AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ವಿದ್ಯುತ್ ದರ ಏರಿಕೆ ವಿರೋಧಿಸಿ ಇಂದು ಕರ್ನಾಟಕ ಬಂದ್: ಯಾವುದು ಓಪನ್​, ಯಾವುದು ಕ್ಲೋಸ್​?

ವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು (ಜೂ.22) ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಘೋಷಿಸಿದ್ದು, ಸಿಪಿಎಂ ಕೂಡ ಬೆಂಬಲ ನೀಡಿದೆ.

Karnataka Bandh: ವಿದ್ಯುತ್ ದರ ಏರಿಕೆ ವಿರೋಧಿಸಿ ಇಂದು ಕರ್ನಾಟಕ ಬಂದ್: ಯಾವುದು ಓಪನ್​, ಯಾವುದು ಕ್ಲೋಸ್​?
ಕರ್ನಾಟಕ ಬಂದ್​
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್| Edited By: |

Updated on:Jun 22, 2023 | 9:12 AM

Share

ಬೆಂಗಳೂರು: ವಿದ್ಯುತ್ ದರ ಏರಿಕೆ(Electricity price hike)ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು (ಜೂ.22)  ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಎಲ್ಲಾ ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳಿಗೆ ಗುರುವಾರ ಕರ್ನಾಟಕ ಬಂದ್ (Karnataka Bandh)​ಗೆ ಕರೆ ಕೊಡಲಾಗಿದ್ದು, ಬೆಂಬಲ ಸೂಚಿಸುವಂತೆ ಕೇಳಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟದಲ್ಲಿ ತೊಂದರೆಯಾಗುವ ನಿರೀಕ್ಷೆಯಿದ್ದು, ಜೊತೆಗೆ ಕರ್ನಾಟಕ ಬಂದ್‌ಗೆ ಸಿಪಿಎಂ ಕೂಡ ಬೆಂಬಲ ನೀಡಿದೆ.

ಕರ್ನಾಟಕದಲ್ಲಿ ವ್ಯಾಪಾರ ಬಂದ್: ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಿಲ್ಲ

ಇನ್ನು ಕರ್ನಾಟಕ ಬಂದ್​ ಕುರಿತು ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಮಾತನಾಡಿ, ‘ಬಂದ್ ಕರೆ ಕೇವಲ ವ್ಯಾಪಾರ ಸಂಸ್ಥೆಗಳಿಗೆ ಮತ್ತು ಸ್ವಯಂಪ್ರೇರಿತವಾಗಿದೆ. ಅಗತ್ಯ ಸೇವೆಗಳಿಗೆ, ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ದಿನದ ಬಂದ್‌ನಿಂದ ವ್ಯಾಪಾರ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತವೆ. ಆದರೆ, ವಿದ್ಯುತ್ ದರದ ಹೆಚ್ಚಳದಿಂದ ಮುಂದೆ ಕೈಗಾರಿಕೆಗಳು ಉಳಿಯುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:Shivamogga: ವಿದ್ಯುತ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ, ಸಂಸದ ಬಿವೈ ರಾಘವೇಂದ್ರ ಪೊಲೀಸ್ ವಶಕ್ಕೆ

ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನ ಕಂಡಿಸಿ, ಇಂದು ಎಲ್ಲಾ ವ್ಯಾಪಾರ ಮತ್ತು ಕೈಗಾರಿಕೆಗಳು ಮುಚ್ಚಲು ನಾವು ವಿನಂತಿಸಿದ್ದೇವೆ. ಕಳೆದ ಎಂಟು ದಿನಗಳಿಂದ ನಾವು ಇದರ ಅನಾನುಕೂಲತೆಯ ಗಂಭೀರತೆಯನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಇನ್ನು ವಿದ್ಯುತ್ ಶುಲ್ಕದಲ್ಲಿ ಹೆಚ್ಚಳ ಆದರೂ ಅಧಿಕಾರಿಗಳು ಅಥವಾ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಶನಿವಾರ ಹೇಳಿದ್ದರು.

ಇಂದು ಕರ್ನಾಟಕ ಬಂದ್: ಯಾರೆಲ್ಲ ಭಾಗವಹಿಸುತ್ತಿದ್ದಾರೆ

ಇಂದು ರಾಜ್ಯದ ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಚಿತ್ರದುರ್ಗ, ಕಲ್ಯಾಣ್ ಕಾಮತಕ, ಹಾವೇರಿ, ಕಾಮತಕ ಜಿಲ್ಲಾ ಚೇಂಬರ್‌ಗಳು ಮತ್ತು ಇತರೆ ಉದ್ಯಮ ಸಂಘಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಆದರೆ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಬಂದ್ ಕರೆಗೆ ಸ್ಪಂದಿಸಿಲ್ಲ.

ಇದನ್ನೂ ಓದಿ:Karnataka Breaking news Live: ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಧಾರವಾಡ ಬಂದ್​ಗೆ ಕರೆ

ವಿದ್ಯುತ್ ದರಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಬಂದ್​ಗೆ ಕರೆ; ಏನಿದು ಸಮಸ್ಯೆ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮೇ 12 ರಂದು ತನ್ನ ಸುಂಕದ ಆದೇಶದಲ್ಲಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳಕ್ಕೆ ಅನುಮೋದಿಸಿದೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಲು, ಕಾಂಗ್ರೆಸ್ ಸರ್ಕಾರ ಹೊಸ ದರವನ್ನು ಹೆಚ್ಚಿಸಿದೆ ಎಂದು ಬಿಜೆಪಿ ಆರೋಪಿಸಿದ್ದರಿಂದ ಈ ವಿಷಯ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಇನ್ನು ರಾಜ್ಯದಲ್ಲಿ ಸಾವಿರಾರು ಜನರು, ಈ ತಿಂಗಳು ವಿಪರೀತ ಬಿಲ್ ಅನ್ನು ಪಡೆದಿದ್ದರು. ಈ ಕುರಿತು ಅದು ಕೆಲವು ದೋಷದಿಂದಾಗಿದೆ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ತಿಳಿಸಿತ್ತು.

ಗೃಹ ಜ್ಯೋತಿ ಯೋಜನೆಯು 200 ಯೂನಿಟ್‌ಗಳಿಗೆ ಮತ್ತು ಅದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ಸಚಿವ ಕೆಜೆ ಜಾರ್ಜ್ ಹೇಳಿದ್ದರು. “ಸರಾಸರಿ ವಿದ್ಯುತ್ ಬಳಕೆ ಮತ್ತು ಶೇಕಡ10 ರಷ್ಟು 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಅದಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗುತ್ತದೆ. ನಿಗದಿಪಡಿಸಿದ ಘಟಕಗಳಿಗಿಂತ ಹೆಚ್ಚು ಬಳಸುವ ಗ್ರಾಹಕರು ಬಳಸಿದ ಹೆಚ್ಚುವರಿ ಘಟಕಗಳಿಗೆ ಪಾವತಿಸಬೇಕಾಗುತ್ತದೆ. 9 ಶೇಕಡ ತೆರಿಗೆಯನ್ನು ಇದರಲ್ಲಿ ಸೇರಿಸಲಾಗುವುದು ಎಂದು ಜಾರ್ಜ್ ಹೇಳಿದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:51 am, Thu, 22 June 23

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ