Netflix: ವೆಚ್ಚ ತಗ್ಗಿಸುವ ಉದ್ದೇಶಕ್ಕೆ ನೆಟ್​ಫ್ಲಿಕ್ಸ್​ನಿಂದ 300 ಉದ್ಯೋಗಿಗಳ ವಜಾ

ಅಮೆರಿಕ ಮೂಲದ ನೆಟ್​ಫ್ಲಿಕ್ಸ್ 300 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ.

Netflix: ವೆಚ್ಚ ತಗ್ಗಿಸುವ ಉದ್ದೇಶಕ್ಕೆ ನೆಟ್​ಫ್ಲಿಕ್ಸ್​ನಿಂದ 300 ಉದ್ಯೋಗಿಗಳ ವಜಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 24, 2022 | 12:43 PM

ಸ್ಟ್ರೀಮಿಂಗ್ ಕಂಪೆನಿಯಾದ ನೆಟ್​ಫ್ಲಿಕ್ಸ್ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರನ್ನು ಕಳೆದುಕೊಂಡ ನಂತರ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ (Job Cut) 300 ಉದ್ಯೋಗಿಗಳನ್ನು ಅಥವಾ ಅದರ ಸುಮಾರು ಶೇ 4ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನೆಟ್​ಫ್ಲಿಕ್ಸ್​ ಇಂಕ್​ (Netflix Inc) ಹೇಳಿದೆ. ಈ ಕ್ರಮವು ಹೆಚ್ಚಾಗಿ ಅದರ ಅಮೆರಿಕ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿತು ಮತ್ತು ಕಂಪೆನಿಯು ಕಳೆದ ತಿಂಗಳು 150 ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ ಈ ನಿರ್ಧಾರ ಬಂದಿತು.

“ನಾವು ವ್ಯವಹಾರದಲ್ಲಿ ಗಣನೀಯವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿರುವಾಗ ಈ ಹೊಂದಾಣಿಕೆಗಳನ್ನು ಮಾಡಿದ್ದೇವೆ. ಇದರಿಂದ ನಮ್ಮ ನಿಧಾನಗತಿಯ ಆದಾಯದ ಬೆಳವಣಿಗೆಗೆ ಅನುಗುಣವಾಗಿ ನಮ್ಮ ವೆಚ್ಚಗಳು ಬೆಳೆಯುತ್ತಿವೆ,” ಎಂದು ನೆಟ್‌ಫ್ಲಿಕ್ಸ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಹಣದುಬ್ಬರ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ತೀವ್ರ ಪೈಪೋಟಿ ಚಂದಾದಾರರ ಬೆಳವಣಿಗೆ ಮೇಲೆ ತೂಗುತ್ತಿರುವಂತೆ ಇತ್ತೀಚಿನ ತಿಂಗಳಲ್ಲಿ ವಿಶ್ವದ ಪ್ರಬಲ ಸ್ಟ್ರೀಮಿಂಗ್ ಸೇವೆಯು ಒತ್ತಡಕ್ಕೆ ಒಳಗಾಗಿದೆ. ಮೊದಲ ತ್ರೈಮಾಸಿಕದಲ್ಲಿ ಚಂದಾದಾರರ ಕುಸಿತದ ನಂತರ, ನೆಟ್‌ಫ್ಲಿಕ್ಸ್ ಸದ್ಯದ ಅವಧಿಗೆ ಇನ್ನೂ ಹೆಚ್ಚಿನ ನಷ್ಟ ಆಗುವ ಬಗ್ಗೆ ಸೂಚಿಸಿದೆ. ಆ ಇಳಿಕೆಯನ್ನು ತಡೆಯಲು, ಕಂಪೆನಿಯು ಅಗ್ಗದ, ಜಾಹೀರಾತು-ಬೆಂಬಲಿತ ಚಂದಾದಾರಿಕೆ ಶ್ರೇಣಿಯನ್ನು ಪರಿಚಯಿಸಲು ಯೋಜಿಸಿದ್ದು, ಇದಕ್ಕಾಗಿ ಹಲವಾರು ಕಂಪೆನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಇದನ್ನೂ ಓದಿ: Rupek Lay Offs: ರುಪೇಕ್​ನಿಂದ 180ಕ್ಕೂ ಹೆಚ್ಚು ಉದ್ಯೋಗಿಗಳ ವಜಾ; ಸ್ಥೂಲ ಆರ್ಥಿಕತೆಯ ಹೊಡೆತ ಬಿದ್ದ ಮೊದಲ ಫಿನ್​ಟೆಕ್

Published On - 12:43 pm, Fri, 24 June 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು