ಶೋಧ ಮಾಡುತ್ತಿದೆ. ಇದೀಗ ಆಭೂಷಣ ಚಿನ್ನದ ಅಂಗಡಿಯ ಮಾಲೀಕನ ಅಪಾರ್ಟ್ಮೆಂಟ್ ನಲ್ಲಿ ಐಟಿ ಶೋಧ ನಡೆಸುತ್ತಿತ್ತು. ಮೂರು ದಿನಗಳ ಶೋಧದ ನಂತರ ಇಂದು ಐಟಿ‌ ದಾಳಿ ಅಂತ್ಯವಾಗಿದೆ.

ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ, ಚಿನ್ನದ ವ್ಯಾಪಾರಿ ಓರ್ವನ ಮನೆಯಲ್ಲಿ 3 ದಿನಗಳಿಂದ ಶೋಧ
ಚಿನ್ನ
Shivaprasad B
| Edited By: |

Updated on:Dec 16, 2023 | 7:45 AM

Share

ಬೆಂಗಳೂರು, ಡಿ.16: ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ (IT Raid) ನಡೆದಿದ್ದು ದಾಳಿ ಅಂತ್ಯವಾಗಿದೆ. ಮತ್ತೊಂದೆಡೆ ಚಿನ್ನದ ವ್ಯಾಪಾರಿ ಓರ್ವರಿಗೆ ಸೇರಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಐಟಿ ಅಧಿಕಾರಿಗಳು ಜಯನಗರ 3ನೇ ಬ್ಲಾಕ್​ನ 8ನೇ ಮುಖ್ಯರಸ್ತೆಯಲ್ಲಿರುವ ಆಭೂಷಣ ಮಳಿಗೆ, ಪೊಲ್ಕಿಸ್, ಮಂಗಳ, ರಿದ್ದಿ, ತಿರುಮಲ ಸೇರಿದಂತೆ 9 ಮಳಿಗೆ ಮೇಲೆ ದಾಳಿ ನಡೆಸಿದ್ದರು.

ಬೆಂಗಳೂರಿನ ಜಯನಗರ 2ನೇ ಬ್ಲಾಕ್​ನಲ್ಲಿರುವ ಆಭೂಷಣ ಮಳಿಗೆ ಮಾಲೀಕನ ಫ್ಲ್ಯಾಟ್ ಮೇಲೂ ಐಟಿ ದಾಳಿ ನಡೆದಿತ್ತು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಸದ್ಯ ಮೂರು ದಿನಗಳ ಪರಿಶೀಲನೆ ತಡ ರಾತ್ರಿ 2ಗಂಟೆಗೆ ಅಂತ್ಯವಾಗಿದೆ. ಹಲವು ಮಹತ್ವದ ದಾಖಲೆಗಳು, ರಶೀದಿ ಇನ್​ವಾಯ್ಸ್ ಪರಿಶೀಲಿಸಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ‌ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ‌‌ ಶೋಧ ಮಾಡುತ್ತಿದೆ. ಇದೀಗ ಆಭೂಷಣ ಚಿನ್ನದ ಅಂಗಡಿಯ ಮಾಲೀಕನ ಅಪಾರ್ಟ್ಮೆಂಟ್ ನಲ್ಲಿ ಐಟಿ ಶೋಧ ನಡೆಸುತ್ತಿತ್ತು. ಮೂರು ದಿನಗಳ ಶೋಧದ ನಂತರ ಇಂದು ಐಟಿ‌ ದಾಳಿ ಅಂತ್ಯವಾಗಿದೆ.

ಇದನ್ನೂ ಓದಿ: ಐಟಿ ದಾಳಿ: ಕಾಂಗ್ರೆಸ್​ ಸಂಸದ ಧೀರಜ್ ಸಾಹು ಮನೆಯಲ್ಲಿ 351 ಕೋಟಿ ರೂ. ನಗದು ಬಳಿಕ ಸಿಕ್ಕಿತೇ ಚಿನ್ನಾಭರಣಗಳು?

ಬಟ್ಟೆಗೆ ಚಾಕೊಲೇಟ್ ಅಂಟಿಸಿ 10 ಲಕ್ಷ ಕಳ್ಳತನ

ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು, 10 ಲಕ್ಷ ಹಣ ಕಳ್ಳತನ ಮಾಡಲಾಗಿದೆ. ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಘಟನೆ ನಡೆದಿದೆ. ಸಾಯಿ ಮೆಡಿಕಲ್ ಮಾಲೀಕ ಮಾದವ ರೆಡ್ಡಿ 10 ಲಕ್ಷ ಹಣವನ್ನ ತನ್ನ ಸಹೋದರನಿಗೆ ನೀಡುವಂತೆ, ಚಾಲಕ ಮಂಜುನಾಥ್​ಗೆ ಕೊಟ್ಟು ಕಳಿಸಿದ್ದ. ಖರರ್ನಾಕ್ ಕಳ್ಳರು ಮೆಡಿಕಲ್ ಮುಂದೆಯೇ ಬ್ಯಾಗ್ ಸಮೇತ ಹಣ ಎಗರಿಸಿದ್ದಾರೆ.

40 ಸಾವಿರದ ಗಾಂಜಾ ಜಪ್ತಿ.. ಇಬ್ಬರು ಅರೆಸ್ಟ್

ಹುಬ್ಬಳ್ಳಿಯಲ್ಲಿ ಬೆಂಡಿಗೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 1635 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ. ಮನೆಯಲ್ಲಿ ಅಕ್ರಮವಾಗಿ ಸಂಗ್ರಹ‌ ಮಾಡಿದ್ದ 40 ಸಾವಿರ ಮೌಲ್ಯದ 1635 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಅಖಿಲೇಶ್ ಯರಮಸಾಳ, ಪ್ರಭು ಗೆಜ್ಜೆಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಕಬ್ಬಿಣದ 4 ತಲ್ವಾರ್​​​ 1ಕೊಡಲಿಯನ್ನೂ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 6:49 am, Sat, 16 December 23