NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​

Karnataka Bank: ರಿಲಯನ್ಸ್​ ಹೋಂ ಫೈನಾನ್ಸ್, ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ಸಾಲ ವಂಚನೆ ಮಾಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ ಎಂದು ಘೋಷಿಸಿರುವುದಾಗಿ ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 21, 2021 | 11:56 AM

ಬೆಂಗಳೂರು/ಮುಂಬೈ: ದೇಶದ ಖ್ಯಾತ ಉದ್ಯಮ ಕಂಪನಿಗಳಾದ ರಿಲಯನ್ಸ್​ ಹೋಂ ಫೈನಾನ್ಸ್ ಮತ್ತು ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ (Karnataka Bank) 160 ಕೋಟಿ ರೂ ಗೂ ಹೆಚ್ಚು ವಂಚನೆ (fraud) ಮಾಡಿರುವುದು ದೃಢಪಟ್ಟಿದೆ. ಇದನ್ನು ಸ್ವತಃ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ (non performing assets -NPA) ಎಂದು ಘೋಷಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

2015ರಿಂದ ರಿಲಯನ್ಸ್​ ಹೋಂ ಫೈನಾನ್ಸ್ (Reliance Home Finance)​ ಮತ್ತು 2014ರಿಂದ ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ (Reliance Commercial Finance) ಕಂಪನಿಗಳೆರಡೂ ನಮ್ಮ ಜೊತೆ ವ್ಯವಹರಿಸುತ್ತಿದೆ. ಇದೀಗ ವಂಚನೆ ಪ್ರಕರಣಗಳು ನಡೆದಿವೆ ಎಂದು ಕರ್ನಾಟಕ ಮೂಲದ ಖಾಸಗಿ ಬ್ಯಾಂಕ್ ಕರ್ನಾಟಕ ಬ್ಯಾಂಕ್​​ ತಿಳಿಸಿದೆ.

ನಾನಾ ಬ್ಯಾಂಕಿಂಗ್​ ಆರ್ಥಿಕ ಒಪ್ಪಂದಗಳಡಿ ರಿಲಯನ್ಸ್​ ಹೋಂ ಫೈನಾನ್ಸ್ ಸಂಸ್ಥೆಯ ಜೊತೆ ಶೇ. 0.39 ಷೇರು ಪ್ರಮಾಣ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ ಶೇ. 1.98 ರಷ್ಟು ಷೇರು ಪಾಲನ್ನು ಕರ್ನಾಟಕ ಬ್ಯಾಂಕ್ ಹೊಂದಿದೆ. ಇವೆರಡರ ಬಾಬತ್ತಿನಲ್ಲಿ 160 ಕೋಟಿ ರೂ ಸಾಲ ವಂಚನೆ ನಡೆದಿದೆ. ರಿಲಯನ್ಸ್​ ಹೋಂ ಫೈನಾನ್ಸ್ ವತಿಯಿಂದ 21.94 ಕೋಟಿ ರೂ ಸಾಲ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್ 138.41 ಕೋಟಿ ರೂ ಸಾಲ ವಾಪಸಾಗಬೇಕಿದೆ ಎಂದು ಸೆಬಿಗೆ ಸಲ್ಲಿಸಿರುವ ವರದಿಯಲ್ಲಿ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ.

(Karnataka Bank loans over Rs 160 crore to Reliance Home Finance and Reliance Commercial Finance fraud NPA non performing assets)

Syndicate Bank: ಸಿಂಡಿಕೇಟ್ ಬ್ಯಾಂಕ್ ಗ್ರಾಹಕರೇ ಗಮನಿಸಿ, ಜುಲೈ 1ರಿಂದ ಆಗುವಂಥ ಮಹತ್ತರ ಬದಲಾವಣೆಗಳಿವು

Published On - 11:45 am, Mon, 21 June 21

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ