ಐಟಿ ದಾಳಿ: ಕಾಂಗ್ರೆಸ್​ ಸಂಸದ ಧೀರಜ್ ಸಾಹು ಮನೆಯಲ್ಲಿ 351 ಕೋಟಿ ರೂ. ನಗದು ಬಳಿಕ ಸಿಕ್ಕಿತೇ ಚಿನ್ನಾಭರಣಗಳು?

ಜಾರ್ಖಂಡ್​ನ ಕಾಂಗ್ರೆಸ್​ ಸಂಸದ ಧೀರಜ್ ಸಾಹು(Dheeraj Sahu) ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ನಡೆಸಿದ ದಾಳಿಯಲ್ಲಿ ಇದುವರೆಗೆ 351 ಕೋಟಿ ರೂ. ನಗದು ಪತ್ತೆಯಾಗಿದೆ. ಆದರೆ ಆಭರಣಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಧೀರಜ್ ಸಾಹು ಅವರ ಮನೆಯ ಜಮೀನನ್ನು ಅಗೆಯಲು ಆದಾಯ ತೆರಿಗೆ ಇಲಾಖೆ ತಂಡ ಸಿದ್ಧತೆ ನಡೆಸಿದೆ.

ಐಟಿ ದಾಳಿ: ಕಾಂಗ್ರೆಸ್​ ಸಂಸದ ಧೀರಜ್ ಸಾಹು ಮನೆಯಲ್ಲಿ 351 ಕೋಟಿ ರೂ. ನಗದು ಬಳಿಕ ಸಿಕ್ಕಿತೇ ಚಿನ್ನಾಭರಣಗಳು?
ಐಟಿ ದಾಳಿ
Follow us
ನಯನಾ ರಾಜೀವ್
|

Updated on: Dec 13, 2023 | 12:49 PM

ಜಾರ್ಖಂಡ್​ನ ಕಾಂಗ್ರೆಸ್​ ಸಂಸದ ಧೀರಜ್ ಸಾಹು(Dheeraj Sahu) ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ನಡೆಸಿದ ದಾಳಿಯಲ್ಲಿ ಇದುವರೆಗೆ 351 ಕೋಟಿ ರೂ. ನಗದು ಪತ್ತೆಯಾಗಿದೆ. ಆದರೆ ಆಭರಣಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಧೀರಜ್ ಸಾಹು ಅವರ ಮನೆಯ ಜಮೀನನ್ನು ಅಗೆಯಲು ಆದಾಯ ತೆರಿಗೆ ಇಲಾಖೆ ತಂಡ ಸಿದ್ಧತೆ ನಡೆಸಿದೆ.

ಧೀರಜ್ ಸಾಹು ಮನೆಯ ಮೇಲೆ ದಾಳಿ ನಡೆಸಿದ ತಂಡ ತನಿಖೆ ಆರಂಭಿಸಿದೆ, ಜಿಯೋ ಸರ್ವೆಲೆನ್ಸ್​ ಸಿಸ್ಟಂ ಯಂತ್ರದ ಮೂಲಕ ಐಟಿ ತಂಡ ಜಮೀನನ್ನು ಶೋಧಿಸುತ್ತಿದೆ. ಮಣ್ಣಿನಡಿಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಮತ್ತಿತರೆ ವಸ್ತುಗಳನ್ನು ಯಂತ್ರದ ಮೂಲಕ ಶೋಧಿಸಲಾಗುತ್ತಿದೆ. ದಾಳಿಯ ವೇಳೆ ದೊರೆತ ಅಪಾರ ಸಂಪತ್ತು ಬೆಳಕಿಗೆ ಬಂದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರೀಕ್ಷೆಗಳು ಹೆಚ್ಚಿವೆ. ಧೀರಜ್ ಸಾಹು ಅವರ ಮನೆಯ ನೆಲದಡಿಯಲ್ಲಿ ನಿಧಿ ಅಡಗಿರಬಹುದು ಎಂದು ಅವರು ಭಾವಿಸಿದ್ದಾರೆ.

ಇಂದು ಮೂರು ವಾಹನಗಳಲ್ಲಿ 12 ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲೋಹರ್ಡಗಾದಲ್ಲಿರುವ ಧೀರಜ್ ಸಾಹು ಅವರ ನಿವಾಸಕ್ಕೆ ತನಿಖೆಗಾಗಿ ಆಗಮಿಸಿದ್ದಾರೆ. ಜಿಯೋ ಕಣ್ಗಾವಲು ಯಂತ್ರವನ್ನು ಕೂಡ ತಂದಿದ್ದಾರೆ.

ಮತ್ತಷ್ಟು ಓದಿ: ಧೀರಜ್​ ಸಾಹು ಐಟಿ ಕೇಸ್​: 6ನೇ ದಿನವೂ ಮುಂದುವರೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಮೇಜಿನ ಮೇಲೆ ಕಂತೆ ಕಂತೆ ನೋಟುಗಳು ಆಭರಣಗಳು ಅಥವಾ ಇನ್ಯಾವುದೇ ವಸ್ತುಗಳು ನೆಲದಲ್ಲಿ ಅಡಗಿವೆಯೇ ಎಂದು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ತಂಡವು ರಾಂಚಿ ಹಾಗೂ ಧೀರಜ್ ಅವರ ಇತರೆ ಸ್ಥಳಗಳ ಮೇಲೆ ದಾಳಿ ಮಾಡಿವೆ.

ಅಂತರ ಕಾಯ್ದುಕೊಂಡ ಕಾಂಗ್ರೆಸ್​ ಧೀರಜ್ ಸಾಹು ಅವರ ಕುಟುಂಬವು ಮದ್ಯ ತಯಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಮತ್ತು ಒಡಿಶಾದಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಅಪಾರ ನಗದು ಪತ್ತೆಯಾದ ಬಳಿಕ ಕಾಂಗ್ರೆಸ್​ ಧೀರಜ್​ನಿಂದ ಅಂತರ ಕಾಯ್ದುಕೊಂಡಿದೆ. ಧೀರಜ್ ವ್ಯವಹಾರಕ್ಕೂ ಕಾಂಗ್ರೆಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್​ ಹೇಳಿದ್ದಾರೆ.

80 ತಂಡಗಳಿಂದ ದಾಳಿ ಆದಾಯ ತೆರಿಗೆ ಇಲಾಖೆ ತಂಡವು ಡಿಸೆಂಬರ್ 6ರಂದು ತೆರಿಗೆ ವಂಚನೆ ಪ್ರಕರಣದಲ್ಲಿ ಬೌದ್ ಡಿಸ್ಟಿಲಿರಿ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಪ್ರವರ್ತಕರ ವಿರುದ್ಧ ದಾಳಿ ಶುರು ಮಾಡಿತ್ತು. ಆದಾಯ ತೆರಿಗೆ ಇಲಾಖೆ ಹಾಗೂ ಹಲವಾರು ಬ್ಯಾಂಕ್​ಗಳಿಂದ ಸುಮಾರು 80 ತಂಡವನ್ನು ನಿಯೋಜನೆ ಮಾಡಿತ್ತು. ಭದ್ರತಾ ಸಿಬ್ಬಂದಿ, ಚಾಲಕರು ಇತರೆ ಸಿಬ್ಬಂದಿ ಸೇರಿ ಒಟ್ಟು 200 ಮಂದಿ ಇದ್ದಾರೆ. ಸಾಹು ಅವರು 175 ಬ್ಯಾಗ್​ಗಳಲ್ಲಿ ಹಣವನ್ನು ಇಟ್ಟುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ