ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಲಕ್ಷಾಂತರ ರೂಪಾಯಿ ಚಿನ್ನ ಮಾರನೇ ದಿನ ಮನೆ ಬಾಗಿಲ ಮುಂದೆ ಪತ್ತೆ

ಜೂನ್ 14 ರಂದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. ಇವೆಂಟ್ ಉದ್ಯಮಿ ಭರತ್ ಮನೆಯಲ್ಲಿ ಈ ಘಟನೆ ನಡೆದಿತ್ತು. ಮಧ್ಯಾಹ್ನ ದೇವಸ್ಥಾನಕ್ಕೆಂದು ಉದ್ಯಮಿ ಕುಟುಂಬ ತೆರಳಿದ್ದಾಗ ಆರೋಪಿ ಕೃತ್ಯ ಎಸಗಿದ್ದಾನೆ.

ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಲಕ್ಷಾಂತರ ರೂಪಾಯಿ ಚಿನ್ನ ಮಾರನೇ ದಿನ ಮನೆ ಬಾಗಿಲ ಮುಂದೆ ಪತ್ತೆ
ಪ್ರಾತಿನಿಧಿಕ ಚಿತ್ರ
Edited By:

Updated on: Jun 28, 2022 | 9:40 AM

ಬೆಂಗಳೂರು: ವಿಚಿತ್ರವಾದ ಕಳ್ಳತನ (Theft) ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದ್ದು, ಕಳ್ಳತನವಾಗಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ (Jewellery) ಮಾರನೇ ದಿನ ಮನೆ ಬಾಗಿಲ ಮುಂದೆ ಪತ್ತೆಯಾಗಿದೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನ ಕದ್ದು ಎಸ್ಕೇಪ್ ಅಗಿದ್ದ. ಆದರೆ ಕದ್ದ ಚಿನ್ನವನ್ನು ಮಾರನೇ ದಿನವೇ ಮನೆ ಬಾಗಿಲ ಮುಂದೆ ತಂದಿಟ್ಟಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಚಿನ್ನಾಭರಣ ತಂದಿಟ್ಟಿದ್ದಾನೆ.

ಜೂನ್ 14 ರಂದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. ಇವೆಂಟ್ ಉದ್ಯಮಿ ಭರತ್ ಮನೆಯಲ್ಲಿ ಈ ಘಟನೆ ನಡೆದಿತ್ತು. ಮಧ್ಯಾಹ್ನ ದೇವಸ್ಥಾನಕ್ಕೆಂದು ಉದ್ಯಮಿ ಕುಟುಂಬ ತೆರಳಿದ್ದಾಗ ಆರೋಪಿ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಭರತ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: Russia Ukraine War: ಉಕ್ರೇನ್​ ರೈತರ ಮನೆಗಳಲ್ಲಿ ಗೋಧಿ ಲೂಟಿ, ಕೃಷಿಗೆ ರೈತರ ನಿರಾಸಕ್ತಿ, ಹಸಿವಿನ ಭೀತಿಯಲ್ಲಿ ಜಗತ್ತು

ಇದನ್ನೂ ಓದಿ
Maharashtra Crisis: ಉದ್ಧವ್ ಠಾಕ್ರೆ ಸರ್ಕಾರಕ್ಕೆ ಬಂಡಾಯದ ಬಿಸಿ; ಶಿಂಧೆ ಬಣದಿಂದ ಅವಿಶ್ವಾಸ ನಿರ್ಣಯ ಮಂಡನೆ?
Russia Ukraine War: ಉಕ್ರೇನ್​ ರೈತರ ಮನೆಗಳಲ್ಲಿ ಗೋಧಿ ಲೂಟಿ, ಕೃಷಿಗೆ ರೈತರ ನಿರಾಸಕ್ತಿ, ಹಸಿವಿನ ಭೀತಿಯಲ್ಲಿ ಜಗತ್ತು
ಕರ್ಕಶ ಶಬ್ಧ ಮಾಡುತ್ತಿದ್ದ ವಾಹನಗಳ ಸೈಲೆನ್ಸರ್​ ನಾಶಗೊಳಿಸಿದ ಪೊಲೀಸರು, 190ಕ್ಕೂ ಹೆಚ್ಚು ಪ್ರಕರಣ ದಾಖಲು!
Russia Ukraine War: ಉಕ್ರೇನ್​ನ ಶಾಪಿಂಗ್ ಮಾಲ್ ಮೇಲೆ ರಷ್ಯಾ ಕ್ಷಿಪಣಿ ದಾಳಿ, 16 ಮಂದಿ ಸಾವು

ಪೊಲೀಸರ ಜೊತೆ ಮನಗೆ ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್ ಸಿಬ್ಬಂದಿ ಕೂಡಾ ಆಗಮಿಸಿದ್ದರು. ಇದಾದ ಬಳಿಕ ಮರುದಿನ ಬೆಳಿಗ್ಗೆ 6 ಗಂಟೆಗೆ ಮನೆ ಬಾಗಿಲು ತೆಗೆದಾಗ ಮನೆಯ ಬಾಗಿಲಿನಲ್ಲೇ ಕಳುವಾದ ಚಿನ್ನಾಭರಣ ಪತ್ತೆಯಾಗಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ:
ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿ ಮತ್ತೆ ಬೆಂಕಿ ಇಟ್ಟಿರುವ ಘಟನೆ ನಗರದ ‌ಜೆಎಸ್ ಕೆಎಂ ರಸ್ತೆಯಲ್ಲಿ ನಡೆದಿದೆ. ಕಿಡಿಗೇಡಿ ಕಾರಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೆಎಸ್ ಕೆಎಂ ರಸ್ತೆಯಲ್ಲಿ ವಾಸವಾಗಿದ್ದ ಶಿಕ್ಷಕ ವೆಂಕಟೇಶ್ ಎಂಬುವರಿಗೆ ಸೇರಿದ ಕಾರು ಸುಟ್ಟು ಹೋಗಿದೆ. ಬೆಳಗ್ಗಿನ ಜಾವ ಎರಡು ಗಂಟೆ ಸುಮಾರಿಗೆ ಬಂದು ಕಿಡಿಗೇಡಿ ಕಾರಿಗೆ ಬೆಂಕಿ ಇಟ್ಟಿದ್ದಾನೆ.

ಘಟನೆಯಲ್ಲಿ ಕಾರಿನ ಇಂಜಿನ್, ಟೈರ್​ಗಳು ಸೇರಿದಂತೆ ಕಾರು ಬಹುತೇಕ ಸುಟ್ಟು ಹೋಗಿದೆ. ಘಟನೆ ಸಂಬಂಧ ಶಿಕ್ಷಕ ವೆಂಕಟೇಶ್ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. ಕಳೆದ ತಿಂಗಳಷ್ಟೇ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನ ದುಷ್ಕರ್ಮಿಗಳು ಗ್ಲಾಸ್ ಒಡೆದಿದ್ದರು.

ಇದನ್ನೂ ಓದಿ: Maharashtra Crisis: ಉದ್ಧವ್ ಠಾಕ್ರೆ ಸರ್ಕಾರಕ್ಕೆ ಬಂಡಾಯದ ಬಿಸಿ; ಶಿಂಧೆ ಬಣದಿಂದ ಅವಿಶ್ವಾಸ ನಿರ್ಣಯ ಮಂಡನೆ?

Published On - 9:33 am, Tue, 28 June 22