Ayurveda: ಚಿಕನ್ ತಿಂದ ಬಳಿಕ ಹಾಲು ಕುಡಿಯಬಾರದು, ಆಯುರ್ವೇದ ಏನು ಹೇಳುತ್ತೆ?
ಸಾಮಾನ್ಯವಾಗಿ ಯಾವುದೇ ಆಹಾರವನ್ನು ಸೇವಿಸಿದ ಬಳಿಕ ಹಾಲು ಕುಡಿಯುವ ಅಭ್ಯಾಸ ಬಹುತೇಕರಿಗೆ ಇರುತ್ತದೆ. ಆದರೆ ಚಿಕನ್ ಅಥವಾ ಯಾವುದೇ ಮಾಂಸಾಹಾರವನ್ನು ಸೇವಿಸಿದ ಬಳಿಕ ಹಾಲನ್ನು ಕುಡಿಯಬಾರದು ಎಂದು ಆಯುರ್ವೇದ ಹೇಳುತ್ತೆ.
ಸಾಮಾನ್ಯವಾಗಿ ಯಾವುದೇ ಆಹಾರವನ್ನು ಸೇವಿಸಿದ ಬಳಿಕ ಹಾಲು ಕುಡಿಯುವ ಅಭ್ಯಾಸ ಬಹುತೇಕರಿಗೆ ಇರುತ್ತದೆ. ಆದರೆ ಚಿಕನ್ ಅಥವಾ ಯಾವುದೇ ಮಾಂಸಾಹಾರವನ್ನು ಸೇವಿಸಿದ ಬಳಿಕ ಹಾಲನ್ನು ಕುಡಿಯಬಾರದು ಎಂದು ಆಯುರ್ವೇದ ಹೇಳುತ್ತೆ. ಹಾಲಿನ ಜತೆಗೆ ಉಪ್ಪು ಬೆರೆಸಿದ ಆಹಾರವು ಆರೋಗ್ಯದ ವಿರುದ್ಧ ಕೆಲಸ ಮಾಡುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಂಸ್ಯೆಗಳು ನಿಮ್ಮನ್ನು ಕಾಡಬಹುದು.
ಒಂದೊಮ್ಮೆ ಆಹಾರವನ್ನು ಅಸಮತೋಲನವಾಗಿದ್ದರೆ, ವಾತ, ಪಿತ್ತ, ಕಫದ ದೋಷಗಳು ಉಂಟಾಗುತ್ತವೆ. ಚಿಕನ್ ಅಥವಾ ಇತರೆ ಮಾಂಸಾಹಾರದ ಜತೆಗೆ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಮಾಂಸಾಹಾರ ಹಾಗೂ ಹಾಲು ಜೀರ್ಣವಾಗಲು ಪ್ರತ್ಯೇಕ ಶಕ್ತಿಯ ಅಗತ್ಯವಿರುತ್ತದೆ. ಚಿಕನ್ನಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಜೀರ್ಣಕ್ರಿಯೆ ತಡವಾಗುತ್ತದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದ ಎಲ್ಲೆಡೆ ನಾನ್ ವೆಜ್ ಸೇವಿಸುವ ಜನರು ಹೆಚ್ಚಾಗಿ ಇದ್ದಾರೆ. ಹೇಳುತ್ತಿರುವ ವಿಷಯ ರುಚಿಕರವಾದ ಚಿಕನ್ ಊಟವನ್ನು ಮಾಡಿ, ಕೊನೆಯಲ್ಲಿ ಹಾಲು ಸೇವಿಸುವ ಮಂದಿಗೆ ಹೆಚ್ಚು ಅನ್ವಯವಾಗುತ್ತದೆ. ಏಕೆಂದರೆ ಚಿಕನ್ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಹೌದು, ಆಯುರ್ವೇದದ ಪ್ರಕಾರ ಮಾಂಸ ಮತ್ತು ಹಾಲು ಅಥವಾ ಹಾಲಿನ ಉತ್ಪನ್ನಗಳು ಒಂದಕ್ಕೊಂದು ಭಿನ್ನವಾದ ಆಹಾರವಾಗಿದೆ. ಇವು ಹೊಟ್ಟೆಗೆ ಒಟ್ಟಿಗೆ ಸೇರಿದಾಗ ವಿಷಕಾರಿ ವಸ್ತುಗಳನ್ನು ಸೃಷ್ಟಿಸುತ್ತವೆ. ಇದು ಹೊಟ್ಟೆಯ ತೊಂದರೆಗಳಿಗೆ ಮಾತ್ರವಲ್ಲದೆ, ಚರ್ಮದ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಮಾಂಸ ಮತ್ತು ಹಾಲು ದೇಹಕ್ಕೆ ಆರೋಗ್ಯಕರ ಎಂದು ಹೇಳಲಾಗುತ್ತದೆಯಾದರೂ, ಅವುಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ. ಮೊಸರನ್ನು ಚಿಕನ್ನಲ್ಲಿ ನೆನಸಿಟ್ಟಿ ಸೇವಿಸುವುದು ಸಹ ಒಳ್ಳೆಯದಲ್ಲ ಎನ್ನಲಾಗಿದೆ. ನೀವು ಈ ರೀತಿಯಾಗಿ ಆಹಾರವನ್ನು ಸೇವಿಸಿದರೆ, ನಿಮಗೆ ಚರ್ಮದ ಕಾಯಿಲೆಗಳು ಬರಬಹುದು ಎನ್ನುತ್ತಾರೆ ತಜ್ಞರು.