ಡೀಸೆಲ್ ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು
ಡೀಸೆಲ್ ಟ್ಯಾಂಕರ್ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಹೊರವಲಯದ ಶೆಟ್ಟಿ ಕಾಲೇಜು ಬಳಿ ನಡೆದಿದೆ.
ಕಲಬುರಗಿ: ಡೀಸೆಲ್ (Diesel) ಟ್ಯಾಂಕರ್ (Tanker) ಕಾರು (Car) ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburgi) ಹೊರವಲಯದ ಶೆಟ್ಟಿ ಕಾಲೇಜು ಬಳಿ ನಡೆದಿದೆ. ಕಾರಿನಲ್ಲಿದ್ದ ಅಮೃತ್(21), ಆದರ್ಶ್(22) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಕಲಬುರಗಿಯ ಕರುಣೇಶ್ವರ ಕಾಲೋನಿ ನಿವಾಸಿಗಳು ಎಂದು ತಿಳಿದು ಬಂದಿದೆ. ಮತ್ತೊಬ್ಬರಿಗೆ ಗಾಯಗಳಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ ಕೆನ್ನೆ, ಎದೆ ಭಾಗ ಕಚ್ಚಿ ವಿಕೃತಿ ಮೆರೆದ ತಂದೆ ಪೊಲೀಸರ ವಶಕ್ಕೆ
ಬೆಂಗಳೂರಿನಲ್ಲಿ ಮರದ ಕೊಂಬೆ ಮುರಿದುಬಿದ್ದು ಮೂವರಿಗೆ ಗಾಯ
ಬೆಂಗಳೂರು: ಬಿಟಿಎಂ ಲೇಔಟ್ನ ತಾವರೆಕೆರೆ ರಸ್ತೆಯ ಬಸ್ ನಿಲ್ದಾಣದ ಬಳಿಯ ಮರದ ಕೊಂಬೆ ಮುರಿದುಬಿದ್ದು ಮೂವರಿಗೆ ಗಾಯವಾಗಿದೆ. ಆಲದ ಮರದ ಕೊಂಬೆ ಬಿದ್ದಿದ್ದರಿಂದ ಹಲವು ಬೈಕ್ಗಳು ಜಖಂಗೊಂಡಿವೆ. ಸದ್ಯ ಬಿಬಿಎಂಪಿ ಸಿಬ್ಬಂದಿಯಿಂದ ಮರದ ಕೊಂಬೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರ ಸಾವು
ಬೆಳಗಾವಿ: ಜುಲೈ 1ರಂದು ಕೊಲ್ಹಾಪುರ ಜಿಲ್ಲೆಯ ಕಿಣೆ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರಿನ ಟೆಕ್ಕಿ ತ್ರಿಲೇಶ್ ಕುಮಾರ್(42), ಪತ್ನಿ ಹರಿಣಿ(36), ಪುತ್ರಿ ಜೀತಿಯಾ ತ್ರಿಲೇಶ್(11), ತ್ರಿಲೇಶ್ ಸಹೋದರಿ ಸಂಜನಾ ಮಹೇಶ್ವರಿ(27) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಶಿರಡಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೊಲ್ಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನು ಓದಿ: ಪರಪರುಷನ ಜೊತೆ ಅಕ್ರಮ ಸಂಬಂಧ: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಂದ ಪತ್ನಿ
ಬಾಲಕಿಯ ಮೇಲೆ ಗೂಡ್ಸ್ ಪಿಕ್ ಅಪ್ ವಾಹನ ಹರಿದು ಬಾಲಕಿ ಸಾವು
ಬೆಳಗಾವಿ: ಬಾಲಕಿಯ ಮೇಲೆ ಗೂಡ್ಸ್ ಪಿಕ್ ಅಪ್ ವಾಹನ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ಕಿತ್ತೂರ ಗ್ರಾಮದ ನಿವಾಸಿ ಸೃಷ್ಟಿ ನಾಗಪ್ಪಾ ಗಸ್ತಿ (4) ಮೃತ ಬಾಲಕಿ. ಸೃಷ್ಟಿ ನಾಗಪ್ಪಾ ಗಸ್ತಿ ಸಂಬಂಧಿಕರ ಮನೆಗೆ ಬಂದಾಗ ಮನೆ ಎದುರಿನ ರಸ್ತೆ ದಾಟುವಾಗ ಸಮಯದಲ್ಲಿ ಅವಘಡ ಸಂಭವಿಸಿದೆ. ಅಪಘಾತ ತೀವ್ರತೆಗೆ ಬಾಲಕಿ ತಲೆಗೆ ಬಾರಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ವಿಜಯಪುರ: ಇಬ್ಬರು ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಶಿರನಾಳ ಬಳಿ ನಡೆದಿದೆ. ತಾಯಿ ಶ್ರೀದೇವಿ(31) ಮಕ್ಕಳಾದ ಶ್ರೀಶೈಲ, ಮಹೇಶ್ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ನಿಖರ ಕಾರಣ ತಿಳಿದು ಬಂದಿಲ್ಲ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.