Petrol Price Today: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

Diesel Price on July 4: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ. ಆಗಿದೆ. ಡೀಸೆಲ್ ಬೆಲೆ 87.89 ರೂ. ಆಗಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಕಡಿತಗೊಳಿಸಿತ್ತು.

Petrol Price Today: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
ಪೆಟ್ರೋಲ್ ಬೆಲೆImage Credit source: Money Control
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 04, 2022 | 9:27 AM

Fuel Price Today: ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ (Diesel Price) ಏರಿಳಿತವಾಗುತ್ತಲೇ ಇರುತ್ತದೆ. ಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ನಂತರ ಕಳೆದ ಕೆಲವು ದಿನಗಳಿಂದ ಜನರಿಗೆ ಸ್ವಲ್ಪ ನಿರಾಳವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸುಮಾರು ಒಂದೂವರೆ ತಿಂಗಳ ಹಿಂದೆ (ಮೇ 21) ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಕಡಿತಗೊಳಿಸಿತ್ತು. ಇದಾದ ನಂತರ ತೈಲ ಬೆಲೆಯಲ್ಲಿ ಭಾರೀ ಕುಸಿತ ಕಂಡಿತ್ತು. ಈ ಹಿಂದೆ ಏಪ್ರಿಲ್ 6ರಂದು ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.

ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೀಗಿವೆ. ದೆಹಲಿ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈ ಪೆಟ್ರೋಲ್ ಬೆಲೆ 109.27 ರೂ. ಮತ್ತು ಡೀಸೆಲ್ ಲೀಟರ್‌ಗೆ 95.84 ರೂ. ಆಗಿದೆ. ಚೆನ್ನೈ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಆಗಿದೆ. ಕೊಲ್ಕತ್ತಾ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಆಗಿದೆ.

ಇದನ್ನೂ ಓದಿ: Petrol Price Today: ಪೆಟ್ರೋಲ್ ಡೀಸೆಲ್ ಬೆಲೆ ಯಥಾಸ್ಥಿತಿ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ದರ

ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.79 ರೂ. ಮತ್ತು ಡೀಸೆಲ್ 89.96 ರೂ ಆಗಿದೆ. ಆಗಿದೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ 89.76 ರೂ ಆಗಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ ಮತ್ತು ಡೀಸೆಲ್ 94.04 ರೂ ಆಗಿದೆ. ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಮೇ 21ರಂದು ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್ ಮೇಲೆ 6 ರೂ. ಕಡಿತಗೊಳಿಸಿದಾಗಿನಿಂದ ಒಂದು ತಿಂಗಳಿನಿಂದ ಬೆಲೆಗಳು ಬದಲಾಗದೆ ಯಥಾಸ್ಥಿತಿಯಲ್ಲಿ ಉಳಿದಿವೆ.

ಮುಂಬೈನಲ್ಲಿ ಪೆಟ್ರೋಲ್ 111.35 ರೂ. ಮತ್ತು ಡೀಸೆಲ್ 97.28 ರೂ. ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಚೆನ್ನೈನಲ್ಲಿ ರೂ.102.63 ಮತ್ತು ರೂ.94.24 ಆಗಿದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ರೂ.106.03 ಮತ್ತು ಡೀಸೆಲ್ ರೂ.92.76 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ. ಆಗಿದೆ. ಡೀಸೆಲ್ ಬೆಲೆ 87.89 ರೂ. ಆಗಿದೆ.

ಇದನ್ನೂ ಓದಿ: Petrol Price Today: ಬೆಂಗಳೂರು, ಮುಂಬೈ ಸೇರಿ ವಿವಿಧೆಡೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ತೈಲ ಮಾರುಕಟ್ಟೆ ಕಂಪನಿಗಳು ದೇಶದಲ್ಲಿ ಗ್ರಾಹಕರಿಗೆ ಅಬಕಾರಿ ಸುಂಕ ಕಡಿತವನ್ನು ವರ್ಗಾಯಿಸಿದರೂ ಸಹ ಪೆಟ್ರೋಲ್ ಮೇಲೆ 13.08 ರೂ ಮತ್ತು ಡೀಸೆಲ್ ಮೇಲೆ 24.09 ರೂ. ನಷ್ಟವನ್ನು ಅನುಭವಿಸುತ್ತಿವೆ. ಭಾರತವು ತನ್ನ ಶೇ. 80ರಷ್ಟು ಇಂಧನ ಅಗತ್ಯವನ್ನು ಆಮದಿನ ಮೂಲಕ ಪೂರೈಸುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ.