ಶಾಲೆಗಳು ಶುರು: ಮಕ್ಕಳಿಗೆ ಕೊಟ್ಟು ಕಳುಹಿಸುವ ಆಹಾರಗಳು ಹೇಗಿರಬೇಕು?

Lunch Box:ಬೇಸಿಗೆ ರಜೆ ಮುಗಿದು ಎಲ್ಲೆಡೆ ಶಾಲೆ(School)ಗಳು ಶುರುವಾಗಿವೆ. ದಿನ ಬೆಳಗಾದರೆ ಮಕ್ಕಳ ಬಾಕ್ಸ್​ಗಳಿಗೆ ಏನು ಹಾಕಿ ಕಳುಹಿಸುವುದು ಎಂಬುದೇ ತಾಯಂದಿರ ಚಿಂತೆಯಾಗಿದೆ. ಪಿಜ್ಜಾ, ಬರ್ಗರ್‌, ಅತಿಯಾಗಿ ಕರಿದಿರುವ ಆಹಾರಗಳ ಸೇವನೆಯನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿಬಿಡಿ. ಮನೆಯಲ್ಲಿ ತಯಾರಿಸುವ ಆಹಾರವನ್ನೇ ಸೇವಿಸಿ

ಶಾಲೆಗಳು ಶುರು: ಮಕ್ಕಳಿಗೆ ಕೊಟ್ಟು ಕಳುಹಿಸುವ ಆಹಾರಗಳು ಹೇಗಿರಬೇಕು?
Lunch
Follow us
TV9 Web
| Updated By: ನಯನಾ ರಾಜೀವ್

Updated on: Jun 02, 2022 | 3:02 PM

ಬೇಸಿಗೆ ರಜೆ ಮುಗಿದು ಎಲ್ಲೆಡೆ ಶಾಲೆ(School)ಗಳು ಶುರುವಾಗಿವೆ. ದಿನ ಬೆಳಗಾದರೆ ಮಕ್ಕಳ ಬಾಕ್ಸ್​ಗಳಿಗೆ ಏನು ಹಾಕಿ ಕಳುಹಿಸುವುದು ಎಂಬುದೇ ತಾಯಂದಿರ ಚಿಂತೆಯಾಗಿದೆ. ಪಿಜ್ಜಾ, ಬರ್ಗರ್‌, ಅತಿಯಾಗಿ ಕರಿದಿರುವ ಆಹಾರಗಳ ಸೇವನೆಯನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿಬಿಡಿ. ಮನೆಯಲ್ಲಿ ತಯಾರಿಸುವ ಆಹಾರವನ್ನೇ ಸೇವಿಸಿ.

ಜೊತೆಗೆ ಹೆಚ್ಚು ಪೌಷ್ಟಿಕಾಂಶವಿರುವ ಸೊಪ್ಪು, ತರಕಾರಿ, ಮಾಂಸ, ಮೊಟ್ಟೆಗಳನ್ನು ಅಗತ್ಯವಾಗಿ ತಿನ್ನಿ. ಅದರಲ್ಲೂ ಅರಿಶಿನ, ಮೊಸರು, ಹಾಲು ಆಹಾರದ ಪಟ್ಟಿಯಲ್ಲಿ ಕಡ್ಡಾಯವಾಗಿರಲಿ ಎಂಬುದು ವೈದ್ಯರು ನೀಡುವ ಸಲಹೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ದೊಡ್ಡವರೂ ಸೇರಿದಂತೆ ಮಕ್ಕಳಲ್ಲಿ ವಿಟಮಿನ್ ‘ಡಿ’ ಕೊರತೆ ಹೆಚ್ಚಾಗಿದೆ. ಈಗ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳು ಬಿಸಿಲಿನ ಸಂಪರ್ಕಕ್ಕೆ ಬಂದರೆ ಆ ನ್ಯೂನತೆ ನಿವಾರಣೆ ಸಾಧ್ಯ. ಇದರ ಜತೆಗೆ ಹಸುವಿನ ಹಾಲು ಮತ್ತು ಮೊಟ್ಟೆಯ ಹಳದಿ ಭಾಗ, ಸಾಲ್ಮನ್ ಮೀನಿನಲ್ಲೂ ವಿಟಮಿನ್ ಡಿ ಹೇರಳವಾಗಿ ಸಿಗುತ್ತದೆ.

ಬೀಟ್ರೋಟ್ ಪರೋಟ: ಎಲ್ಲಾ ಮಕ್ಕಳು ಮಧ್ಯಾಹ್ನದ ಊಟಕ್ಕೆ ರುಚಿಯಾದ ಆಹಾರವನ್ನು ತಿನ್ನಲು ಬಯಸುತ್ತಾರೆ. ಪರೋಟವು ಆರೋಗ್ಯಕರ ಆಹಾರವಾಗಿದ್ದು, ತಿನ್ನುವುದಕ್ಕೂ ತುಂಬಾ ರುಚಿಯಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುತ್ತದೆ. ಬೀಟ್ರೋಟ್​ನಲ್ಲಿ ವಿಟಮಿನ್, ಆಂಟಿಆಕ್ಸಿಡೆಂಟ್ಸ್​ ಹಾಗೂ ಇತರೆ ಪೌಷ್ಟಿಕಾಂಶಗಳಿವೆ.

ಎಗ್​ಬುರ್ಜಿ: ಮೊಟ್ಟೆಯು ಹೆಚ್ಚು ಪ್ರೋಟೀನ್ ಹೊಂದಿರುವ ಕಾರಣ ಎಗ್ ಬುರ್ಜಿಯನ್ನು ತಿನ್ನುವುದರಿಂದ ಮಕ್ಕಳು ಶಕ್ತಿಯುತರಾಗಿ ಬೆಳೆಯುತ್ತಾರೆ. ಅದರಲ್ಲಿ ತರಕಾರಿಗಳು, ಕ್ಯಾರೇಟ್​, ಹಸಿರು ಬಟಾಣಿಯನ್ನು ಬಳಕೆ ಮಾಡಬಹುದು.

ಇಟ್ಲಿ ಚಟ್ನಿ: ಇಡ್ಲಿ ಮತ್ತು ಚಟ್ನಿಯು ಮಕ್ಕಳಿಗೆ ಉತ್ತಮ ಆಹಾರವೆಂದು ಹೇಳಲಾಗಿದೆ.

ರೋಗ ನಿರೋಧಕ ಶಕ್ತಿ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ವಿಟಮಿನ್, ಕ್ಯಾಲ್ಸಿಯಂ, ಪ್ರೊಟೀನ್‌ ಒಳಗೊಂಡ ಆಹಾರ ಅಗತ್ಯ. ಅದಕ್ಕಾಗಿ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಿಲ್ಲ. ನಿತ್ಯ ಲಭ್ಯವಾಗುವ ಹಣ್ಣು ತರಕಾರಿಗಳನ್ನೇ ಉಪಾಹಾರ ಊಟದಲ್ಲಿ ಬಳಸಿದರೆ ಸಾಕು ಎನ್ನುವುದು ಪೌಷ್ಟಿಕಾಂಶ ತಜ್ಞರ ಸಲಹೆ.

ಹಣ್ಣು, ತರಕಾರಿ ಪರಿಚಯಿಸಿ: ಗೆಳತಿಯ ಸಂಬಂಧಿಕರ ಹುಡುಗನೊಬ್ಬನಿಗೆ ಸಪೋಟ ಹಣ್ಣನ್ನು ತಿನ್ನಲು ಕೊಟ್ಟರೆ, ‘ಇದು ತಿನ್ನುವುದಾ’ ಎಂದು ಕೇಳಿದನಂತೆ. ಅವರು ‘ಹೂಂ ತಿನ್ನು’ ಎಂದರೆ, ‘ಇದು ಜ್ಯೂಸ್ ಮಾಡುವುದಲ್ಲವಾ’ ಎಂದು ಪುನಃ ಕೇಳಿದನಂತೆ. ಇದು ಮಕ್ಕಳಲ್ಲಿ ಹಣ್ಣು–ತರಕಾರಿಗಳ ಪರಿಚಯದ ಕೊರತೆ ಇದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತರಕಾರಿ– ಹಣ್ಣುಗಳನ್ನು ಪರಿಚಯಿಸಿ. ಬಣ್ಣ, ಗಾತ್ರ ಅವುಗಳ ವಿಶೇಷ ಗುಣ ಮಕ್ಕಳಿಗೆ ತಿಳಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ