ಎಚ್ಚರ ಪೋಷಕರೇ ಎಚ್ಚರ… ಹೇಳಿಕೊಳ್ಳಲು ಇದೊಂದು ಬುಕ್ಸ್ಟಾಲ್, ಒಳಗಡೆ ನಡೆಯುತ್ತಿತ್ತು ಸೆಲ್ಯೂಷನ್ ದಂಧೆ!
Bengaluru: ಹೇಳಿಕೊಳ್ಳಲು ಇದೊಂದು ಬುಕ್ಸ್ಟಾಲ್ ಅಷ್ಟೆ, ಆದರೆ ಇಲ್ಲಿ ನಡೆಯುತ್ತಿದ್ದ ದಂಧೆ ಕೇಳಿದರೆ ಪೋಷಕರು ಬೆಚ್ಚಿಬೀಳುವುದು ಖಚಿತ. ಬುಕ್ಸ್ಟಾಲ್ನಲ್ಲಿ ನಡೆಯುತ್ತಿತ್ತು ಸೆಲ್ಯೂಷನ್ ದಂಧೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು: ಹೇಳಿಕೊಳ್ಳಲು ಇದೊಂದು ಬುಕ್ಸ್ಟಾಲ್ ಅಷ್ಟೆ, ಆದರೆ ಇಲ್ಲಿ ನಡೆಯುತ್ತಿದ್ದ ದಂಧೆ ಕೇಳಿದರೆ ಪೋಷಕರು ಬೆಚ್ಚಿಬೀಳುವುದು ಖಚಿತ. ಈ ಹಿಂದೆ ಬಡ ಹುಡುಗನೊಬ್ಬ ಮತ್ತಿನಲ್ಲಿ ತೇಲಾಡಲು ಇದೇ ಬುಕ್ ಸ್ಟಾಲ್ ಕಾರಣ. ಈ ಬುಕ್ ಸ್ಟಾಲ್ಗೆ ಬಂದ ಅದೆಷ್ಟು ಮಂದಿ ಮತ್ತಿನಲ್ಲಿ ತೇಲಾಡಿದ್ದಾರೋ? ಹೈ ಎಂಡ್ ಡ್ರಗ್ಸ್ ಖರೀದಿ ಮಾಡಲು ಆಗದಿದ್ದವರಿಗೆ ಈ ಸ್ಟಾಲ್ ಸ್ವರ್ಗವಿದ್ದಂತೆ. ಹಾಗಿದ್ದರೆ ಏನಿದು ದಂಧೆ? ದಂಧೆಕೋರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ರಾಬರಿ ನಡೆಸಲು ಯತ್ನಿಸಿದಾಗ ತಬ್ರೇಜ್ ಹಾಗೂ ತೌಸಿಫ್ ಎಂಬ ಆರೋಪಿಗಳು ಸದಾಶಿವನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸ್ವತಃ ಸಾರ್ವಜನಿಕರೇ ಆರೋಪಿಗಳನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆ ಆರೋಪಿಗಳು ಜಡ್ಜ್ ಮುಂದೆ ಹೇಳಿಕೆ ನೀಡಿದ್ದು, ಸಾರ್ವಜನಿಕರ ಮೆಲೇಯೇ ದೂರು ದಾಖಲು ಮಾಡಲಾಗಿತ್ತು. ಈ ನಡುವೆ ಆರೋಪಿಗಳು ಜೈಲಿನಲ್ಲಿ ಊಟನೂ ಮಾಡದೆ ಪೊಲೀಸರಿಗೆ ಕಾಟು ನೀಡುತ್ತಿದ್ದರು. ನೀರು ಕುಡಿದರೆ ವಾಂತಿ ಮಾಡಿಕೊಳ್ಳುತ್ತಿದ್ದರು. ವಾರಪೂರ್ತಿ ಊಟಮಾಡದೆ ಇರುತ್ತಿದ್ದರು.
ಇದನ್ನೂ ಓದಿ: ರಾಮಸಂದ್ರ ಬಳಿ ಯುವತಿ ಮೃತದೇಹ ಪತ್ತೆ ಪ್ರಕರಣ: ಇನ್ನೂ ಪತ್ತೆಯಾಗದ ಮೃತ ಯುವತಿಯ ಗುರುತು
ಆರೋಪಿಗಳ ಕಾಟದಿಂದ ಕಂಗೆಟ್ಟಿದ್ದ ಪೊಲೀಸರು, ಇವರ್ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಶಂಕಿಸಿ ಆರೋಪಿಗಳ ಹಿನ್ನೆಲೆ ಕಲೆ ಹಾಕಿಕೊಳ್ಳಲು ತನಿಖೆಗೆ ಇಳಿದರು. ಈ ವೇಳೆ ಆರೋಪಿಗಳ ನಶೆ ಹಾಗೂ ಬುಕ್ಸ್ಟಾಲ್ನಲ್ಲಿ ನಡೆಯುತ್ತಿದ್ದ ದಂಧೆ ಬೆಳಕಿಗೆ ಬಂದಿದೆ. ಅದರಂತೆ ಆರೋಪಿಗಳು ನಶೆಯಲ್ಲಿ ತೇಲಾಡಲು ಗಾಂಜಾ ಕಾರಣವಾಗಿರಬಹುದು ಎಂದು ಶಂಕಿಸಿದ್ದ ಪೊಲೀಸರಿಗೆ, ಆರೋಪಿಗಳು ಸೆಲ್ಯೂಷನ್ ಸೇವನೆ ಮಾಡುತ್ತಿದ್ದ ವಿಚಾರ ತಿಳಿದುಬಂದಿದೆ.
ಆರೋಪಿಗಳು ಸೆಲ್ಯೂಷನ್ ಸೆವಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತನಿಖೆಯನ್ನು ಇನ್ನಷ್ಟು ಅಳಕ್ಕೆ ಕೊಂಡೊಯ್ದ ಪೊಲೀಸರು, ಯಶವಂತಪುರ ಆರ್ಟಿಒ ಕಚೇರಿ ಬಳಿ ಇದ್ದ ಬುಕ್ಸ್ಟಾಲ್ನಲ್ಲಿ ನಡೆಯುತ್ತಿದ್ದ ದಂಧೆಯ ಮಾಹಿತಿ ಪಡೆದುಕೊಂಡರು. ಅದರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು 10ನೇ ತರಗತಿ ಹುಡುಗನಿಗೆ ಸೆಲ್ಯೂಷನ್ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸೆಲ್ಯೂಷನ್ ಯಾರಿಗೆ ಮಾರಟ ಮಾಡಬಹುದು?
ಮತ್ತೇರಿಸುವ ಸೆಲ್ಯೂಷನ್ ಅನ್ನು ಕಂಡಕಂಡವರಿಗೆ ಮಾರಾಟ ಮಾಡುವಹಾಗಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಾಟ ಮಾಡಬೇಕು. ವೈಟ್ನರ್ ಜೊತೆ ಈ ಸೆಲ್ಯೂಷನ್ ನೀಡಬೇಕು. ವೈಟ್ನರ್ ಹಚ್ಚಿ ಅದನ್ನು ಎರೈಸ್ ಮಾಡಲು ಈ ಸೆಲ್ಯೂಷನ್ ಬಳಸಲಾಗುತ್ತದೆ. ಆದರೆ ಆರೋಪಿ ಲೋಕೇಶ್, ವೈಟ್ನರ್ ಎತ್ತಿಟ್ಟುಕೊಂಡು ಸೆಲ್ಯೂಷನ್ ಮಾತ್ರ ಮಾರಟ ಮಾಡುತ್ತಿದ್ದನು. ಎರಡು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದ್ದು, ಯುವಕರು ಸೆಲ್ಯೂಷನ್ ಅನ್ನು ಬಟ್ಟೆಗೆ ಹಾಕಿಕೊಂಡು ಮೂಗಲ್ಲಿಟ್ಟು ಎಳಿತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡೀಸೆಲ್ ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು