Job Loss: ಟೆಕ್, ಸ್ಟಾರ್ಟ್ ಅಪ್ ವಲಯದಲ್ಲಿ 22 ಸಾವಿರ ಉದ್ಯೋಗಗಳಿಗೆ ಕತ್ತರಿ; ಎರಡು ವರ್ಷದ ನೀರ ಮೇಲಣ ಗುಳ್ಳೆ ಫಳ್

ಭಾರತದ ಟೆಕ್ ಮತ್ತು ಸ್ಟಾರ್ಟ್​​ಅಪ್​ಗಳ 12,000 ಉದ್ಯೋಗಗಳು ಸೇರಿದಂತೆ 22,000 ಉದ್ಯೋಗಿಗಳು 2022ನೇ ಇಸವಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.

Job Loss: ಟೆಕ್, ಸ್ಟಾರ್ಟ್ ಅಪ್ ವಲಯದಲ್ಲಿ 22 ಸಾವಿರ ಉದ್ಯೋಗಗಳಿಗೆ ಕತ್ತರಿ; ಎರಡು ವರ್ಷದ ನೀರ ಮೇಲಣ ಗುಳ್ಳೆ ಫಳ್
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Jul 04, 2022 | 2:58 PM

ಕ್ರಂಚ್‌ಬೇಸ್ ಪ್ರಕಾರ, ಕೊರೊನಾ ಸಾಂಕ್ರಾಮಿಕ ಸನ್ನಿವೇಶದಲ್ಲಿ ಅದ್ಭುತ ಲಾಭ ಪಡೆದ ಕಂಪೆನಿಗಳು ಆರ್ಥಿಕ ಕುಸಿತದ ಮಧ್ಯೆ ಒತ್ತಡವನ್ನು ಅನುಭವಿಸುತ್ತಿರುವುದರಿಂದ 2022ರಲ್ಲಿ ಭಾರತೀಯ ಸ್ಟಾರ್ಟಪ್ ಎಕೋ ಸಿಸ್ಟಮ್​ನಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದಂತೆ ಟೆಕ್ ಮತ್ತು ಸ್ಟಾರ್ಟ್‌ಅಪ್ ವಲಯದಲ್ಲಿ ಸುಮಾರು 22,000 ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ (Job Loss). ಸ್ಟಾರ್ಟ್​ಅಪ್​ಗಳಿಗೆ ನಿಧಿ ಸಂಗ್ರಹ ಬಹಳ ಕಷ್ಟವಾಗಿದ್ದು, ಅವುಗಳ ಮೌಲ್ಯಮಾಪನ ಇಳಿಯುವುದಕ್ಕೆ ಶುರುವಾಗಿದೆ ಎಂದು ವರದಿ ಆಗಿದೆ. ಓಲಾ, ಅನ್​ಅಕಾಡೆಮಿ, ವೇದಾಂಟು, ಕಾರ್ಸ್ 24 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ನಂತಹ ಹಲವಾರು ಯುನಿಕಾರ್ನ್‌ಗಳು “ಪುನರ್​ರಚನೆ ಮತ್ತು ವೆಚ್ಚ ಕಡಿತ”ದ ಹೆಸರಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ಬ್ಲಿಂಕ್​ಇಟ್ (Blinkit), ಬೈಜು (White Hat Jr, Toppr), FarEye, Trellನಂತಹ ಕಂಪೆನಿಗಳು ಈ ವರ್ಷ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿರುವ ಸ್ಟಾರ್ಟ್​ಅಪ್​ಗಳ ಸಾಲಿಗೆ ಸೇರಿವೆ.

ವರದಿಯ ಪ್ರಕಾರ, ಭಾರತೀಯ ಸ್ಟಾರ್ಟ್ಅಪ್ ವಲಯವು “ನಿಧಿ ಸಂಗ್ರಹ ಸಮಸ್ಯೆ” ಸರಿದೂಗಿಸಲು 60,000ಕ್ಕೂ ಹೆಚ್ಚು ಉದ್ಯೋಗ ನಷ್ಟಗಳಿಗೆ ಸಾಕ್ಷಿ ಆಗಬಹುದು. ಉದ್ಯಮದ ತಜ್ಞರನ್ನು ಉಲ್ಲೇಖಿಸಿದ ವರದಿಯು ತಿಳಿಸುವಂತೆ, 2022ರಲ್ಲಿ “ಪುನರ್​ರಚನೆ ಮತ್ತು ವೆಚ್ಚ ಕಡಿತ” ಹೆಸರಿನಲ್ಲಿ ಕನಿಷ್ಠ 50,000 ಸ್ಟಾರ್ಟ್​ಅಪ್ ಉದ್ಯೋಗಿಗಳನ್ನು ವಜಾ ಮಾಡುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಆದರೆ ಕೆಲವು ಸ್ಟಾರ್ಟ್‌ಅಪ್‌ಗಳು ಕೋಟ್ಯಂತರ ರೂಪಾಯಿ ನಿಧಿಯನ್ನು ಪಡೆಯುತ್ತಲೇ ಇವೆ.

ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಕಂಪೆನಿಗಳು, ಹಣಕಾಸು ಸೇವೆಗಳ ಕಂಪೆನಿ ರಾಬಿನ್‌ಹುಡ್ ಮತ್ತು ಹಲವಾರು ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳು – ಆರ್ಥಿಕ ಹೊಡೆತಕ್ಕೆ ಜರ್ಝರಿತವಾಗಿವೆ- ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಿವೆ. ಹೂಡಿಕೆದಾರರು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಸ್ಟಾರ್ಟ್‌ಅಪ್‌ಗಳ ಮೂಲಕ ಫಿಲ್ಟರಿಂಗ್ ಪ್ರಾರಂಭಿಸಲು ಸ್ಟಾಕ್ ಮಾರುಕಟ್ಟೆಯಲ್ಲಿ ಐತಿಹಾಸಿಕ ಕುಸಿತಕ್ಕೆ ತಡೆ ಮಾಡಬೇಕು ಎಂದು ಯುಎಸ್ ಮೂಲದ ಸಫೈರ್ ವೆಂಚರ್ಸ್‌ನ ಪಾಲುದಾರ ಸಂಸ್ಥೆ ಹೇಳಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

“ನಾವು ಮುಂದೆ ಕೆಲವು ಕಷ್ಟದ ಸಮಯಗಳನ್ನು ಎದುರಿಸಲಿದ್ದೇವೆ – ಇದು ಒಂದು ತ್ರೈಮಾಸಿಕಕ್ಕೋ, ಎರಡು ತ್ರೈಮಾಸಿಕವೋ, ಮೂರು ಅಥವಾ ಅದಕ್ಕಿಂತ ಹೆಚ್ಚೋ ಎಂದು ನನಗೆ ಗೊತ್ತಿಲ್ಲ,” ಎಂಬುದಾಗಿ ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಕ್ಯಾಥಿ ಗಾವೊ ಹೇಳಿದ್ದಾರೆ. “ಎಲ್ಲರಿಗೂ ನನ್ನ ಸಂದೇಶವೆಂದರೆ, ಇದು ನಿಮ್ಮೊಳಗೆ ನೋಡಿಕೊಳ್ಳಲು ಸಮಯ. ನಿಮ್ಮ ವ್ಯಾಪ್ತಿಯಲ್ಲಿ ಬರುವುದನ್ನು ಸರಿಯಾಗಿಟ್ಟುಕೊಳ್ಳಲು ಮತ್ತು ಭವಿಷ್ಯಕ್ಕಾಗಿ ಸಿದ್ಧವಾಗಿರಲು ಒಂದು ಅವಕಾಶವಾಗಿದೆ,” ಎಂದಿದ್ದಾರೆ.

“ನನ್ನ ಹಂತವು ಇದೀಗ ಸ್ವಲ್ಪ ಮಟ್ಟಿಗೆ ಸ್ಥಗಿತ ಆಗಿದೆ ಏಕೆಂದರೆ, ಒಂದು ಕಡೆ 2021ರಲ್ಲಿ ಬಹಳಷ್ಟು ಕಂಪೆನಿಗಳು ಬಹಳ ಹಣವನ್ನು ಸಂಗ್ರಹಿಸಿವೆ – ಅವರು 30 ತಿಂಗಳ ನಡೆಸುವ ಅವಕಾಶ ಹೊಂದಿರಬಹುದು,” ಎಂದು ಗಾವೊ ಹೇಳಿದ್ದಾರೆ. “ಮತ್ತೊಂದೆಡೆ, ಹೂಡಿಕೆದಾರರಿಗೆ ಮೌಲ್ಯಮಾಪನವು ಇನ್ನೂ ಎಲ್ಲಿ ನಿಲ್ಲಲಿದೆ ಎಂದು ತಿಳಿದಿಲ್ಲ,” ಎಂದು ಸಹ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Netflix: ವೆಚ್ಚ ತಗ್ಗಿಸುವ ಉದ್ದೇಶಕ್ಕೆ ನೆಟ್​ಫ್ಲಿಕ್ಸ್​ನಿಂದ 300 ಉದ್ಯೋಗಿಗಳ ವಜಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada