ಶಾಲಾ ಬ್ಯಾಗ್ ಹೊರೆಯಿಂದ ಮಕ್ಕಳಿಗೆ ಕಾಡುತ್ತಿದೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ! ಶಿಕ್ಷಣ ಇಲಾಖೆಯ ನಿರ್ಧಾರ ಏನು?
ಸದ್ಯ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಶಿಕ್ಷಣ ಸಚಿ ಬಿಸಿ ನಾಗೇಶ್ ಅವರು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು (Schools) ಆರಂಭದ ಬೆನ್ನಲ್ಲೇ ಹೊಸ ಆತಂಕವೊಂದು ಶುರುವಾಗಿದ್ದು, ಶಾಲಾ ಬ್ಯಾಗ್ (School Bag) ಹೊರೆಯಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆ ಪ್ರತಿ ಶನಿವಾರದಂದು ಬ್ಯಾಗ್ ಲೆಸ್ ಡೇ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಶನಿವಾರ ಮಕ್ಕಳ ಬ್ಯಾಗ್ ಹೊರೆ ಇಳಿಸಲು ನಿರ್ಧರಿಸಿರುವ ಇಲಾಖೆ, ಯೋಗ, ವ್ಯಾಯಾಮ ಚಟುವಟಿಕೆ ಮಾಡಿಸಲು ಸಲಹೆ ನೀಡಿದೆ. ಸದ್ಯ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ಮಕ್ಕಳು ಎರಡೂವರೆ ವರ್ಷಗಳ ಕಾಲ ಆನ್ಲೈನ್ ಪಾಠ ಕೇಳಿದ್ದರು. ಈ ವೇಳೆ ಬ್ಯಾಗ್ ಹೊರುವ ಅನಿವಾರ್ಯತೆ ಇರಲಿಲ್ಲ. ಇದೀಗ ಪೂರ್ಣ ಪ್ರಮಾಣದ ಶಾಲೆಗಳು ಆರಂಭವಾಗುತ್ತಿದ್ದಂತೆ ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಏಕಾಏಕಿ ಭಾರದ ಬ್ಯಾಗ್ ಹಿಡಿದು ಹೋಗುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಪೋಷಕರಿಗೆ ಆತಂಕ ಶುರುವಾಗಿದೆ.
ಇದನ್ನೂ ಓದಿ: Murder: ಟೀಚರ್ ಜೊತೆ ಅಕ್ರಮ ಸಂಬಂಧ; ಭಯದಿಂದ ಶಿಕ್ಷಕಿಯನ್ನೇ ಕೊಂದ ಪಿಯುಸಿ ವಿದ್ಯಾರ್ಥಿ
10 ರಿಂದ 15 ಕೆಜಿ ಭಾರದ ಬ್ಯಾಗ್ನಿಂದ ಮಕ್ಕಳ ದೇಹದ ಆಕಾರ ಬದಲಾಗುವ ಸಾಧ್ಯತೆಯಿದೆ. ಈ ಬಗ್ಗೆ ಪೋಷಕರು ಶಿಕ್ಷಣ ಇಲಾಖೆಯ ಗಮನಕ್ಕೆ ತರುತ್ತಿದ್ದಾರೆ. ಪೋಷಕರ ದೂರು ಹಿನ್ನೆಲೆ ಶಿಕ್ಷಣ ಇಲಾಖೆ ಶನಿವಾರ ಬ್ಯಾಗ್ ಲೆಸ್ ಡೇ ತರಲು ಶಾಲೆಗಳಿಗೆ ಸೂಚಿಸಲು ಮುಂದಾಗಿದೆ.
ಇಲಾಖೆಯ ಕೆಲ ಸೂಚನೆಗಳು: ಶಿಕ್ಷಣ ಇಲಾಖೆ ಶಾಲೆಗಳಿಗೆ ಕೆಲ ಸೂಚನೆ ನೀಡಲು ನಿರ್ಧರಿಸಿದೆ. * 5 ದಿನ ಮಾತ್ರ ಪಠ್ಯ ಪ್ರಾಯೋಗಿಕ ಪುಸ್ತಕ ತರುವಂತೆ ಮಕ್ಕಳಿಗೆ ಸೂಚಿಸಿ. * ಅಗತ್ಯ ಹಾಗೂ ವೇಳಾಪಟ್ಟಿಗೆ ತಕ್ಕಂತೆ ಪಠ್ಯ ಹಾಗೂ ಬ್ಯಾಗ್ ಇರಲಿ. * ಶನಿವಾರ ಮಕ್ಕಳಿಗೆ ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡಿಸಿ.
Published On - 9:02 am, Mon, 4 July 22