ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ ಕೆನ್ನೆ, ಎದೆ ಭಾಗ ಕಚ್ಚಿ ವಿಕೃತಿ ಮೆರೆದ ತಂದೆ ಪೊಲೀಸರ ವಶಕ್ಕೆ

ಹೆಂಡತಿ ಕೆಲಸಕ್ಕೆ ತೆರಳಿದ ವೇಳೆ ಕುಡಿದ ಮತ್ತಿನಲ್ಲಿ ಮಗಳನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಬಾಲಕಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ ಕೆನ್ನೆ, ಎದೆ ಭಾಗ ಕಚ್ಚಿ ವಿಕೃತಿ ಮೆರೆದ ತಂದೆ ಪೊಲೀಸರ ವಶಕ್ಕೆ
ಕಾಕತಿ ಪೊಲೀಸ್ ಠಾಣೆ
TV9kannada Web Team

| Edited By: Ayesha Banu

Jul 03, 2022 | 3:47 PM

ಬೆಳಗಾವಿ: ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ(Daughter) ಕೆನ್ನೆ, ಎದೆ ಭಾಗ ಕಚ್ಚಿ ತಂದೆ ವಿಕೃತಿ ಮೆರೆದ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಕತಿ ಠಾಣಾ ವ್ಯಾಪ್ತಿಯಲ್ಲಿ ಆರ್‌ಎಂಪಿ ವೈದ್ಯನಾಗಿರುವ ಆರೋಪಿ, ಹೆಂಡತಿ ಕೆಲಸಕ್ಕೆ ತೆರಳಿದ ವೇಳೆ ಕುಡಿದ ಮತ್ತಿನಲ್ಲಿ ಮಗಳನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಬಾಲಕಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಕ್ರಮ ಸಂಬಂಧಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಪತಿ ಕೊಲೆ ಕಲಬುರಗಿ: ಪ್ರಿಯಕರನ ಜೊತೆ ಸೇರಿ ಪತ್ನಿ, ಪತಿಯನ್ನು ಕೊಂದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದೆ. ಉಸಿರುಗಟ್ಟಿಸಿ ಗುರಪ್ಪ ಸಾಯಬಣ್ಣ ಚಿಗರಳ್ಳಿ(34) ಕೊಲೆ ಮಾಡಲಾಗಿದೆ.

ಮೇ 14ರಂದು ಮನೆಯಿಂದ ನಾಪತ್ತೆಯಾಗಿದ್ದ ಗುರಪ್ಪ ಚಿಗರಳ್ಳಿ ಮಾರನೆ ದಿನ ಅಂದರೆ ಮೇ 15ರಂದು ಕೇಶ್ವಾಪುರ ಬಳಿ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿ ಎಂದು ಪೊಲೀಸರು ಶವಸಂಸ್ಕಾರ ಮಾಡಿದ್ದರು. ಕೊಲೆಯಾಗಿದ್ದು ಗುರಪ್ಪ ಅಂತ ಪೋಷಕರು ನಿನ್ನೆ ಗುರುತಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗುರಪ್ಪ ಪತ್ನಿ ಮಹದೇವಿ, ಸಂತೋಷ್, ಸತೀಶ್ ವಿರುದ್ಧ ದೂರು ದಾಖಲಾಗಿದೆ. ಸಂತೋಷ್ ಜತೆ ಮಹದೇವಿ ಅಕ್ರಮ ಸಂಬಂಧ ಹೊಂದಿದ್ದಳು. ಪತ್ನಿ ಅಕ್ರಮ ಸಂಬಂಧಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಪತಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Harbhajan Singh Birthday: 42ನೇ ವರ್ಷಕ್ಕೆ ಕಾಲಿಟ್ಟ ಹರ್ಭಜನ್; ಟರ್ಬನೇಟರ್ ವೃತ್ತಿ ಬದುಕು ಹೇಗಿತ್ತು ಗೊತ್ತಾ?

ಮುಂಬೈನಿಂದ ಕಾರಲ್ಲಿ ಬಂದು ಕಾರಿನ ಸ್ಟಿರಿಯೋ ಸಿಸ್ಟಮ್ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಬಂಧನ ಬೆಂಗಳೂರು: ಕಾರಿನ ಸ್ಟಿರಿಯೋ ಸಿಸ್ಟಮ್ ಕಳ್ಳತನ ಮಾಡುತ್ತಿದ್ದ ಮುಂಬೈ ಮೂಲದ ಜುಬೇರ್ ಅಹ್ಮದ್, ಜಾಕಿರ್ ಹುಸೇನ್ನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನಿಂದ ಕಾರಿನಲ್ಲಿ ಬಂದು ಪ್ರತಿಷ್ಠಿತ ಏರಿಯಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ 40ಕ್ಕೂ ಹೆಚ್ಚು ಕಾರಿನ ಸ್ಟಿರಿಯೋ ಸಿಸ್ಟಮ್ ಜಪ್ತಿ ಮಾಡಲಾಗಿದೆ.

ಕೋಮು ದ್ವೇಷದಿಂದ ಕೊಲೆಗೆ ಯತ್ನ ಚಿತ್ರದುರ್ಗ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಕೊಲೆ ಹಿನ್ನೆಲೆ ಕೋಮು ದ್ವೇಷದಿಂದ ಸಮೀವುಲ್ಲಾ ಎಂಬುವವರ ಮೇಲೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಮೀವುಲ್ಲಾಗೆ ಚಿಕಿತ್ಸೆ ಕೊಡಿಸಲಾಗಿತ್ತಿದೆ. ಇನ್ನು ಹಲ್ಲೆಗೆ ಯತ್ನಿಸಿದ ನೂತನ್ ಹಿಂದೆ ಹಿಂದೂಪರ ಸಂಘಟನೆ, ಬಿಜೆಪಿ ಇದೆ. ಗಲಾಟೆ ಹಿಂದೆ ಬಿಜೆಪಿ ಶಾಸಕರು ಇದ್ದಾರೆಂದು SDPI ಜಿಲ್ಲಾ ಘಟಕದ ಅಧ್ಯಕ್ಷ ಬಾಳೇಕಾಯಿ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್

ಇನ್ನು ಆಸ್ಪತ್ರೆ ಬಳಿ ಗಾಯಾಳು ಸಂಬಂಧಿಗಳು ಜಮಾಯಿಸಿದ್ದಾರೆ. ಆರೋಪಿ ನೂತನ್ ಹಿಂದೂ‌ಮಹಾಗಣಪತಿ‌ ಉತ್ಸವದಲ್ಲಿ ಭಾಗಿ ಆಗುತ್ತಿದ್ದನು. ಆರೋಪಿ ನೂತನ್ ಭಜರಂಗದಳದ ಕಾರ್ಯಕರ್ತ ಆಗಿದ್ದನು. ಕೋಮು ದ್ವೇಷ ಹಿನ್ನೆಲೆ ಸಮಿವುಲ್ಲಾ ಕೊಲೆಗೆ ಯತ್ನ ಮಾಡಿದ್ದಾನೆ. ನೂತನ್ ಹಿಂದೆ ಹಿಂದೂಪರ ಸಂಘಟನೆ, ಬಿಜೆಪಿ ಇದೆ. ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿಯಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ‌ ಸರ್ಕಾರವಿದ್ದು ಮುಸ್ಲಿಂ ಮೇಲೆ ದೌರ್ಜನ್ಯ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆ ನಡೆಯಬೇಕು ಎಂದು ಬಾಳೇಕಾಯಿ ಶ್ರೀನಿವಾಸ್ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada