
ಬೆಂಗಳೂರು, ಜ.21: ಬೆಂಗಳೂರು ಜನರಿಗೆ ಒಂದು ಸಿಹಿಸುದ್ದಿ ಇದೆ. ವಿಕ್ಟೋರಿಯಾ ಬೌರಿಂಗ್ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊವಿಡ್ ಬಳಿಕ ವಿಕ್ಟೋರಿಯಾದಲ್ಲಿ ನಿರಂತರವಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಒತ್ತಡ ಹೆಚ್ಚಾಗಿದೆ . ಇದೀಗ ಈ ಒತ್ತಡವನ್ನು ಕಡಿಮೆ ಮಾಡಲು, ಮಲ್ಲೇಶ್ವರಂನಲ್ಲಿ ಪ್ರತಿಷ್ಠಿತ ಕೆ ಸಿ ಜನರಲ್ ಆಸ್ಪತ್ರೆಯನ್ನು (K C General Hospital) ಹೈಟೆಕ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೆಸಿಜಿ ಆಸ್ಪತ್ರೆಯಲ್ಲಿ ಮುಂದಿನ ತಿಂಗಳಿನಿಂದ 50 ಬೆಡ್ ವ್ಯವಸ್ಥೆಯ ಟ್ರಾಮಾ ಎಮೆರ್ಜೆನ್ಸಿ ಕೇರ್ ಹಾಗೂ ಬ್ಲಡ್ ಬ್ಯಾಂಕ್ ಡಿಎನ್ ಬಿ ಬ್ಲಾಕ್ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ಒಳ್ಳೆಯ ಚಿಕಿತ್ಸೆ ಹಾಗೂ ಬಡ ರೋಗಿಗಳಿಗೆ ಇದು ತುಂಬಾ ಪ್ರಯೋಜನ ನೀಡಿಲಿದೆ. ಟ್ರಾಮಾ ಕೇರ್ ಸೆಂಟರ್ ತುರ್ತು ಎಮೆರ್ಜೆನ್ಸಿ ಚಿಕಿತ್ಸೆ ಘಟಕದ ಕಟ್ಟಡ ಕೆಲಸ ಶೇ 80% ಪೂರ್ಣಗೊಂಡಿದ್ದು, ಮುಂದಿನ ತಿಂಗಳ ಸೇವೆಗೆ ಲಭ್ಯವಾಗಲಿದೆ. 50ಬೆಡ್ ಸೌಲಭ್ಯದ ಟ್ರಾಮಾ ಕೇರ್ ಸೆಂಟರ್ 14HDU ಬೆಡ್ 2 OT ಸೌಲಭ್ಯ 15 ಐಸಿಯು ಹಾಗೂ ಎಚ್ಡಿಯೂ ಬೆಡ್ ವ್ಯವಸ್ಥೆಗಳು ಇರಲಿದೆ ಎಂದು ಹೇಳಲಾಗಿದೆ.
ಇದರ ಜತೆಗೆ ಬ್ಲಡ್ ಬ್ಯಾಂಕ್, ಡಿಎನ್ ಬಿ ಜೊತೆ ಟ್ರಾಮಾ ಕೇರ್ ಸೆಂಟರ್ ಬಹಳಷ್ಟು ಜನರಿಗೆ ಇದು ಸಹಾಯವಾಗಲಿದೆ. ಜೊತೆಗೆ ಕೆಸಿಜಿ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆ ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಸಿದ್ಧವಾಗುತ್ತಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಬ್ಬಂದಿ ಕೊರತೆ ಸರಿ ಮಾಡುತ್ತಿದ್ದೇವೆ. ಇನ್ನು ಟ್ರಾನ್ಸಫರ್ ತೊಂದರೆಯನ್ನು ಅನುಭವಿಸುತ್ತಿರುವ ವೈದ್ಯರನ್ನು ಗುತ್ತಿಗೆಯಲ್ಲಿ ತಗೆದುಕೊಳ್ಳಲು ಮುಂದಾಗಿವೆ. ಮುಂದಿನ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಇದಕ್ಕೆ ಸಿಎಂ ಚಾಲನೆ ನೀಡಲಿದ್ದು, ಜನರ ಸೇವೆಗೆ ಸಾಹಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ
ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಹಾಗೂ ಹಾವು ಕಡಿತ ಹೆಚ್ಚಾಗಿದ್ದು ಈ ಕಾರಣದಿಂದ ಪಿಎಚ್ ಸಿ ಸೆಂಟರ್ಗಳಲ್ಲಿ ಆಂಟಿ-ರೇಬೀಸ್ , ಆ್ಯಂಟಿ ಸ್ನೇಕ್ ವೆನಮ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನಲೆ ಬೆಂಗಳೂರಿನ ಎಲ್ಲ ಪಿಎಚ್ ಸಿ ಸೆಂಟರ್ಗಳಲ್ಲಿ ಔಷಧ ಶೇಖರಣೆಗೆಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಆಂಟಿ-ರೇಬೀಸ್ ಚುಚ್ಚುಮದ್ದು ಇರಲೇಬೇಕು ಎಂದು ಸೂಚನೆ ನೀಡಿದ್ದೇನೆ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನಕೂಲಕ್ಕೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೈಟೇಕ್ ಟ್ರಾಮಾ ಕೇರ್ ಸೆಂಟರ್, ಬ್ಲಡ್ ಬ್ಯಾಂಕ್ ಸೇರಿದ್ದಂತೆ, ಬೇರೆ ಬೇರೆ ಚಿಕಿತ್ಸೆಗೆ ಅವಕಾಶ ನೀಡುವ ಗುರಿಯನ್ನು ಹೊಂದಿದ್ದು, ಈ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳ ಕೊನೆಯಲ್ಲಿ ಜನರ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ