ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ! ಜೊತೆಗೆ ಹಲ್ಲೆ
ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು
ಬೆಂಗಳೂರು: ಕೋರಿಕೆ ಸಲ್ಲಿಸಿದರೂ ಕನ್ನಡ ಹಾಡು (Kannada songs) ಹಾಕದೆ ಪಬ್ ಸಿಬ್ಬಂದಿ (pub staff) ಉದ್ಧಟತನ ಮೆರೆದಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಅದೇ ಬಾರ್ ಸಿಬ್ಬಂದಿಯಾದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಇತರೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರುದ್ರೇಶ್ ಎಂಬಾತ ಹಾಗೂ ಆತನ ಸಹೋದರಿ ಹಾಗೂ ಬಾವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ (btm lay out) ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ (Sister birthday party) ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು. ಆದರೆ ಪಬ್ ಸಿಬ್ಬಂದಿ ಅದನ್ನು ನಿರಾಕರಿಸಿದಾಗ ಭಾರತ್ ಮಾತಾ ಕೀ ಜೈ ಎನ್ನುತ್ತಾ ರುದ್ರೇಶ್ ಹೊರ ನಡೆದಿದ್ದರು. ಆದರೂ ಅಟ್ಟಿಸಿಕೊಂಡು ಬಂದ ಪಬ್ ಸಿಬ್ಬಂದಿ ಹೊರಗಡೆ ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:58 pm, Sat, 3 September 22