ಏಕಾಏಕಿ ಉರುಳಿದ ಕಲ್ಲುಬಂಡೆ; ಹಳಿ ತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ಪ್ರಯಾಣಿಕರು ಕೊಂಚದರಲ್ಲೇ ಬಚಾವ್!
ಇಂದು ಮುಂಜಾನೆ 3.50ರ ಸುಮಾರಿಗೆ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಹೇಳಿಕೆ ನೀಡಿದೆ. ಬೆಂಗಳೂರು ವಿಭಾಗದ ತೊಪ್ಪೂರು-ಶಿವಡಿ ಮಾರ್ಗವಾಗಿ ರೈಲು ಹಾದು ಹೋಗುತ್ತಿದ್ದಾಗ ಏಕಾಏಕಿ ಬಂಡೆಗಳು ಬೀಳಲಾರಂಭಿಸಿವೆ. ಇದರಿಂದಾಗಿ ರೈಲು ಹಳಿ ತಪ್ಪಿದೆ.
ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿದ ದರ್ಘಟನೆ ಇಂದು (ನವೆಂಬರ್ 12) ಮುಂಜಾನೆ 3.50ರ ಸಮಯದಲ್ಲಿ ನಡೆದಿದೆ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ತೊಪ್ಪೂರು-ಶಿವಡಿ ಬಳಿ ಸಂಚರಿಸುವಾಗ ಏಕಾಏಕಿ ಕಲ್ಲುಬಂಡೆ ಉರುಳಿಬಿದ್ದ ಪರಿಣಾಮ ರೈಲಿನ 5 ಬೋಗಿಗಳು ಹಳಿ ತಪ್ಪಿವೆ. ಸದ್ಯ ರೈಲಿನ ವೇಗ ಹೆಚ್ಚು ಇರಲಿಲ್ಲ. ಹೀಗಾಗಿ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಅಪಘಾತದ ಬಳಿಕ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ಇಂದು ಮುಂಜಾನೆ 3.50ರ ಸುಮಾರಿಗೆ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಹೇಳಿಕೆ ನೀಡಿದೆ. ಬೆಂಗಳೂರು ವಿಭಾಗದ ತೊಪ್ಪೂರು-ಶಿವಡಿ ಮಾರ್ಗವಾಗಿ ರೈಲು ಹಾದು ಹೋಗುತ್ತಿದ್ದಾಗ ಏಕಾಏಕಿ ಬಂಡೆಗಳು ಬೀಳಲಾರಂಭಿಸಿವೆ. ಇದರಿಂದಾಗಿ ರೈಲು ಹಳಿ ತಪ್ಪಿದೆ. ಆದರೆ, ರೈಲಿನಲ್ಲಿದ್ದ ಎಲ್ಲಾ 2348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಉನ್ನತ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ಭೇಟಿ ನೀಡಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಅವರು ಹೋಗ ಬೇಕಿದ್ದ ಊರುಗಳಿಗೆ ಕಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
Around 3.50 am today, 5 coaches of Kannur-Bengaluru Express derailed b/w Toppuru-Sivadi of Bengaluru Division, due sudden falling of boulders on the train. All 2348 passengers on board are safe, no casualty/injury reported: South Western Railway (SWR)
(Photo source: SWR) pic.twitter.com/Yq9hhxIkQo
— ANI (@ANI) November 12, 2021
ಇದನ್ನೂ ಓದಿ: ಮೈಸೂರು: ಚಾಮುಂಡಿಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ; ಒಂದೂವರೆ ತಿಂಗಳಲ್ಲಿ 1.77 ಕೋಟಿ ರೂ. ಸಂಗ್ರಹ
Published On - 9:16 am, Fri, 12 November 21