ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಜ್ಯುವೆಲರಿ ಸಿಬ್ಬಂದಿ ಪ್ರತಿಭಟನೆ

ಸಿಸಿಟಿವಿ ದೃಶ್ಯಾವಳಿ ಮತ್ತು ಇನ್ಸ್ ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ವಿಡಿಯೋ ವೈರಲ್ ಆಗಿದೆ. ಜ್ಯುವೆಲರಿ ಸಿಬ್ಬಂದಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಜ್ಯುವೆಲರಿ ಸಿಬ್ಬಂದಿ ಪ್ರತಿಭಟನೆ
ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಜ್ಯುವೆಲರಿ ಸಿಬ್ಬಂದಿ ಪ್ರತಿಭಟನೆ
Edited By:

Updated on: Jul 04, 2022 | 10:58 AM

ಬೆಂಗಳೂರು: ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಜ್ಯುವೆಲರಿ ಸಿಬ್ಬಂದಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ(Protest) ನಡೆಸುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಹಿನ್ನೆಲೆ ಇನ್ಸ್ಪೆಕ್ಟರ್ ನಡೆ ವಿರುದ್ಧ ಸಿಬ್ಬಂದಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಕದ್ದ ಚಿನ್ನಾಭರಣವನ್ನ ಖರೀದಿ ಮಾಡಿದ್ದ ಆರೋಪದ ಮೇಲೆ ಬೇಗೂರು ಬಳಿಯ ಪರಮೇಶ್ವರ ಜ್ಯುವೆಲರಿ ಶಾಪ್ ಮಾಲೀಕ ಬಾಬುಲಾಲ್ ನನ್ನು ಪೊಲೀಸರು ಅರೆಸ್ಟ್ ಮಾಡಿ‌ದ್ದರು. ಘಟನೆಯಲ್ಲಿ ತಲೆ‌ಮರೆಸಿಕೊಂಡಿದ್ದ ಮಗ ರವಿಗಾಗಿ ಹುಡುಕಾಟ‌ ನಡೆಸಲಾಗುತ್ತಿತ್ತು. ಈ ವೇಳೆ ಅಂಗಡಿಗೆ ಹೋಗಿದ್ದ ಇನ್ಸ್ ಪೆಕ್ಟರ್ ಗೆ ಸಂಬಂಧಿಕ ವ್ಯಂಗ್ಯದ ಪ್ರಶ್ನೆ ಮಾಡಿದ್ದಾರೆ. ಆಗ ತಾಳ್ಮೆ ಕಳೆದುಕೊಂಡ ತಿಲಕ್ ನಗರ ಠಾಣೆ ಇನ್ಸ್ ಪೆಕ್ಟರ್ ಶಂಕರಚಾರ್ಯ, ಪ್ರಶ್ನೆ ಮಾಡ್ತೀಯಾ ಅಂತ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಇನ್ಸ್ ಪೆಕ್ಟರ್‌, ವ್ಯಕ್ತಿಯನ್ನ ಎಳೆದು ಜೀಪ್ನಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ ಮೂರರಂದು ಘಟನೆ ನಡೆದಿದೆ. ಈ ಹಿನ್ನೆಲೆ ಜ್ಯುವೆಲರಿ ಸಿಬ್ಬಂದಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರನ್ನ ಮನವೊಲಿಸಿ ಕಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇನ್ಸ್ ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ವಿಡಿಯೋ ವೈರಲ್ ಆಗಿದೆ. ಬೊಮ್ಮನಹಳ್ಳಿ, ಬೇಗೂರು ಸುತ್ತಮುತ್ತಲಿನ ಮಾರ್ವಾಡಿಗಳಿಂದ ನೆನ್ನೆ ಪ್ರತಿಭಟನೆ ನಡೆದಿದೆ. ಇದನ್ನೂ ಓದಿ: Petrol Price Today: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಸಂತೆ ಮೈದಾನದ ಅರಳಿ ಮರದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸುನಿಲ್(36) ಎಂಬ ಯುವಕನ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತೀವ್ರ ಗಾಯಗಳಿಂದ ಬಿದ್ದಿದ್ದ ಸುನೀಲ್ರನ್ನು ಎಸಿ ಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸುನೀಲ್ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣ ಏನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಆರೋಪಿಗಳ ಶೋಧಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.

Published On - 10:58 am, Mon, 4 July 22