Heart Failure: ಬೇಸಿಗೆಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು
Heart Failure:ದೇಶದ ಕೆಲವು ರಾಜ್ಯಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಈ ಸಂದರ್ಭದಲ್ಲಿ ಹೃದಯ(Heart)ದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲಾಗಿದೆ.
ದೇಶದ ಕೆಲವು ರಾಜ್ಯಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಈ ಸಂದರ್ಭದಲ್ಲಿ ಹೃದಯ(Heart)ದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಹೃದಯದ ಸ್ನಾಯುವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯವು ಸಂಭವಿಸುತ್ತದೆ, ಇದು ಶ್ವಾಸಕೋಶಗಳಲ್ಲಿ ದ್ರವದ ರಚನೆಗೆ ಕಾರಣವಾಗುತ್ತದೆ ಮತ್ತು ಉಸಿರಾಟದ ತೊಂದರೆಗೂ ಕಾರಣವಾಗಬಹುದು.
ಹವಾಮಾನವು ಹೇಗೆ ಹೃದಯದ ಮೇಲೆ ದುಷ್ಪರಿಣಾಮ ಬೀರಲಿದೆ? ದೇಹದ ಉಷ್ಣಾಂಶವು 36.1ರಿಂದ 37.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶವು ಬಿಸಿಯಾಗುತ್ತಿದ್ದಂತೆ ಹೃದಯದಲ್ಲಿ ಒತ್ತಡ ಹೆಚ್ಚಾಗುತ್ತದೆ.
ಈಗಾಗಲೇ ಹೃದಯ ವೈಫಲ್ಯದ ಇತಿಹಾಸವನ್ನು ಹೊಂದಿರುವ ಜನರು ನಿರ್ಜಲೀಕರಣ ಮತ್ತು ಉಪ್ಪಿನ ನಷ್ಟದಿಂದಾಗಿ ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ನಿಯಮಿತ ವ್ಯಾಯಾಮ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು, ಒತ್ತಡವನ್ನು ನಿರ್ವಹಿಸುವುದು ಸೇರಿದಂತೆ ಹೃದಯ ವೈಫಲ್ಯದ ಇತಿಹಾಸವನ್ನು ಹೊಂದಿರುವ ಜನರಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡಲಾಗುತ್ತದೆ.
ಬೇಸಿಗೆ ಹಾಗೂ ಚಳಿಗಾಲದಲ್ಲಿ ಚರ್ಮ ರೋಗ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು. ಬೇಸಿಗೆಯಲ್ಲಿರುವ ಅತಿಯಾದ ಶಾಖವು ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮವನ್ನು ಬೀರುತ್ತದೆ. ಇದರಲ್ಲಿ ಮುಖ್ಯವಾಗಿ ಹೃದಯದ ಮೇಲೂ ಕೆಲವೊಮ್ಮೆ ಹೆಚ್ಚು ಪರಿಣಾಮ ಬೀರಬಹುದು.
ಹೆಚ್ಚಿದ ಶಾಖದ ಹೊರತಾಗಿ, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳಲ್ಲಿ ಉಪ್ಪು ಇರಲಾರದ ಆಹಾರವನ್ನು ಸೇವಿಸದಿರುವುದು, ಅತಿಯಾಗಿ ಮದ್ಯಪಾನ ಮಾಡುವುದು, ಕಳಪೆ ರಕ್ತ ಪರಿಚಲನೆ ಮತ್ತು ರಕ್ತದೊತ್ತಡದ ಔಷಧಿಗಳ ಜೊತೆಗೆ ನಿದ್ರಾಜನಕಗಳಂತಹ ಕೆಲವು ಔಷಧಿಗಳ ಬಳಕೆ ಸೇರಿವೆ.
ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರುತ್ತೆ. ಅದು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹೃದಯವು ವೇಗವಾಗಿ ಬಡಿದುಕೊಳ್ಳಬೇಕಾಗುತ್ತದೆ ಮತ್ತು ರಕ್ತವು ನಿಮಿಷಕ್ಕೆ ಎರಡು ಪಟ್ಟು ವೇಗವಾಗಿ ಪರಿಚಲನೆಗೊಳ್ಳಲು ಕಾರಣವಾಗುತ್ತದೆ ಎಂದು ಡಾ. ಪ್ರಭಾಕರ್ ಹೇಳುತ್ತಾರೆ.
ವಿಪರೀತ ಸೆಕೆ ಮತ್ತು ನಿರಂತರ ಬೆವರುವಿಕೆಯು ದೇಹದ ದ್ರವದ ಅಂಶವನ್ನು ಕಡಿಮೆ ಮಾಡುತ್ತದೆ, ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ.
ಇದು ರಕ್ತದೊತ್ತಡದ ಔಷಧಿಗಳೊಂದಿಗೆ ಸಂಯೋಜಿಸಲ್ಪಟ್ಟು, ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು, ಇದು ತ್ವರಿತ ಹೃದಯ ಬಡಿತದ ಜೊತೆಗೆ ಹೃದಯದ ಸಮಸ್ಯೆಗಳ ಪೂರ್ವಗ್ರಹ ಪೀಡಿತ ಅಥವಾ ಇತಿಹಾಸವನ್ನು ಹೊಂದಿರುವವರಿಗೆ ಪ್ರಮುಖ ಅಪಾಯದ ಅಂಶಗಳಾಗಿವೆ.
ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
-ನಿಮ್ಮ ರಕ್ತದೊತ್ತಡವು ತುಂಬಾ ಅಧಿಕ ಅಥವಾ ತುಂಬಾ ಕಡಿಮೆಯಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
-ರೋಗಲಕ್ಷಣಗಳನ್ನು ಅವಲಂಬಿಸಿ ರಕ್ತದಲ್ಲಿನ ಸೋಡಿಯಂ ಮತ್ತು ಪೊಟ್ಯಾಶಿಯಂ ಮಟ್ಟಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು.
-ಹೃದಯ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದ ಇತಿಹಾಸವನ್ನು ಹೊಂದಿರುವ ವಯಸ್ಸಾದ ರೋಗಿಗಳಲ್ಲಿ ಔಷಧೋಪಚಾರದ ಡೋಸೇಜ್‌ಗಳನ್ನು ಕಡಿಮೆ ಮಾಡಬೇಕಾಗಬಹುದು.
-ಹೃದಯ ವೈಫಲ್ಯದ ಇತಿಹಾಸವನ್ನು ಹೊಂದಿರುವ ರೋಗಿಗಳು ತುಂಬಾ ಕಡಿಮೆ ನೀರು ಮತ್ತು ಉಪ್ಪನ್ನು ಸೇವಿಸುತ್ತಾರೆ, ಅವರು ತಮ್ಮ ನೀರಿನ ಸೇವನೆಯನ್ನು ದಿನಕ್ಕೆ 250 ರಿಂದ 500 ಮಿ.ಲೀ ಲೀಟರ್ ಹೆಚ್ಚಿಸಬೇಕು ಮತ್ತು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ತಮ್ಮ ಉಪ್ಪಿನ ಸೇವನೆಯನ್ನು ಸರಿ ಹೊಂದಿಸಿಕೊಳ್ಳಬೇಕು.
-ಬಿಸಿ ಹವಾಮಾನದಲ್ಲಿ ಕಠಿಣ ದೈಹಿಕ ಚಟುವಟಿಕೆಗಳನ್ನು ಮಾಡಬೇಡಿ. ನಿಮ್ಮ ಬಾಲ್ಕನಿಗಳಲ್ಲಿ ಮತ್ತು ಟೆರೇಸ್‌ಗಳಲ್ಲಿಯೂ ನಿಂತುಕೊಂಡು ಯಾವುದೇ ದೈಹಿಕ ಚಟುವಟಿಕೆ ಮಾಡಬೇಡಿ. ಆದಷ್ಟು ಮನೆಯ ಒಳಗೆ ವರ್ಕೌಟ್ ಮಾಡಿ.
-ಕೆಫೀನ್ ಮತ್ತು ಮದ್ಯವನ್ನು ಸೇವಿಸಲೇ ಬೇಡಿ.
-ತಿಳಿ ಬಣ್ಣದ, ಚೆನ್ನಾಗಿ ಗಾಳಿ ಸಿಗುವಂತಹ ಉಡುಪುಗಳನ್ನು ಧರಿಸಿ.
-ಸರಿಯಾದ ಗಾಳಿಯ ಹರಿವನ್ನು ಖಚಿತಪಡಿಸಿಕೊಳ್ಳಿ ಮತ್ತು ಹವಾನಿಯಂತ್ರಣ ಅಥವಾ ಫ್ಯಾನ್‌ಗಳನ್ನು ಬಳಸುವ ಮೂಲಕ ಮನೆಯಲ್ಲಿ ತಂಪಾದ ವಾತಾವರಣವನ್ನು ಕಾಪಾಡಿಕೊಳ್ಳಿ.
-ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Thu, 2 June 22