ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಹರಿದ ಬಸ್: ಚಾಲಕನ ಬಂಧನ

| Updated By: ವಿವೇಕ ಬಿರಾದಾರ

Updated on: Oct 10, 2022 | 7:36 PM

ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಶಿಲ್ಪಾ ಮೇಲೆ ಬಿಎಂಟಿಸಿ ಬಸ್​ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸುರೇಶ್​ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಹರಿದ ಬಸ್: ಚಾಲಕನ ಬಂಧನ
ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್
Follow us on

ಬೆಂಗಳೂರು: ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ (Jnana Bharathi University) ವಿದ್ಯಾರ್ಥಿನಿ ಶಿಲ್ಪಾ ಮೇಲೆ ಬಿಎಂಟಿಸಿ (BMTC) ಬಸ್​ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸುರೇಶ್​ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಶಿಲ್ಪಾ ಸ್ನೇಹಿತೆಯ ದೂರಿನ ಆಧಾರದ ಮೇಲೆ ಚಾಲಕ ಸುರೇಶ್​ನನ್ನು ಬಂಧಿಸಲಾಗಿದೆ.

ಹಿನ್ನೆಲೆ

ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್

ಇಂದು ಬೆಳಿಗ್ಗೆ ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಾ ಬಿಎಂಟಿಸಿ ಬಸ್​ ಹತ್ತುವಾಗ ಚಾಲಕ ಗಮನಿಸದೆ ಬಸ್ ಮೂವ್ ಮಾಡಿದ್ದನು. ಇದರಿಂದ  ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದಾಳೆ. ಆಗ ಬಸ್​ ವಿದ್ಯಾರ್ಥಿನಿಯ ಮೇಲೆ ಹರಿಸಿದ್ದಾನೆ. ಇದರಿಂದ ಶಿಲ್ಪಾ ಗಂಭೀರವಾಗಿ ಗಾಯಗೊಂಡಿದ್ದಳು. ಗಾಯಗೊಂಡ ಶಿಲ್ಪಾಳನ್ನು  ನಾಗರಬಾವಿ ಪೋರ್ಟೀಸ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ತಿಳಿದ ವಿದ್ಯಾರ್ಥಿ ಸಮೂಹ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಲಾಗುತ್ತಿತ್ತು. ಆಗ ಧರಣಿನಿರತ ವಿದ್ಯಾರ್ಥಿಗಳ ಕಡೆ ವಿವಿ ಕಲುಪತಿ ಡಾ. ಜಯಕರ್ ಶೆಟ್ಟಿ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ವಿದ್ಯಾರ್ಥಿನಿಯ ಆಸ್ಪತ್ರೆಯ ವೆಚ್ಚವನ್ನ ವಿವಿಯೇ ಭರಿಸಲಿದೆ. ಏಕಾಏಕಿ ವಾಹನಗಳ ನಿಷೇಧ ಕಷ್ಟಸಾಧ್ಯ. ಪ್ರತಿಭಟನೆ ಕೈಬಿಡಿ ಎಂದು ಮನವೊಲಿಸಲು ಯತ್ನಿಸಿದರು. ಆದರೂ ಕೂಡ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಿಲ್ಲಿಸದೆ ಮುಂದುವರೆಸಿದರು.

ಪ್ರತಿಭಟನೆ ವೇಳೆ ಓರ್ವ ವಿದ್ಯಾರ್ಥಿನಿ ಅಸ್ವಸ್ಥಗೊಂಡಳು. ಇದರಿಂದ ಪ್ರತಿಭಟನೆ ಜೋರಾದ ಹಿನ್ನೆಲೆ ನಾಯಂಡಹಳ್ಳಿ, ಉಲ್ಲಾಳ, ಮರಿಯಪ್ಪನಪಾಳ್ಯ ರಸ್ತೆಯಿಂದ ಬೆಂಗಳೂರು ವಿವಿಗೆ ಸಂಪರ್ಕ ಕಲ್ಪಿಸೊ ರಸ್ತೆ ಬಂದ್​ ಮಾಡಲಾಗಿತ್ತು. ಬಳಿಕೆ  ಸ್ಥಳಕ್ಕಾಗಮಿಸಿದ ಬಿಎಂಟಿಸಿ ಪಶ್ಚಿಮ ವಲಯದ ಡಿಸಿ ಶ್ರೀನಾಥ್ಯುವತಿಯ ಚಿಕಿತ್ಸಾ ವೆಚ್ಚ ಭರಿಸೋದಾಗಿ ಭರವಸೆ ನೀಡಿದರು.  ಯುವತಿಯನ್ನು ಈಗಾಗ್ಲೇ ಪೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂರ್ನಾಲ್ಕು ಸರ್ಜರಿ ಮಾಡಬೇಕು ಅಂತ ಹೇಳಿದ್ದಾರೆ. ಎಲ್ಲಾ ಚಿಕಿತ್ಸಾ ವೆಚ್ಚ ಭರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Mon, 10 October 22