ಶಾಲೆ ಆರಂಭದ ಬೆನ್ನಲ್ಲೆ ಶಿಕ್ಷಕರ ಟಾರ್ಚರ್ ಆರಂಭ; ಶಿಕ್ಷಕನ ಏಟಿಗೆ ಐಸಿಯುಗೆ ದಾಖಲಾದ 6ನೇ ತರಗತಿ ವಿದ್ಯಾರ್ಥಿ!

ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲೆ ಆರಂಭದ ಬೆನ್ನಲ್ಲೆ ಶಿಕ್ಷಕರ ಟಾರ್ಚರ್ ಆರಂಭ; ಶಿಕ್ಷಕನ ಏಟಿಗೆ ಐಸಿಯುಗೆ ದಾಖಲಾದ 6ನೇ ತರಗತಿ ವಿದ್ಯಾರ್ಥಿ!
ಹಲ್ಲೆಗೊಳಗಾದ ವಿದ್ಯಾರ್ಥಿ ಮತ್ತು ಬ್ಲು ಬೆಲ್ ಶಾಲೆ
TV9kannada Web Team

| Edited By: Rakesh Nayak

Jul 04, 2022 | 12:27 PM

ಬೆಂಗಳೂರು: ಶಾಲೆ ಆರಂಭವಾದ ಬೆನ್ನಲ್ಲೇ ಶಿಕ್ಷಕರಿಂದ ಮಕ್ಕಳಿಗೆ ಟಾರ್ಚರ್ ಕೂಡ ಆರಂಭವಾಗಿದೆ. ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಶಿಕ್ಷಕರೊಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಘಟನೆ ಬಗ್ಗೆ ಪ್ರಶ್ನೆ ಮಾಡಿದರೆ ಪ್ರಾಂಶುಪಾಲರು ಉಡಾಫೆಯ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ  ಓದಿ: Murder: ಟೀಚರ್ ಜೊತೆ ಅಕ್ರಮ ಸಂಬಂಧ; ಭಯದಿಂದ ಶಿಕ್ಷಕಿಯನ್ನೇ ಕೊಂದ ಪಿಯುಸಿ ವಿದ್ಯಾರ್ಥಿ

ಶಾಲೆಗಳು ಆರಂಭವಾದ ಬೆನ್ನಲ್ಲೇ ವಿಜಯನಗರದ ಮಾಗಡಿ ರಸ್ತೆಯಲ್ಲಿ ಬರುವ ಅನುಭವನಗರದಲ್ಲಿ ಇರುವ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಗಣಿತ ನೋಟ್ಸ್ ತಂದಿಲ್ಲ ಎಂದಿದ್ದಕ್ಕೆ ಶಿಕ್ಷಕ ಮಾದೇಶ್ ವಿದ್ಯಾರ್ಥಿ ತನ್ಮಯ್ ಕಪಾಲಕ್ಕೆ ಬಾರಿಸಿದ್ದಾರೆ. ಪರಿಣಾಮವಾಗಿ ಆತನಿಗೆ ಕಿವಿ ನೋವು ಉದ್ಭವಿಸಿದ್ದು, ಕಣ್ಣಿ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತನ್ಮಯ್ ಕಣ್ಣಿಗೆ  ವೈದ್ಯರು ಸ್ಪೆಟ್ಸ್ ಹಾಕಿದ್ದು, ಐಸಿಯುಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಎಚ್ಚರ ಪೋಷಕರೇ ಎಚ್ಚರ… ಹೇಳಿಕೊಳ್ಳಲು ಇದೊಂದು ಬುಕ್​ಸ್ಟಾಲ್, ಒಳಗಡೆ ನಡೆಯುತ್ತಿತ್ತು ಸೆಲ್ಯೂಷನ್ ದಂಧೆ!

ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಬ್ಲೂಬೆಲ್ ಶಾಲಾ ಆಡಳಿತ ಮಂಡಳಿ ಕ್ಯಾರೇ ಎನ್ನುತ್ತಿಲ್ಲ. ಮಗನ ಮೇಲೆ ಹಲ್ಲೆಯನ್ನು ಪ್ರಶ್ನಿಸಿದ ತಂದೆಗೆ ಪ್ರಾಂಶುಲಾಪರು, ಉಡಾಫೆಯ ಮಾತುಗಳನ್ನಾಡಿದ್ದಾರೆ. ಹೊಡೆದಿರುವ ಶಿಕ್ಷಕನಿಗೆ ಕೊರೋನಾ ತಗುಲಿದೆ. ಹೀಗಾಗಿ ನಾನು ಏನು ಮಾಡಲಿ ಎಂದು ಪ್ರಾಂಶುಪಾಲ ಹೇಳಿದ್ದಾಗಿ ವಿದ್ಯಾರ್ಥಿಯ ತಂದೆ ಲಕ್ಷ್ಮಿ ನರಸಿಂಹ ಅವರು ಟಿವಿ9 ಜೊತೆ ನೋವಿನ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: CBSE 10 Results 2022: ಇಂದು ಸಿಬಿಎಸ್​​ಇ 10ನೇ ತರಗತಿಯ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿದೆ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada