ಐಎಎಸ್ ಅಧಿಕಾರಿ ಅಕ್ರಮ ಕುರಿತು ದಾಖಲೆಗಳ ಬಿಡುಗಡೆ ಮಾಡಿ, ನನ್ನ ಜೀವಕ್ಕೆ ಬೆದರಿಕೆ ಇದೆ ಎಂದ ಭೋವಿ ಅಭಿವೃದ್ಧಿ ನಿಗಮ ಎಂಡಿ ಲೀಲಾವತಿ
ಭೋವಿ ಅಭಿವೃದ್ಧಿ ನಿಗಮದಲ್ಲಿ IAS ಅಧಿಕಾರಿ ಲೀಲಾವತಿ ಸುದ್ದಿಗೋಷ್ಠಿ ನಡೆಸಿದ್ದು, ರವಿ ಎಂಬ ಡೈರೆಕ್ಟರ್ ಇದ್ದಾರೆ ಅವ್ರು ಎರಡು ಮೂರು ಚೆಕ್ ಕಳ್ಳತನ ಮಾಡಿದ್ರು ಹಾಗೂ ಜನರ ಬಳಿ ಹಣ ಇಸ್ಕೊಂಡಿದ್ದಾರೆ. ಐವತ್ತು ಸಾವಿರದಂತೆ ವಸೂಲಿ ಮಾಡಿ ಸುಮಾರು ಮೂರು ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ, ಭೋವಿ ಅಭಿವೃದ್ಧಿ ನಿಗಮ ಎಂಡಿ ಲೀಲಾವತಿ ತಮಗೆ ಜೀವಬೆದರಿಕೆ ಇದ್ದು ಕಿರುಕುಳ ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಹಿನ್ನಲೆ ಮಹಿಳಾ ಐಎಎಸ್ ಅಧಿಕಾರಿ ಲೀಲಾವತಿ ಐಎಎಸ್ ಅಧಿಕಾರಿಯ ಅಕ್ರಮ ಕುರಿತು ದಾಖಲೆ ಬಿಡುಗಡೆಗೆ ಮುಂದಾಗಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ IAS ಅಧಿಕಾರಿ ಲೀಲಾವತಿ ಸುದ್ದಿಗೋಷ್ಠಿ ನಡೆಸಿದ್ದು, ರವಿ ಎಂಬ ಡೈರೆಕ್ಟರ್ ಇದ್ದಾರೆ ಅವ್ರು ಎರಡು ಮೂರು ಚೆಕ್ ಕಳ್ಳತನ ಮಾಡಿದ್ರು ಹಾಗೂ ಜನರ ಬಳಿ ಹಣ ಇಸ್ಕೊಂಡಿದ್ದಾರೆ. ಐವತ್ತು ಸಾವಿರದಂತೆ ವಸೂಲಿ ಮಾಡಿ ಸುಮಾರು ಮೂರು ಕೋಟಿ ಪಡೆದಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ಲೀಲಾವತಿ ಅವರು ಆರೋಪಿಸಿದ್ದು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಷನ್ ಕುಟುಂಬಕ್ಕೆ ಮತ್ತಷ್ಟು ಆಪ್ತರಾದ ಸಬಾ ಆಜಾದ್; ಹೃತಿಕ್ ಮಕ್ಕಳೊಂದಿಗೆ ಫೋಟೋಗೆ ಭರ್ಜರಿ ಪೋಸ್
ಭೋವಿ ಅಭಿವೃದ್ಧಿ ನಿಗಮದ ಎಂಡಿ ಇಂಚಾರ್ಜ್ ಆಗಿದ್ದೇವೆ ಎಂದು ಹೇಳಿಕೊಂಡು ಯೋಗೀಶ್ ಎಂಬುವವರು ನನ್ನ ಕಚೇರಿಗೆ ಬಂದು ಕಿರುಕುಳ ನೀಡಿದ್ದಾನೆ. ಈ ವೇಳೆ ಯೋಗೀಶ್ ನನ್ನ ಚೇರನ್ನು ಎಳೆದಾಡಿ ರಂಪಾಟ ಮಾಡಿದ್ದ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಯೋಗೀಶ್ ಹಾಗೂ ರವಿ ಎಂಬುವವರು ಸೇರಿ ನನಗೆ ಹಿಂಸೆ ನೀಡುತ್ತಿದ್ದಾರೆ. ನಮ್ಮ ಇಲಾಖೆ ಮುಖ್ಯಸ್ಥ ಮಣಿವಣ್ಣನ್ ಅವರಿಗೂ ದೂರು ನೀಡಿದ್ದೇನೆ. ಆದರೆ ಯಾರೂ ಕೂಡ ಇವರ ವಿರುದ್ಧ ಕ್ರಮಕೈಗೊಂಡಿಲ್ಲ. ನನ್ನ ಜೀವಕ್ಕೆ ಬೆದರಿಕೆ ಇದೆ. ತನಗೆ ಏನಾದ್ರು ಆದ್ರೆ ಇವರುಗಳೆ ಹೊಣೆ. ಮಣಿವಣ್ಣನ್ ರವರು ಯೋಗೀಶ್, ಹಾಗೂ ರವಿಯವರು ನನ್ನನ್ನು ಬೇರೆ ಕಡೆ ಹೋಗಿ ಎಂದು ಹೇಳುತ್ತಿದ್ದಾರೆ. ತನಗೆ ವರ್ಗಾವಣೆ ಆದೇಶ ಕೈಗೆ ಸೇರಿಲ್ಲ. ಆದೇಶ ಪ್ರತಿ ಇಲ್ಲದೆ ಹೋಗಿ ಅಂತ ಹೇಳೋದು ಎಷ್ಟು ಸರಿ? ಹೇಳಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:09 pm, Wed, 18 May 22