ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರ ಕೈಬಿಟ್ಟ ಕಸಾಪ

ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆಗೆ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರ ಕೈಬಿಟ್ಟಿದೆ.

ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರ ಕೈಬಿಟ್ಟ ಕಸಾಪ
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 12, 2022 | 5:58 PM

ಬೆಂಗಳೂರು: ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆಗೆ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರ ಕೈಬಿಟ್ಟಿದೆ. ಕಸಾಪ ಮಹಾಕವಿ ಪಂಪ ರಸ್ತೆ ಹೆಸರು ಬದಲಾಯಿಸಿ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತಾ ಮರುನಾಮಕರಣಕ್ಕೆ ಮುಂದಾಗಿತ್ತು.ಜೈನ ಸಮುದಾಯದಿಂದ ತೀವ್ರ ವಿರೋಧ ಬೆನ್ನಲೆ ಮಹಾಕವಿ ಪಂಪನ ಹೆಸರು ಬದಲಾಯಿಸುವ ಚಿಂತನೆ ಕಸಾಪ ಕೈಬಿಟ್ಟಿದೆ.

ಈ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಹೆಸರಿಡುವ ಬಗ್ಗೆ ಸಲಹೆ ಬಂದಿತ್ತು. ನಾವು ಯಾವುದೇ ಕಾರಣಕ್ಕೆ ಪಂಪ ಮಹಾಕವಿ ರಸ್ತೆ ಹೆಸರು ಬದಲಾಯಿಸಲ್ಲ. ಮಹಾಕವಿ ಪಂಪನ ಹೆಸರೇ ಇರುತ್ತೆ ಎಂದು ತಿಳಿಸಿದರು.

ನಾವು ನಾಡೋಜ ಪಂಪ ಮಹಾಕವಿ ರಸ್ತೆ ಅಂತಾನೇ ಮುಂದುವರೆಸುತ್ತೇವೆ. ಕನ್ನಡಕ್ಕೆ ಜೈನ ಕವಿ ಪಂಪನ ಕೊಡುಗೆ ಅಪಾರವಾಗಿದೆ. ಮಹಾಕವಿ ಪಂಪ ರಸ್ತೆಯ ಹೆಸರು ಬದಲಾವಣೆ ಇಲ್ಲ ಎಂದು ಟಿವಿ9ಗೆ ಹೇಳಿದ್ದಾರೆ.

ಹಿನ್ನೆಲೆ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುವ ಶ್ರೇಯಸ್ಸು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿ ಇರುವ ರಸ್ತೆಯ ಹೆಸರು ಬದಲಿಸಬೇಕು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್​ ಜೋಶಿ  ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ವಿದ್ಯಮಾನವು ಇದೀಗ ಕನ್ನಡ ಬೌದ್ಧಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು., ‘ಹೆಸರು ಬದಲಿಸುವುದು ಸರಿಯಾದ ನಿರ್ಧಾರವಲ್ಲ’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಬೆಂಗಳೂರು ಚಾಮರಾಜಪೇಟೆಯ ಮಿಂಟೊ ಆಸ್ಪತ್ರೆ ಮತ್ತು ಮಕ್ಕಳ ಕೂಟ ಉದ್ಯಾನದ ನಡುವಣ ರಸ್ತೆಗೆ ‘ಸಾಹಿತ್ಯ ಪರಿಷತ್ ರಸ್ತೆ’ ಎಂದು ಹೊಸ ನಾಮಕರಣ ಮಾಡಬೇಕು ಎಂದು ಮಹೇಶ್​ಜೋಶಿ ಕೋರಿದ್ದಾರೆ. ಈ ಇಡೀ ರಸ್ತೆಯನ್ನು ‘ಕನ್ನಡಮಯ’ಗೊಳಿಸಲಾಗುವುದು ಎಂದು ಸಾಹಿತ್ಯ ಪರಿಷತ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂಬ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿತ್ತು.

‘ಹೆಸರು ಬದಲಿಸುವ ಪ್ರಸ್ತಾವ ಕುರಿತು ಚರ್ಚಿಸಲು ಈ ರಸ್ತೆಯಲ್ಲಿರುವ ಇತರ ಸಂಘ ಸಂಸ್ಥೆಗಳು, ಕಚೇರಿಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿದ್ದೇವೆ. ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿವಿ, ಕನ್ನಡ ದಿನಪತ್ರಿಕೆ, ಕೆಲ ಬ್ಯಾಂಕ್​ಗಳು, ಉದ್ಯಾನವನ, ಮಿಂಟೊ ಕಣ್ಣಿನ ಅಸ್ಪತ್ರೆ ಸೇರಿದಂತೆ ಎಲ್ಲರ ಗಮನಕ್ಕೆ ತಂದಿದ್ದೇವೆ’ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಕೆಲವು ದೇಶಗಳಲ್ಲಿ ನಿರ್ದಿಷ್ಟ ಥೀಮ್​ಗಳ ಮೇಲೆ ರಸ್ತೆಗಳನ್ನು ರೂಪಿಸಿದ್ದಾರೆ. ಅಂಥ ಹಲವು ಉದಾಹರಣೆಗಳನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರಸ್ತೆಯು ಕನ್ನಡ ಪ್ರೇಮಿಗಳ ಕಣ್ಣಿಗೆ ಹಬ್ಬದಂತೆ ಆಗುತ್ತದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ಸಾಹಿತ್ಯ ಪರಿಷತ್​ಗೆ ಭೇಟಿ ನೀಡುವಂತೆ ಮಾಡುತ್ತೇವೆ ಎಂದು ಜೋಶಿ ಹೇಳಿದ್ದರು.

ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಖ್ಯಾತ ಸಾಹಿತಿಗಳ ಪ್ರತಿಮೆಗಳು, ಕನ್ನಡದ ಲೈವ್ ಹಾಡುಗಳು ಮತ್ತು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಜನಪ್ರಿಯ ಕನ್ನಡಪರ ಹೇಳಿಕೆಗಳನ್ನು ಅಳವಡಿಸಲಾಗುವುದು ಎಂದು ಸಾಹಿತ್ಯ ಪರಿಷತ್ ಹೇಳಿತ್ತು.

ಪರಿಷತ್​ನ ನಿರ್ಧಾರಕ್ಕೆ ಕರ್ನಾಟಕ ಜೈನ್ ಅಸೋಷಿಯೇಷನ್ ತೀರ್ವ ವಿರೋಧ ವ್ಯಕ್ತಪಡಿಸಿತ್ತು. ಈ ನಿರ್ಧಾರ ಜೈನ್ ಕವಿಗೆ ಮಾಡುವ ಅವಮಾನ ಅಂತಾ ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ ಸಾಹಿತಿಗಳಿಂದಲೂ ವಿರೋಧ ವ್ಯಕ್ತವಾಗಿತ್ತು.

ಕನ್ನಡ ಸಾಹಿತ್ಯದಲ್ಲಿ ಆದಿ ಕವಿ ಪಂಪಾ ಅವರಿಗೆ ವಿಶೇಷ ಅಸ್ಮಿತೆ ಇದೆ. ಜೈನ್ ಕವಿ ಪಂಪನ ಹೆಸರು ಬದಲಾಯಿಸುವ ಚಿಂತನೆ ಕೈಬಿಡಬೇಕೆಂದು ಒತ್ತಾಯ ಮಾಡಿದ್ದರು. ಜೈನ ಸಮುದಾಯ ಕಸಪಾ ಅಧ್ಯಕ್ಷರ ಜೊತೆ ವಾಗ್ವದಕ್ಕೆ ಮುಂದಾಗಿತ್ತು.

ಪಂಪನ ಹೆಸರು ಬದಲಾಯಿಸದಂತೆ ಅಧ್ಯಕ್ಷರ ಜೊತೆ ಮಾತಿನ ಚಕುಮಕಿ ನಡೆದಿತ್ತು. ಬೇರೆ ಬೇರೆ ಜಿಲ್ಲಗಳಿಂದ ಬಂದಿರುವ ಜೈನ್ ಸಮುದಾಯದ ಜಿಲ್ಲಾ ಅಧ್ಯಕ್ಷರುಗಳಿಂದ ಯಾವುದೇ ಕಾರಣಕ್ಕೂ ಜೈನ್ ಕವಿ ಪಂಪನ ಹೆಸರಿನ ರಸ್ತೆ ಬದಲಾಯಿಸದಂತೆ ಕಸಾಪ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Mon, 12 September 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ