Parag Agrawal: ಟ್ವಿಟ್ಟರ್ ಸಿಇಒ ಅಗರ್ವಾಲ್ರ ಈ ಫೋಟೋ ಭಾರೀ ವೈರಲ್; ನೀವೂ ಒಮ್ಮೆ ನೋಡಿಬಿಡಿ
ಲಂಡನ್ನಲ್ಲಿರುವ ಟ್ವಿಟ್ಟರ್ನ ಮುಖ್ಯ ಕಚೇರಿಯಲ್ಲಿ ಕಂಪೆನಿಯ ಸಿಇಒ ಪರಾಗ್ ಅಗರ್ವಾಲ್ ಅವರು ತಮ್ಮದೇ ಸಿಬ್ಬಂದಿಗೆ ಕಾಫೀ ಹಂಚುತ್ತಿರುವ ಫೋಟೋ ವೈರಲ್ ಆಗಿದೆ.
ಇಂಥದ್ದನ್ನೆಲ್ಲ ಊಹೆ ಮಾಡುವುದು ಕೂಡ ಕಷ್ಟ ಬಿಡಿ, ಅಂಥದ್ದರಲ್ಲಿ ನಿಜವಾಗಿಯೂ ಆ ಘಟನೆ ನಡೆದಿದೆ ಹಾಗೂ ಅದರ ಫೋಟೋ ಹರಿದಾಡುತ್ತಿದೆ ಅಂದರೆ ಕೇಳಬೇಕಾ! ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ (Parag Agrawal) ಅವರು ತಮ್ಮ ಕಂಪೆನಿಯ ಸಿಬ್ಬಂದಿಗೆ ತಾವೇ ಕಾಫೀ ಹಂಚುತ್ತಿರುವುದು ಭಾರೀ ವೈರಲ್ ಆಗಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಕಳೆದ ವಾರ ಲಂಡನ್ನಲ್ಲಿ ಸರಣಿ ಸಭೆಗಳಲ್ಲಿ ಪರಾಗ್ ಭಾಗವಹಿಸಿದ್ದಾರೆ. ಆ ವೇಳೆ ಟ್ವಿಟ್ಟರ್ನ ಲಂಡನ್ ಮುಖ್ಯಕಚೇರಿಯಲ್ಲಿ ಸಿಬ್ಬಂದಿಗೆ ತಾವೇ ಕಾಫೀಯನ್ನು ಸರ್ವ್ ಮಾಡಿದ್ದಾರರೆ. ಇನ್ನು ಟ್ವಿಟ್ಟರ್ನ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಕುಕ್ಕೀಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ದಾರಾ ನಾಸರ್ ಕೂಡ ಇದ್ದರು. ಈ ರೀತಿ ಅಪರೂಪಕ್ಕೆ ಕಾಫಿಯನ್ನು ಸರ್ವ್ ಮಾಡುವಂಥ ಸಿಇಒರನ್ನು ಯಾರು ಪ್ರೀತಿಸಲ್ಲ?
Your CEO could never… @paraga and @DaraNasr taking coffee orders from Twitter London… ❤️#LoveWhereYouWork ❤️ pic.twitter.com/p6ci0pFbkv
— moni ?? (@moni_natasha) June 29, 2022
ಪರಾಗ್ ಅಗರ್ವಾಲ್ರ ಯು.ಕೆ. ಪ್ರವಾಸದ ವೇಳೆ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಕೂಡ ಇತ್ತು. ಅಂದಹಾಗೆ ಪರಾಗ್ ಅವರ ಈ ಪ್ರವಾಸ ಏಕೆ ಮುಖ್ಯ ಎನಿಸುತ್ತದೆ ಅಂದರೆ, ಎಲಾನ್ ಮಸ್ಕ್ ಅವರ ಟ್ವಿಟ್ಟರ್ ಖರೀದಿ ನಿರ್ಧಾರ ಇನ್ನೂ ಹಲವು ಗೋಜಲುಗಳಿಂದ ಕೂಡಿದೆ. ಕಳೆದ ಮೇ ತಿಂಗಳಲ್ಲಿ ಅಗರ್ವಾಲ್ ಅವರು ಈಚಿನ ನಾಯಕತ್ವ ಬದಲಾವಣೆ ವಿಚಾರವಾಗಿ ವಿವರಣೆ ನೀಡಿದ್ದರು. ಈಗಲೂ ಎಲಾನ್ ಮಸ್ಕ್ ಜತೆಗೆ ಖರೀದಿ ವ್ಯವಹಾರ ಸುಲಲಿತವಾಗಿ ನಡೆಯುತ್ತದೆ ಎಂದು ಟ್ವಿಟ್ಟರ್ ತಂಡವು ಭಾವಿಸಿದೆ.
ಈ ಹಿಂದೆ ಅಗರ್ವಾಲ್ ಹೇಳಿದ್ದ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಕಂಪೆನಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಆ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ. ಆದರೆ ಈಗ ಮಾತನಾಡುತ್ತೇನೆ ಎಂದಿದ್ದರು. ಆ ದೀರ್ಘವಾದ ವಿವರಣೆ ಬಂದಿದ್ದು ಟ್ವಿಟ್ಟರ್ನ ಇಬ್ಬರು ಉನ್ನತ ಸ್ಥಾನದ ಅಧಿಕಾರಿಗಳನ್ನು ಉದ್ಯೋಗದಿಂದ ತೆಗೆದ ನಂತರ. ಇನ್ನು ಅದೇ ವೇಳೆ ಟ್ವಿಟ್ಟರ್ ಖರೀದಿ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆದಿರುವುದಾಗಿ ಎಲಾನ್ ಮಸ್ಕ್ ಹೇಳಿದ್ದರು.
“ಕಳೆದ ಕೆಲವು ವಾರಗಳಲ್ಲಿ ಬಹಳಷ್ಟು ನಡೆದಿದೆ. ನಾನು ಕಂಪೆನಿ ಬಗ್ಗೆ ಗಮನ ಹರಿಸುತ್ತಿದ್ದೇನೆ ಮತ್ತು ಈ ಸಮಯದಲ್ಲಿ ಬಹಳ ಹೇಳಿಲ್ಲ. ಆದರೆ ಈಗ ಹೇಳುತ್ತೇನೆ,” ಎಂದು ಅಗರ್ವಾಲ್ ಟ್ವೀಟ್ ಮಾಡಿದ್ದರು. 44 ಬಿಲಿಯನ್ ಯುಎಸ್ಡಿ ಟ್ವಿಟ್ಟರ್ ವ್ಯವಹಾರ ಎಲಾನ್ ಮಸ್ಕ್ರಿಂದ ಮುಕ್ತಾಯ ಆಗುವಾಗ ತಂಡವು ಎಂಥದ್ದೇ ಸನ್ನಿವೇಶಕ್ಕೆ ಸಿದ್ಧರಾಗಿರಬೇಕು ಎಂದು ಅಗರ್ವಾಲ್ ಹೇಳಿದ್ದರು.
ಇದನ್ನೂ ಓದಿ: Elon Musk Twitter Deal: ಟ್ವಿಟ್ಟರ್ ಜತೆ ಒಪ್ಪಂದ ಕೊನೆಗೊಳಿಸುವ ಬಗ್ಗೆ ಎಲಾನ್ ಮಸ್ಕ್ ಪತ್ರ ಹೇಳುವುದೇನು?