ಪರಪರುಷನ ಜೊತೆ ಅಕ್ರಮ ಸಂಬಂಧ: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಂದ ಪತ್ನಿ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಗುರಾಯಿಸಿ ನೋಡಿದ ಯುವಕನಿಗೆ ಪ್ರಶ್ನಿಸಿದ್ದಕ್ಕೆ ಚಾಕು ಇರಿಯಲಾಗಿದೆ.

ಪರಪರುಷನ ಜೊತೆ ಅಕ್ರಮ ಸಂಬಂಧ: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಂದ ಪತ್ನಿ
ಇಜೇರಿ ಗ್ರಾಮದ ಗುರಪ್ಪ ಸಾಯಬಣ್ಣಾ ಚಿಗರಳ್ಳಿ(34) ಕೊಲೆಯಾದ ವ್ಯಕ್ತಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 03, 2022 | 1:36 PM

ಕಲಬುರಗಿ: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಪತ್ನಿ ಕೊಲೆ (Murder) ಮಾಡಿರುವಂತಹ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದೆ. ಇಜೇರಿ ಗ್ರಾಮದ ಗುರಪ್ಪ ಸಾಯಬಣ್ಣಾ ಚಿಗರಳ್ಳಿ(34) ಕೊಲೆಯಾದ ವ್ಯಕ್ತಿ. ಮೇ 14ರಂದು ಮನೆಯಿಂದ ಗುರುಪ್ಪ ಚಿಗರಳ್ಳಿ ನಾಪತ್ತೆಯಾಗಿದ್ದ. ಮೇ 15ರಂದು ಕೇಶ್ವಾಪುರ ಬಳಿ ಗುರಪ್ಪ ಮೃತದೇಹ ಪತ್ತೆಯಾಗಿತ್ತು. ಉಸಿರುಗಟ್ಟಿಸಿ ಕೊಲೆಗೈದು ಕಬ್ಬಿನ ಹೊಲದಲ್ಲಿ ಶವ ಎಸೆಯಲಾಗಿತ್ತು. ಅನಾಮಧೇಯ ವ್ಯಕ್ತಿ ಅಂತ  ಪೊಲೀಸರು ಸುಮ್ಮನಾಗಿದ್ದು, ಕೊಲೆಯಾಗಿದ್ದು ಗುರಪ್ಪ ಅಂತ ನಿನ್ನೆ ಹೆತ್ತವರು ಗುರುಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹದೇವಿ, ಸಂತೋಷ್, ಸತೀಶ್ ಎಂಬುವರ ವಿರುದ್ಧ ದೂರು ನೀಡಲಾಗಿದೆ. ಸಂತೋಷ್ ಜೊತೆ ಮಹದೇವಿ ಅಕ್ರಮ ಸಂಬಂಧ ಹೊಂದಿದ್ದು, ಅಕ್ರಮ ಸಂಬಂಧಕ್ಕೆ ಪತಿಯಿಂದ ಅಡ್ಡಿ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಟ್ಯಾಕ್ಟರ್​ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವು:

ಚಿಕ್ಕಮಗಳೂರು: ರಸ್ತೆ ಮಧ್ಯೆ ನಿಂತಿದ್ದ ಟ್ಯಾಕ್ಟರ್​ಗೆ ಬೈಕ್ ಡಿಕ್ಕಿಯಾಗಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ನಡೆದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ರಕ್ಷಿತ್ (24) ಮೃತಪಟ್ಟಿದ್ದಾನೆ. ರಸ್ತೆ ಮಧ್ಯೆದಲ್ಲೇ ಟ್ರ್ಯಾಕ್ಟರ್ ನಿಲ್ಲಿಸಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತ ಯುವಕ ಲಕ್ಷ್ಮಿಪುರ ಗ್ರಾಮದ ರಾಮು ಎಂಬುವರ ಪುತ್ರ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗುರಾಯಿಸಿ ನೋಡಿದಕ್ಕೆ ಚಾಕು ಇರಿತ:

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಗುರಾಯಿಸಿ ನೋಡಿದ ಯುವಕನಿಗೆ ಪ್ರಶ್ನಿಸಿದ್ದಕ್ಕೆ ಚಾಕು ಇರಿಯಲಾಗಿದೆ. ಆಲೂರು ಗ್ರಾಮದ ಸಮಿವುಲ್ಲಾ(35)ಗೆ ಚಾಕು ಇರಿಯಲಾಗಿದ್ದು, ಗಾಯಾಳು ಸಮಿವುಲ್ಲಾ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೂತನ್ ಎಂಬ ಯುವಕನ ವಿರುದ್ಧ ಚಾಕು ಇರಿತ ಆರೋಪ ಮಾಡಲಾಗಿದ್ದು, ಘಟನೆ ಬಳಿಕ ಆರೋಪಿ ನೂತನ್ ತಲೆ ಮರೆಸಿಕೊಂಡಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ:

ಮಂಡ್ಯ: ಎಣ್ಣೆ ಏಟಲ್ಲಿ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಮಜ್ಜಿಗೆಪುರದಲ್ಲಿ ನಡೆದಿದೆ. ಕೆ.ಆರ್.ಎಸ್​ನ ತಲಕಾಡು ಫೈಲ್ ಸುಂದರ್ ರಾಜ್(32)ಕೊಲೆಯಾದ ದುರ್ದೈವಿ. ಯುವಕನನ್ನು‌ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದು, ಜೊತೆಗಿದ್ದ ಸ್ನೇಹಿತರೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆ.ಆರ್.ಎಸ್.ಪೊಲೀಸರ ಭೇಟಿ ನೀಡಿ, ಪರಿಶೀಲನೆ ಮಾಡಿದ್ದು ಆರೋಪಿಗಳಿಗಾಗಿ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಕಲಾಗಿದೆ.

ಇದನ್ನೂ ಓದಿ: Prajwal Devaraj: ಮಾಸ್​ ಪೋಸ್ಟರ್​ ಮೂಲಕ ಪ್ರಜ್ವಲ್​ ದೇವರಾಜ್​ ಜನ್ಮದಿನಕ್ಕೆ ‘ವೀರಂ’, ‘ಮಾಫಿಯಾ’ ತಂಡದ ವಿಶ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada